ಬೆಂಗಳೂರಿನಲ್ಲಿ ಕಲ್ಯಾಣ್ ಜ್ಯುವೆಲರ್ಸ್ ನ ಎರಡು ಹೊಸ ಮಳಿಗೆಗಳನ್ನು ಉದ್ಘಾಟಿಸಿದ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್
ರಾಜಾಜಿ ನಗರ ಮತ್ತು ಬನಶಂಕರಿಯಲ್ಲಿ ಹೊಸ ಶೋರೂಮ್‌ ಗಳನ್ನು ಉದ್ಘಾಟಿಸಲಾಗಿದ್ದು, ಈ ಮಳಿಗೆಗಳು ವಿಶ್ವದರ್ಜೆಯ ಒಳಾಂಗಣವನ್ನು ಹೊಂದಿದೆ ಮತ್ತು ಅದ್ದೂರಿ ಶಾಪಿಂಗ್ ಅನುಭವವನ್ನು ಒದಗಿಸುತ್ತವೆ.
ಈ ಮೂಲಕ ಕಲ್ಯಾಣ್ ಜ್ಯುವೆಲ್ಲರ್ ಬೆಂಗಳೂರಿನ 10 ಸ್ಥಳಗಳಲ್ಲಿ ತನ್ನ ಅಸ್ತಿತ್ವ ಹೊಂದಿದಂತಾಗಿದೆ.
ಉದ್ಘಾಟನೆಯ ಭಾಗವಾಗಿ ಮೆಗಾ ಡಿಸ್ಕೌಂಟ್ ಆಫರ್‌ಗಳನ್ನು ಕಲ್ಯಾಣ್ ಜ್ಯುವೆಲ್ಲರ್ಸ್ ಘೋಷಿಸಿದೆ.
ಬೆಂಗಳೂರು:ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಆಭರಣ ಸಂಸ್ಥೆಗಳಲ್ಲಿ ಒಂದಾಗಿರುವ ಕಲ್ಯಾಣ್ ಜ್ಯುವೆಲರ್ಸ್ ಇಂದು ಬೆಂಗಳೂರಿನ ರಾಜಾಜಿ ನಗರ ಮತ್ತು ಬನಶಂಕರಿಯಲ್ಲಿ ಎರಡು ಹೊಸ ಶೋರೂಮ್‌ಗಳನ್ನು ಆರಂಭಿಸಿದೆ. ಬಾಲಿವುಡ್ ನ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರು ಈ ಎರಡು ಮಳಿಗೆಗಳನ್ನು ಉದ್ಘಾಟಿಸಿದರು. ವಿಶ್ವ ದರ್ಜೆಯ ಒಳಾಂಗಣ ವಾತಾವರಣ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಮಳಿಗೆಗಳು ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ ಒದಗಿಸುವಂತೆ ರೂಪುಗೊಂಡಿವೆ.
ಬನಶಂಕರಿಯ ಶೋರೂಮ್ ಔಟರ್ ರಿಂಗ್ ರಸ್ತೆಯಲ್ಲಿರುವ ಕಾಮಾಕ್ಯ ಥಿಯೇಟರ್ ಸಮೀಪದಲ್ಲಿದ್ದು, ಗ್ರಾಹಕರನ್ನು ಸುಲಭವಾಗಿ ಸೆಳೆಯುವಂತಿವ. ರಾಜಾಜಿನಗರದಲ್ಲಿ ಆರಂಭವಾಗಿರುವ ಮಳಿಗೆಯು ಜಿಡಿ ನಾಯ್ಡು ಮಾಲ್‌ನ ಎದುರಿನ 1ನೇ ಬ್ಲಾಕ್ ಸಿಗ್ನಲ್‌ನಲ್ಲಿದೆ. ಉದ್ಘಾಟನಾ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಭಾಗಿಯಾಗಿತ್ತು. ಬಾಲಿವುಡ್ ಸೂಪರ್‌ಸ್ಟಾರ್‌ ಸೈಫ್ ರನ್ನು ನೋಡಲು ಸಿಕ್ಕಾಪಟ್ಟೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಪ್ರದೇಶದ ಜನರಿಂದ ದೊರೆತ ಆತ್ಮೀಯ ಸ್ವಾಗತದಿಂದ ಉದ್ಘಾಟನಾ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಿತು. ಹೊಸದಾಗಿ ಮರುವಿನ್ಯಾಸಗೊಳಿಸಲಾದ ಮತ್ತು ಸ್ಥಳಾಂತರಗೊಳಿಸಿದ ಶೋರೂಮ್‌ ಗಳ ಉದ್ಘಾಟನೆಯು ಸುತ್ತಲಿನ ಗ್ರಾಹಕರ ಹುಮ್ಮಸ್ಸು ಹೆಚ್ಚಿಸುವಲ್ಲಿ ಮತ್ತು ನಿರೀಕ್ಷೆ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ.
ನೆರೆದಿದ್ದ ಅಪಾರ ಸಂಖ್ಯೆಯ ಜನರನ್ನು ಉದ್ದೇಶಿಸಿ ಮಾತನಾಡಿದ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಅವರು, “ನಾನು ಬಹಳ ಸಂತೋಷದದಿಂದ ಕಲ್ಯಾಣ್ ಜ್ಯುವೆಲರ್ಸ್ ಶೋ ರೂಮ್ ಉದ್ಘಾಟನೆ ಮಾಡಲು ಆಗಮಿಸಿದ್ದೇನೆ. ಕಲ್ಯಾಣ್ ಜ್ಯುವೆಲರ್ಸ್ ಅನ್ನು ಪ್ರತಿನಿಧಿಸುವುದು ನನಗೆ ಬಹಳ ದೊಡ್ಡ ಗೌರವವಾಗಿದೆ. ಯಾಕೆಂದರೆ ಕಲ್ಯಾಣ್ ಜ್ಯುವೆಲ್ಲರ್ಸ್ ನಂಬಿಕೆ, ಪಾರದರ್ಶಕತೆ ಮತ್ತು ಗ್ರಾಹಕ ಕೇಂದ್ರಿತ ಸೇವಾ ತತ್ವಗಳ ಮೇಲೆ ದೃಢವಾಗಿ ನಿಂತಿರುವ ಅತ್ಯುತ್ತಮ ಬ್ರ್ಯಾಂಡ್ ಆಗಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ನ ಉಲ್ಲಾಸಕರ ಸೇವೆ ಲಭ್ಯವಾಗುವ ಶಾಪಿಂಗ್ ಅನುಭವ ವನ್ನು ಗ್ರಾಹಕರು ಆನಂದಿಸುತ್ತಾರೆ ಎಂದು ನಾನು ನಂಬಿದ್ದೇನೆ. ಜೊತೆಗೆ ಕಂಪನಿಯು ನೀಡುತ್ತಿರುವ ವೈವಿಧ್ಯ ಮಯ ಆಭರಣ ಸಂಗ್ರಹಗಳನ್ನು ಕೂಡ ಗ್ರಾಹಕರು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದರು.