  : ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಡಾ.ಪಿ.ಎನ್.ರವೀಂದ್ರ
ಚಿಕ್ಕಬಳ್ಳಾಪುರ:ಶ್ರೀ ವಿಶ್ವಕರ್ಮ ಜಯಂತಿಯ ದಿನಾಚರಣೆಯನ್ನು ಸೆ.17ರಂದು ಹೆಚ್ಚಿನ ಜನರು ಆಗಮಿಸಿ ಅರ್ಥಪೂರ್ಣವಾಗಿ ಆಚರಿಸಲು ನೆರವಾಗಬೇಕು ಎಂದು ಪಿ.ಎನ್.ರವೀಂದ್ರ ಮನವಿ ಮಾಡಿದರು.
ಜಿಲ್ಲಾಡಳಿತ, ಭವನದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ “ಶ್ರೀ ವಿಶ್ವಕರ್ಮ ಜಯಂತಿ” ಆಚರಣೆಯ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಸಮುದಾಯದ ಮುಖಂಡರ ಸಲಹೆಗಳನ್ನು ಸ್ವೀಕರಿಸಿ ನಂತರ ಮಾತನಾಡಿದರು.
ಇದನ್ನೂ ಓದಿ: : ವಿಶ್ವಕರ್ಮ ಯೋಜನೆ ಪ್ರಕ್ರಿಯೆ ವೇಗಗೊಳಿಸಲು ಬಿಜೆಪಿ ಮುಖಂಡರಿಂದ ಮನವಿ
ಶ್ರೀ ವಿಶ್ವಕರ್ಮ ಜಯಂತಿಯನ್ನು ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಿಕೊಂಡು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕಿದೆ.
ಕಾರ್ಯಕ್ರಮದ ದಿನದಂದು ವೇದಿಕೆ ಸಿದ್ಧತೆ, ಆಹ್ವಾನ ಪತ್ರಿಕೆಗಳ ಮುದ್ರಣ, ವಿತರಣೆ, ಭಾಷಣ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ಹಿರಿಯ ಮುಖಂಡರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ.
ಜಯಂತಿ ಕಾರ್ಯಕ್ರಮದ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿದರು. ಜೊತೆಗೆ ಜಯಂತಿ ಆಚರಣೆಯ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಯಶಸ್ವಿ ಯಾಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷ ಸಿ.ಬಿ.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ಹರೀಶ್ ಕುಮಾರ್, ಸಹಾಯ ಕಾರ್ಯದರ್ಶಿ ಜಯ ನರೇಂದ್ರ ಕುಮಾರ್, ಖಜಾಂಚಿ ಸಿಜಿ ಮುರಳಿಧರ್, ಸಹ ಖಜಾಂಚಿ ಜೆ.ಪಿ ಸಂತೋಷ್, ಸಂಘಟನಾ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯಚಾರಿ, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷ ಸುಬ್ಬ ಲಕ್ಷ್ಮಿ ಬ್ರಹ್ಮಚಾರಿ, ಗೌರವಾಧ್ಯಕ್ಷ ಜಮುನಾ ರಾಮಕೃಷ್ಣಚಾರಿ, ಉಪಾಧ್ಯಕ್ಷ ಪಾರಿಜಾತ ಪರಮೇಶ್ವರ ಚಾರಿ, ಪ್ರಧಾನ ಕಾರ್ಯದರ್ಶಿ ಪುಷ್ಪವ ತಮ್ಮ ವರದಾಚಾರಿ, ಸಹಕಾರ್ಯದರ್ಶಿ ವಿನುತ ಲಕ್ಷ್ಮೀನಾರಾಯಣ ಚಾರಿ, ಖಜಾಂಚಿ ಭಾರತೀ ನವೀನ್ ಕುಮಾರ್, ಸಂಚಾಲಕರು ತೇಜಸ್ವಿನಿ ಅನಿಲ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತ ರಿದ್ದರು.