 : ಪ್ರಜಾಪ್ರಭುತ್ವ ದಿನಾಚರಣೆ; ಸಂಪೂರ್ಣ ಸಹಭಾಗಿತ್ವ
ತುಮಕೂರು:ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೂ 2500 ಕಿಲೋ ಮೀಟರ್ ಉದ್ದದ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯುತ್ತಿದ್ದು,  ಅಲ್ಪಸಂಖ್ಯಾತ ಸಮುದಾಯದ ಸಂಪೂರ್ಣ ಸಹಭಾಗಿತ್ವ ನೀಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್ ಅಹಮದ್ ತಿಳಿಸಿದರು.
ಇದನ್ನೂ ಓದಿ: : ಸೆ.14ರಂದು ರಾಜ್ಯಗಳ ಅಸ್ಮಿತೆ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ
ಸಭೆಯಲ್ಲಿ ಮಾತನಾಡಿ, ಈ ಕಾರ್ಯಕ್ರಮ ಗಿನ್ನಿಸ್ ರೆಕಾರ್ಡಿಗೆ ಹೋಗುವ ಸಂಭವವಿದೆ. ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಜ್ಜನಕುಂಟೆ ಗ್ರಾಮದಿಂದ ಪ್ರಾರಂಭವಾಗಿ ತುಮಕೂರು ತಾಲೂಕು ಹಿರೇಹಳ್ಳಿವರೆಗೂ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾದ್ಯಂತ 90 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಬೃಹತ್ ಮಾನವ ಸರಪಳಿ ನಿರ್ಮಾಣದಲ್ಲಿ ಜಿಲ್ಲೆಯ 5000ಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾ ಯದವರನ್ನು ಸೇರಿಸಲು ಗುರಿ ಹೊಂದಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ನಿಸಾರ್ ಅಹಮದ್ ತಿಳಿಸಿದರು.
ಸಭೆಯಲ್ಲಿ ಆಡಿಟರ್ ಸುಲ್ತಾನ್ ಮಹಮದ್, ವಕ್ಫ್ ಅಧ್ಯಕ್ಷ ಅಫ್ರೋಜ್ ಅಹಮದ್, ಸಿಪಿಎಂನ ಸೈಯದ್ ಮುಜೀಬ್, ತಾಜುದ್ದೀನ್, ಮುಜಮಿಲ್, ಅಮೀಮ್, ಕಲೀಂಉಲ್ಲಾ ಉಪಸ್ಥಿತರಿದ್ದರು.