  : ಭಾರತ ಜಗತ್ತಿಗೆ ಎಂದೂ ಮರೆಯಲಾರದ ಪಾಠಗಳನ್ನು ಹೇಳಿ ಕೊಟ್ಟಿದೆ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ
ತುಮಕೂರು:ಎಲ್ಲಿ ತ್ಯಾಗ, ಸೇವೆ ಇರುವುದಿಲ್ಲವೋ ಅಲ್ಲಿ ಯಾವ ಉಪನಿಷತ್, ಸ್ವಾಮಿ ವಿವೇಕಾನಂದರು ಇರುವು ದಿಲ್ಲ ಎಂದು ಗದಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಐತಿಹಾಸಿಕ ಚಿಕಾಗೋ ಪ್ರಥಮ ವಿಶ್ವಧರ್ಮ ಸಮ್ಮೇಳನದ ಸವಿಸ್ಮರಣೆ ಹಾಗೂ ಸ್ವಾಮಿ ವೀರೇಶಾನಂದ ಸರಸ್ವತಿ ಅವರ ಲೇಖನಗಳ ಗುಚ್ಛ “ವಿವೇಕಧಾರಾ’ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿ, ವಿವೇಕಾನಂದ ವಿಚಾರಧಾರೆಗಳು ಕೇವಲ ಉಪನ್ಯಾಸಕಲ್ಲ, ಅದನ್ನು ಜೀವನದಲ್ಲಿ ಅಳವಡಿಸಿ ಕೊಳ್ಳವುದು ಅನಿವಾರ್ಯತೆ ಇರಬೇಕು. ಐವತ್ತು ವರ್ಷದಿಂದ ಆಶ್ರಮಕ್ಕೆ ಬರುವರು ಇವತ್ತು ಹಾಗೇ ಇದ್ದಾರೆ ಎಂದರು.
ಇದನ್ನೂ ಓದಿ:  : ಆಟೋ ಬುಕ್ ಮಾಡಿ ರದ್ದು ಮಾಡಿದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಚಾಲಕ ಅರೆಸ್ಟ್‌
ಭಾರತ ದೇಶವು ಜಗತ್ತಿಗೆ ಎಂದೂ ಮರೆಯಲಾರದ ಪಾಠಗಳನ್ನು ಹೇಳಿಕೊಟ್ಟಿದೆ. ಬೇರೆ ಯಾರೂ ಇಂತಹ ಪಾಠ ಗಳನ್ನು ಹೇಳಿಕೊಟ್ಟಿಲ್ಲ. ನಿಮ್ಮ ಪ್ರತಿ ಅನುಭವವನ್ನು ವಿಶ್ಲೇಷಿಸಿ ಅದರಲ್ಲಿ ಕೆಲವು ಸಿಹಿ, ಕಹಿ ಇರುತ್ತವೆ. ಯಾವುದು ನಿತ್ಯ ನೂತನವಾಗಿ ಕಾಣುತ್ತೊ ಅದು ಸಿಹಿಯಾಗಿರುತ್ತೆ. ಯಾರಿಗೆ ಭಾರತೀಯ ಚಿಂತನೆಯ ಪರಿಚಯವೇ ಇರುವು ದಿಲ್ಲವೋ ಅವರಿಗೆ ಸಿಹಿ, ಕಹಿ ಸುಲಭವಾಗಿ ಗೊತ್ತಾಗುವುದಿಲ್ಲ. ಹಾಗಾಗಿ, ವಿವೇಕಾನಂದರ ಚಿಂತನೆಗಳು ಸದಾ ನಿತ್ಯ ನೂತನವಾಗಿ ನಮ್ಮೊಂದಿಗಿವೆ ಎಂದರು.
ಸಾಧಕರಿಗೆ ಪುರಸ್ಕಾರ:ನಾಡೋಜ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಆಧ್ಯಾತ್ಮ ಚಿಂತಕರಾದ ಲಲಿತಾ ಶಾಸ್ತ್ರಿ, ರಾಷ್ಟ್ರಚಿಂತಕ ಡಾ.ಬಾಬು ಕೃಷ್ಣಮೂರ್ತಿ ಅವರನ್ನು ಆಶ್ರಮದ ವತಿಯಿಂದ ಸತ್ಕರಿಸಲಾಯಿತು.
ವೇದಿಕೆಯಲ್ಲಿ ಸ್ವಾಮಿ ಪ್ರಕಾಶನಂದ ಸ್ವಾಮೀಜಿ, ಬ್ರಹನಿಷ್ಠಾನಂದ ಸ್ವಾಮೀಜಿ, ಸ್ವಾಮಿ ಅಭಯಾನಂದ, ಸ್ವಾಮಿ ಧೀರಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ತುಮಕೂರು ವಿವಿ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೃತಿಯನ್ನು ಪರಿಚಯಿಸಿದರು. ಆಶ್ರಮದ ಕಾರ್ಯದರ್ಶಿ ಸ್ವಾಮಿ ಪರಮಾನಂದ ಸ್ವಾಗತಿಸಿದರು.