: ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ ಗೆ ಸೀಮಿತ ಅವಧಿಗೆ ಅತ್ಯಾಕರ್ಷಕ ರಿಯಾಯಿತಿ ಬೆಲೆ ಘೋಷಿಸಿದ ಸ್ಯಾಮ್‌ಸಂಗ್
ಗ್ಯಾಲಕ್ಸಿ ಎಸ್24 ಅಲ್ಟ್ರಾದ ಹೊಸ ಆರಂಭಿಕ ಬೆಲೆ ರೂ.109999
ಬೆಂಗಳೂರು:ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ತನ್ನ ಪ್ರಮುಖ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎಸ್24 ಅಲ್ಟ್ರಾಗೆ ಅತ್ಯಾಕರ್ಷಕ ರಿಯಾಯಿತಿ ಬೆಲೆಯನ್ನು ಘೋಷಿಸಿದೆ.
ಇದೇ ತಿಂಗಳು ಸೆ.12ರಿಂದ ಈ ಸೀಮಿತ ಅವಧಿಯ ಆಫರ್‌ ಆರಂಭವಾಗಲಿದ್ದು, ಗ್ಯಾಲಕ್ಸಿ ಎಸ್24 ಅಲ್ಟ್ರಾ ಕೇವಲ ರೂ. 109999ಕ್ಕೆ ದೊರೆಯಲಿದೆ. ಸ್ಮಾರ್ಟ್‌ಫೋನ್‌ನ ಮೂಲ ಆರಂಭಿಕ ಬೆಲೆ ರೂ. 129999 ಎಂಬುದನ್ನು ಗಮನ ದಲ್ಲಿ ಇಟ್ಟುಕೊಳ್ಳಬಹುದು. ಈ ವಿಶೇಷ ಬೆಲೆಯಲ್ಲಿ ರೂ. 8000ರ ಇನ್ ಸ್ಟಾಂಟ್ ಕ್ಯಾಶ್ ಬ್ಯಾಕ್, ರೂ. 12000ರ ಹೆಚ್ಚುವರಿ ಅಪ್‌ಗ್ರೇಡ್ ಬೋನಸ್ ಒಳಗೊಂಡಿರುತ್ತದೆ. ಜೊತೆಗೆ ಗ್ರಾಹಕರು ರೂ. 12000ರ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು. ವಿಶೇಷವಾಗಿ ಗ್ರಾಹಕರು 24 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯವನ್ನೂ ಪಡೆಯಬಹುದಾಗಿದೆ.
ಗ್ಯಾಲಕ್ಸಿ ಎಸ್24 ಅಲ್ಟ್ರಾ ಮೊಬೈಲ್ ಎಐಯ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಗ್ಯಾಲಕ್ಸಿ ಎಐ ಮೂಲಕ ಗ್ರಾಹಕರಿಗೆ ಹಲವಾರು ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ಫೋನ್‌ ಮೂಲಭೂತ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸುತ್ತದೆ. ಜೊತೆಗೆ ಲೈವ್ ಟ್ರಾನ್ಸ್‌ ಲೇಟ್‌ ಫೀಚರ್ ಮೂಲಕ ತಕ್ಷಣವೇ ಫೋನ್ ಕಾಲ್ ನ ವಾಯ್ಸ್ ಮತ್ತು ಪಠ್ಯವನ್ನು ಅನುವಾದ ಮಾಡುವ ಮೂಲಕ ಸಂವಹನ ವನ್ನು ಉತ್ತಮಗೊಳಿಸುತ್ತದೆ.
ಇಂಟರ್ ಪ್ರಿಟರ್ ಫೀಚರ್ ಮೂಲಕ ಲೈವ್ ಸಂಭಾಷಣೆಗಳನ್ನು ಸ್ಪ್ಲಿಟ್ ಸ್ಕ್ರೀನ್ ಡಿಸ್ ಪ್ಲೇ ಸೌಲಭ್ಯದ ಮೂಲಕ ತಕ್ಷಣವೇ ಅನುವಾದಿಸಬಹುದು. ಫೋನ್ ಡೇಟಾ ಅಥವಾ ವೈ-ಫೈ ಇಲ್ಲದೆಯೂ ಈ ಫೋನ್ ನಲ್ಲಿ ಸಂದೇಶಗಳು ಮತ್ತು ಇತರ ಹಲವು ಆಪ್ ಗಳು ಕಾರ್ಯನಿರ್ವಹಿಸುತ್ತದೆ. ಜೊತೆಗೆ ಚಾಟ್ ಅಸಿಸ್ಟ್ ಫೀಚರ್ ಸೂಕ್ತವಾದ ಸಂವಹ ನದ ಟೋನ್ ಗಳನ್ನು ಹೊಂದಲು ಸೂಚನೆ ನೀಡುತ್ತದೆ. ಆ ಮೂಲಕ ಸಂವಹನವನ್ನು ನೀವು ಉದ್ದೇಶಿಸಿದ ರೀತಿ ಯಲ್ಲಿ ನಡೆಸಬಹುದು. ಎಐ ಆಧರಿತ ಸ್ಯಾಮ್ ಸಂಗ್ ಕೀಬೋರ್ಡ್‌ ಮೂಲಕವೂ ಹಿಂದಿ ಸೇರಿದಂತೆ ಇತರ 13 ಪ್ರಾದೇಶಿಕ ಭಾಷೆಗಳಿಗೆ ತಕ್ಷಣವೇ ಸಂದೇಶಗಳನ್ನು ಅನುವಾದಿಸಬಹುದು.
ಸ್ಯಾಮ್‌ಸಂಗ್ ನೋಟ್ಸ್‌ ನಲ್ಲಿ ನೋಟ್ ಅಸಿಸ್ಟ್ ಫೀಚರ್ ಮೂಲಕ ಬಳಕೆದಾರರು ಎಐ ಮೂಲಕ ರಚಿಸಲಾಗುವ ಸಾರಾಂಶಗಳನ್ನು ಹೊಂದಬಹುದು. ಪೂರ್ವ-ನಿರ್ಮಿತ ಸ್ವರೂಪಗಳಲ್ಲಿ ಟಿಪ್ಪಣಿಗಳನ್ನು ನೋಟ್ ಮಾಡಿಟ್ಟು ಕೊಳ್ಳುವ ಟೆಂಪ್ಲೇಟ್‌ ಗಳನ್ನು ರಚಿಸಬಹುದು. ಧ್ವನಿ ರೆಕಾರ್ಡಿಂಗ್‌ ಮಾಡಲು ಬಹು ಸ್ಪೀಕರ್‌ಗಳಿದ್ದರೂ ಸಹ ಧ್ವನಿಮುದ್ರಣಗಳನ್ನು ಲಿಪ್ಯಂತರಿಸಲು, ಸಾರಾಂಶ ರಚಿಸಲು ಮತ್ತು ಭಾಷಾಂತರಿಸಲು ಎಐ ಹಾಗೂ ಸ್ಪೀಚ್-ಟು-ಟೆಕ್ಸ್ಟ್ ತಂತ್ರಜ್ಞಾನವನ್ನು ಬಳಸಿ ರಚಿಸಿರುವ ಟ್ರಾನ್ಸ್‌ ಕ್ರಿಪ್ಟ್ ಅಸಿಸ್ಟ್ ಫೀಚರ್ ಬಳಸಬಹುದು. ಗ್ಯಾಲಕ್ಸಿ ಎಸ್24 ಅಲ್ಟ್ರಾದಲ್ಲಿ ಗೂಗಲ್ ಜೊತೆಗೆ ‘ಸರ್ಕಲ್ ಟು ಸರ್ಚ್’ ಫೀಚರ್ ಅನ್ನು ಸಹ ಪಡೆಯಬಹುದು.
ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಮಾರ್ಟ್ ಫೋನ್ ಪ್ರೊ ವಿಶುವಲ್ ಎಂಜಿನ್ ಫೀಚರ್ ಹೊಂದಿದೆ. ಇದು ಎಐ ಆಧರಿತ ಸಾಧನಗಳ ಸಮಗ್ರ ಗುಂಪು ಆಗಿದ್ದು, ಫೋಟೋ ಸೆರೆಹಿಡಿಯುವ ರೀತಿಯನ್ನೇ ಬದಲಿಸಲಿದೆ ಮತ್ತು ಸೃಜನಶೀಲ ವಾಗಿ ಫೋಟೋ ಸಿದ್ಧಗೊಳಿಸಲು ಅನುವು ಮಾಡಿ ಕೊಡಲಿದೆ. 2x, 3x, 5x ನಿಂದ 10x ವರೆಗೆ ಜೂಮ್ ಮಟ್ಟಗಳನ್ನು ಹೊಂದಿಸಲು ನೆರವಾಗುವ 50 ಎಂಪಿ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುವ 5x ಆಪ್ಟಿಕಲ್ ಜೂಮ್ ಲೆನ್ಸ್‌ ಹೊಂದಿರುವ ಕ್ವಾಡ್ ಟೆಲಿ ಸಿಸ್ಟಮ್ ಅನ್ನು ಗ್ಯಾಲಕ್ಸಿ ಎಸ್24 ಅಲ್ಟ್ರಾ ಹೊಂದಿದೆ. ಅಡಾಪ್ಟಿವ್ ಪಿಕ್ಸೆಲ್ ಸೆನ್ಸರ್ ನಿಂದ ಇಂಥಾ ಸೌಲಭ್ಯ ಒದಗಿಸಿಸಲಾಗಿದೆ.
ಹೆಚ್ಚಿನ ಡಿಜಿಟಲ್ ಜೂಮ್‌ ಮೂಲಕ 100x ನಷ್ಟು ಜೂಮ್ ಮಾಡಿದರೂ ಫೋಟೋ ಸ್ಫಟಿಕ ಸ್ಪಷ್ಟವಾಗಿ ಮೂಡಿ ಬರುತ್ತದೆ. ಇದರಲ್ಲಿ ನೈಟೋಗ್ರಫಿ ಸಾಮರ್ಥ್ಯಗಳನ್ನು ಅಪ್‌ಗ್ರೇಡ್ ಮಾಡಲಾಗಿದ್ದು, ಗ್ಯಾಲಕ್ಸಿ ಎಸ್24 ಅಲ್ಟ್ರಾ ಸ್ಪೇಸ್ ಜೂಮ್‌ನಲ್ಲಿ ಚಿತ್ರೀಕರಿಸಲಾದ ಫೋಟೋಗಳು ಮತ್ತು ವೀಡಿಯೋಗಳು ಯಾವುದೇ ಪರಿಸ್ಥಿತಿಗಳಲ್ಲಿಯೂ ಅದ್ಭುತವಾಗಿ ಮೂಡಿ ಬರುತ್ತವೆ. ಜೂಮ್ ಮಾಡಿದರೂ ಸಹ ಅದ್ಭುತವಾಗಿ ಕಾಣಿಸುತ್ತವೆ. ಗ್ಯಾಲಕ್ಸಿ ಎಸ್24 ಅಲ್ಟ್ರಾದ ಪಿಕ್ಸೆಲ್ ಗಾತ್ರ ಈಗ 1.4 μm ಆಗಿದ್ದು ಶೇ.1. 60 ದೊಡ್ಡದಾಗಿದೆ. ಅದರಿಂದಾಗಿ ಕಡಿಮೆ ಬೆಳಕಿನ ಪರಿಸ್ಥಿತಿ ಗಳಲ್ಲಿಯೂ ಹೆಚ್ಚು ಬೆಳಕಿನ ಫೋಟೋಗಳನ್ನು ತೆಗೆಯಲು ಸಾಧ್ಯ ಆಗುತ್ತದೆ.
ಗ್ಯಾಲಕ್ಸಿ ಎಸ್24 ಅಲ್ಟ್ರಾ 6.8 ಇಂಚಿನ ಫ್ಲಾಟ್ ಡಿಸ್ ಪ್ಲೇ ಹೊಂದಿದೆ. ಈ ಡಿಸ್ ಪ್ಲೇಯನ್ನು ಕೇವಲ ವೀಕ್ಷಣೆಗೆ ಮಾತ್ರವಲ್ಲದೆ ಕಾರ್ಯನಿರ್ವಹಣೆ ಉದ್ದೇಶದಿಂದಲೂ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಗ್ಯಾಲಕ್ಸಿಗಾಗಿ ರೂಪುಗೊಳಿಸಿರುವ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ಹೊಂದಿದ್ದು, ಇದು ಅತ್ಯಪೂರ್ವ ಎಐ ಪ್ರಕ್ರಿಯೆಯಗಳನ್ನು ಸಾಧ್ಯವಾಗಿಸುವ ಅದ್ಭುತ ಎನ್ ಪಿ ಯು ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ 2600nits ನಷ್ಟು ಗರಿಷ್ಠ ಬ್ರೈಟ್ ನೆಸ್ ಅನ್ನು ಹೊಂದಿದೆ.
ಗ್ಯಾಲಕ್ಸಿ ಎಸ್24 ಅಲ್ಟ್ರಾ ನಲ್ಲಿರುವ ಕಾರ್ನಿಂಗ್ ® ಗೊರಿಲ್ಲಾ® ಆರ್ಮರ್ ಅನ್ನು ಈ ಸ್ಮಾರ್ಟ್ ಫೋನ್ ಉತ್ತಮ ಬಾಳಿಕೆ ಬರಲು ದೃಗ್ವೈಜ್ಞಾನಿಕವಾಗಿ ರೂಪಿಸಲಾಗಿದೆ. ಈ ಮೂಲಕ ಅತಿ ಹೆಚ್ಚು ಬೆಳಕು ಇರುವ ಪರಿಸ್ಥಿತಿ ಗಳಲ್ಲಿಯೂ ಶೇ.75ರಷ್ಟು ಪ್ರತಿಫಲನವನ್ನು ಕಡಿಮೆ ಮಾಡುತ್ತದೆ. ಉತ್ತಮವಾಗಿ ಡಿಸ್ ಪ್ಲೇ ಕಾಣುವಂತೆ ಮಾಡುತ್ತದೆ. ಸುಗಮವಾದ, ಆರಾಮದಾಯಕವಾದ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ.
ಈ ಸ್ಮಾರ್ಟ್ ಫೋನ್ ಟೈಟಾನಿಯಂ ಗ್ರೇ, ಟೈಟಾನಿಯಂ ವೈಲೆಟ್, ಟೈಟಾನಿಯಂ ಬ್ಲಾಕ್ ಮತ್ತು ಟೈಟಾನಿಯಂ ಹಳದಿ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಟೈಟಾನಿಯಂ ಫ್ರೇಮ್ ಅನ್ನು ಒಳಗೊಂಡಿರುವ ಮೊದಲ ಗ್ಯಾಲಕ್ಸಿ ಫೋನ್ ಆಗಿದ್ದು, ದೀರ್ಘ ಬಾಳಿಕೆ ಮತ್ತು ದೀರ್ಘಾಯುಷ್ಯ ಹೊಂದುವಂತೆ ವಿನ್ಯಾಗೊಂಡಿದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ತೆಳುವಾದ ದೇಹವನ್ನು ಹೊಂದಿದ್ದು, ಆರಾಮದಾಯಕವಾಗಿ ಹಿಡಿಯಬಹುದಾಗಿದೆ. ಪ್ರಯಾಣ ಮಾಡುವಾಗಲೂ ಸುಲಭವಾಗಿ ಹಿಡಿಯಬಹುದಾಗಿದ್ದು, ಖುಷಿಯ ಅನುಭವ ನೀಡುತ್ತದೆ.
ಗ್ಯಾಲಕ್ಸಿ ಎಸ್24 ಅಲ್ಟ್ರಾ ಉತ್ಪನ್ನದ ಜೀವಿತಾವಧಿಯನ್ನು ವಿಸ್ತರಿಸಲು ಸ್ಯಾಮ್ ಸಂಗ್ ಉದ್ದೇಶಿಸಿದೆ. ಅದಕ್ಕೆ ಪೂರಕವಾಗಿ ಬಳಕೆದಾರರು ತಮ್ಮ ಗ್ಯಾಲಕ್ಸಿ ಸಾಧನಗಳನ್ನು ಸುದೀರ್ಘ ಕಾಲ ಆನಂದದಿಂದ, ನಿರಾತಂಕವಾಗಿ ಬಳಸಲು ಸಹಾಯ ಮಾಡಲು ಏಳು ಜನರೇಷನ್ ಗಳ ಓಎಸ್ ಅಪ್ಡೇಟ್ ಗಳನ್ನು ಮತ್ತು ಏಳು ವರ್ಷಗಳ ಭದ್ರತಾ ಅಪ್ ಡೇಟ್ ಗಳನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಸ್24 ಅಲ್ಟ್ರಾ ಅನ್ನು ಸ್ಯಾಮ್‌ಸಂಗ್ ನಾಕ್ಸ್‌ ತಂತ್ರಜ್ಞಾನದ ಮೂಲಕ ಸುರಕ್ಷಿತಗೊಳಿಸಲಾಗಿದ್ದು. ಗ್ರಾಹಕರ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ರಕ್ಷಿಸುತ್ತದೆ. ಸಂಪೂರ್ಣ ವಾಗಿ ಹಾರ್ಡ್‌ವೇರ್ ರಕ್ಷಣೆ, ತಕ್ಷಣವೇ ಅಪಾಯ ಪತ್ತೆ ಮತ್ತು ಸಹಯೋಗದ ರಕ್ಷಣೆ ಮುಂತಾದ ಸೌಲಭ್ಯವನ್ನು ಒದಗಿಸುತ್ತದೆ.
ಗ್ಯಾಲಕ್ಸಿ ಎಸ್24 ಅಲ್ಟ್ರಾ ಎಲ್ಲಾ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಅಂಗಡಿಗಳಲ್ಲಿ ಲಭ್ಯವಿದೆ