ಅಗ್ಗದ ದರದ ಶಿಕ್ಷಣಸಂಸ್ಥೆಯೊಂದು (ಅಫೋರ್ಡ ಬಲ್ ಸ್ಕೂಲ್) ಸಾಲ ಪಡೆಯುವುದು ಹೇಗೆ?
ಮಾನದಂಡಗಳು ಮತ್ತು ಬಳಕೆಯ ಉದ್ದೇಶಗಳು/ ವರ್ತನಾದ ಸಹ-ಸಂಸ್ಥಾಪಕ ಮತ್ತು ಸಿಇಒ ಸ್ಟೀವ್ ಹಾರ್ಡ್ ಗ್ರೇವ್, ಸಾಲವಾಗಿ ಪಡೆದ ಹಣವನ್ನು ಶಿಕ್ಷಣ ಸಂಸ್ಥೆಗಳ ಪ್ರವರ್ತಕರು ಹಲವಾರು ಉದ್ದೇಶಗಳಿಗಾಗಿ ಬಳಸಬಹು ದಾದರೂ, ಈ ಹಣದ ಮೂಲಕ ಎರವಲು ಪಡೆದ ಉದ್ದೇಶಗಳನ್ನು ಪೂರೈಸಲಾಗಿದೆಯೇ ಮತ್ತು ಸಕಾಲಕ್ಕೆ ಸಾಲ ಮರು ಪಾವತಿಸಲು ಅಗತ್ಯವಾದ ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.ಶ್ರೀಮಂತ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳ ಪಾಲಿಗೆ ಅಗ್ಗದ ದರದ ಶಿಕ್ಷಣ ಸಂಸ್ಥೆಗಳು(ಅಫೋರ್ಡಬಲ್ ಸ್ಕೂಲ್ಸ್) ಉಜ್ವಲ ಭವಿಷ್ಯದ ಜೀವನಾಡಿಯಾಗಿವೆ.
ಅವುಗಳು ವಿದ್ಯಾರ್ಥಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತವೆ. ಇಂತಹ ಶಾಲೆಗಳು/ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳು, ದೊಡ್ಡ ನಗರಗಳು ಮತ್ತು ಪಟ್ಟಣಗಳಲ್ಲಿನ ಸುಸಜ್ಜಿತ ಶಾಲೆಗಳಿಂದ ಹೊರಬರುವವ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು, ಈ ಶಾಲೆಗಳು ಸಮರ್ಪಕ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಉತ್ತಮ, ಅರ್ಹ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಅತ್ಯಗತ್ಯ.
ಈ ನಾನಾ ಉದ್ದೇಶಗಳಿಗೆ ಹೂಡಿಕೆ ಮಾಡಲು ಶಾಲೆಗಳಿಗೆ ಬಂಡವಾಳದ ಅಗತ್ಯವಿರುತ್ತದೆ, ಮತ್ತು ಶಾಲಾ ಪ್ರವರ್ತಕರು ಇಂತಹ ಉದ್ದೇಶಗಳಿಗಾಗಿ ಹಣಕಾಸು ಎತ್ತಲು ಮೂರು ಪ್ರಾಥಮಿಕ ಮಾರ್ಗಗಳಿವೆ. ನಿರ್ದಿಷ್ಟ ಉದ್ದೇಶಗಳಿಗಾಗಿ ಧನಸಹಾಯ ನೀಡುವ ಸರ್ಕಾರಿ ಯೋಜನೆಗಳನ್ನು ಆಶ್ರಯಿಸುವುದು ಒಂದು ಆಯ್ಕೆಯಾಗಿದೆ. ಮತ್ತೊಂದು ಆಯ್ಕೆಯೆಂದರೆ ಶಾಲಾ ಮಾಲೀಕರು ತಮ್ಮ ಸ್ವಂತ ಉಳಿತಾಯ ಅಥವಾ ವೈಯಕ್ತಿಕ ಸ್ವತ್ತುಗಳನ್ನು ಬಳಸುವುದು. ಅಂತಿಮವಾಗಿ, ಶಾಲಾ ಪ್ರವರ್ತಕರು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಬಹುದು. ಈ ಪ್ರತಿಯೊಂದು ಆಯ್ಕೆಗಳಿಗೂ ಅವುಗಳದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳಿವೆ.
ವೇದಿಕೆ ಸಿದ್ಧಪಡಿಸುವುದುನಿರ್ದಿಷ್ಟ ಉದ್ದೇಶಗಳಿಗಾಗಿ ಅರ್ಹ ಶಾಲೆಗಳಿಗೆ ಧನಸಹಾಯ ನೀಡುವ ಸರ್ಕಾರಿ ಯೋಜನೆಗಳತ್ತ ಗಮನ ಹರಿಸುವ ಮೂಲಕ ಶಾಲೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ವಿವಿಧ ರಾಜ್ಯ ಸರ್ಕಾರಗಳು ಸಹ ಇಂತಹ ಯೋಜನೆ ಗಳನ್ನು ಹೊಂದಿವೆ.
ನಿರ್ದಿಷ್ಟಪಡಿಸಿದ ಎಲ್ಲಾ ಮಾನದಂಡಗಳನ್ನು ಶಾಲೆಯು ಪೂರೈಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಅದು, ಈಡೇರಿದಲ್ಲಿ ಮುಂದುವರಿಯಬಹುದು ಮತ್ತು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಾದ ನಂತರ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ) ಮತ್ತು ಕೈಗೆಟುಕುವ ದರದ ಶಾಲೆಗಳಿಗೆ ಸಾಲ ನೀಡುವ ಇತರ ವಿಶೇಷ ಸಂಸ್ಥೆಗಳನ್ನು ಸಮೀಕ್ಷೆ ಮಾಡಬಹುದು. ಕೈಗೆಟುಕುವ ದರದ ಶಾಲೆಗಳಿಗೆ ಸಾಲ ನೀಡು ವಲ್ಲಿ ಪರಿಣತಿ ಹೊಂದಿರುವ ʼಎನ್ಬಿಎಫ್ಸಿʼಯನ್ನು ಪ್ರವರ್ತಕರು ಆಯ್ಕೆ ಮಾಡಿದರೆ ಒಳ್ಳೆಯದು. ಏಕೆಂದರೆ ಅವರು ಶಾಲೆಗೆ ಸಾಲ ನೀಡುವಲ್ಲಿನ ಸೂಕ್ಷ್ಮಗಳು – ಸಾಮರ್ಥ್ಯ ಮತ್ತು ಸವಾಲುಗಳನ್ನು ಅರ್ಥಮಾಡಿ ಕೊಳ್ಳಬಲ್ಲರು.
ಕಡತ-ಪತ್ರ ಪ್ರಕ್ರಿಯೆಎಲ್ಲಾ ಸಾಲಗಳಂತೆಯೇ, ಶಾಲೆಯು ತನ್ನ ಹಿಂದಿನ ಮತ್ತು ಭವಿಷ್ಯದ ಯೋಜನೆಗಳ ವಿವರಗಳನ್ನು ಒಳಗೊಂಡ ಸಂಪೂರ್ಣ ಕಾರ್ಯಯೋಜನೆಯನ್ನು ದಾಖಲೆ ರೂಪದಲ್ಲಿ ತಯಾರಿಸಿ ಪ್ರಸ್ತುತಪಡಿಸಬೇಕು. ಶಾಲೆಯು ತಾನು ನಡೆದುಬಂದ ಹಾದಿಯನ್ನು ಮುಖ್ಯವಾಗಿ, ಆರಂಭದಿಂದ ಇಲ್ಲಿಯವರೆಗಿನ ಪ್ರಯಾಣವನ್ನು ವಿಸ್ತೃತವಾಗಿ ವಿವರಿಸಬೇಕು. ಇದು ಪ್ರಸಕ್ತ ವರ್ಷಕ್ಕೆ ಮುಂಚಿನ ಎರಡು ಅಥವಾ ಮೂರು ವರ್ಷಗಳ ಕಾರ್ಯಾಚರಣೆಗಳು, ಈ ಅವಧಿಯಲ್ಲಿ ಅದು ಸಾಧಿಸಿದ ಪ್ರಗತಿ ಮತ್ತು ಅದು ಜಯಿಸಿದ ಸವಾಲುಗಳ ಬಗ್ಗೆ ವಿಶೇಷ ಒತ್ತು ನೀಡುವಂತಿರ ಬೇಕು. ದಾಖಲೆಯ ಮುಂದಿನ ಭಾಗವೆಂದರೆ ಶಾಲೆಯ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಮುನ್ನೋಟಗಳು. ಇದು ಮುಂದಿನ ಒಂದು ವರ್ಷ, ಎರಡು ವರ್ಷ ಅಥವಾ ಐದು ವರ್ಷಗಳವರೆಗಿನ ಕಾರ್ಯಯೋಜನೆಗಳನ್ನು ಒಳಗೊಂಡಿರಬಹುದು. ಶಾಲೆಯು ಹಣಕಾಸು ಸಂಸ್ಥೆಯೊಂದಿಗೆ ವ್ಯವಹರಿಸುತ್ತಿರುವುದರಿಂದ, ಈ ದಾಖಲೆ ಪತ್ರಗಳು ವಿವಿಧ ಸರ್ಕಾರಿ ಸಂಸ್ಥೆಗಳು, ನಿಯಂತ್ರಕರು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಪಡೆದ ಎಲ್ಲಾ ನೋಂದಣಿಗಳು, ಸಾಧ್ಯವಾದಷ್ಟು ವರ್ಷಗಳ ಅವಧಿಯ ಲೆಕ್ಕಪರಿಶೋಧಿತ ಬ್ಯಾಲೆನ್ಸ್ ಶೀಟ್ಗಳು, ಕ್ರೆಡಿಟ್ ರೇಟಿಂಗ್ಗಳು ಮತ್ತು ಹಲವು ವರ್ಷಗಳಿಂದ ಗಳಿಸಿದ ಪ್ರಶಸ್ತಿಗಳು ಮತ್ತು ಪ್ರಶಂಸೆಗಳನ್ನು ಒಳಗೊಂಡಿರಬೇಕು.
ಹೀಗೆ ಎತ್ತಲಾದ ಸಾಲದ ಹಣವನ್ನು ಯಾವ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂಬುದನ್ನು ದಾಖಲೆಯಲ್ಲಿ ವಿವರಿಸಬೇಕು. ಇವು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ನವೀಕರಿಸಲು, ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳಂತಹ ಹೊಸ ಮೂಲಸೌಕರ್ಯಗಳನ್ನು ಸ್ಥಾಪಿಸಲು, ಆರ್ಥಿಕವಾಗಿ ನಿರ್ಬಂಧಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲು, ಶಿಕ್ಷಕರಿಗೆ ಹೊಸ ಮತ್ತು ನವೀನ ಬೋಧನಾ ವಿಧಾನಗಳಲ್ಲಿ ತರಬೇತಿ ನೀಡಲು ಮತ್ತು ಸಾಮಾಜಿಕ ಮಾಧ್ಯಮ ಮತ್ತು ಇತರ ವಿಧಾನಗಳ ಮೂಲಕ ಶಾಲೆ ಮತ್ತು ಅದರ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸಲು ಇರಬಹುದು. ಇದು ಸಾಲಕ್ಕಾಗಿ ʻಎನ್ಬಿಎಫ್ಸಿʼಗೆ ಶಾಲೆಯು ನೀಡಲು ಸಾಧ್ಯವಾಗುವ ಮೇಲಾಧಾರದ ವಿವರಗಳು ಮತ್ತು ಮರುಪಾವತಿ ಸಾಮರ್ಥ್ಯದ ವಿವರಗಳನ್ನು ಒಳಗೊಂಡಿರಬೇಕು. ಹೊಸ ನಿಧಿಗಳ ಬಳಕೆಯಿಂದ ಶಾಲಾ ಶುಲ್ಕ ಮತ್ತು ಇತರ ಸಂಬಂಧಪಟ್ಟ ಮೂಲಗಳಿಂದ ಆದಾಯ ಹೆಚ್ಚಳ ಆಗುವ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ಇದರಲ್ಲಿ ಸೇರಿಸಬೇಕು. ಮೇಲಾಧಾರವು ಭೂಮಿ ಮತ್ತು ಶಾಲಾ ಕಟ್ಟಡ, ಸ್ಪಷ್ಟ ಸ್ವತ್ತುಗಳು ಮತ್ತು ಪ್ರವರ್ತಕರ ಸ್ವತ್ತುಗಳ ರೂಪದಲ್ಲಿರಬಹುದು.
ಅದೇ ರೀತಿಯ ಸಾಲಗಾರರನ್ನು ಸಂಪರ್ಕಿಸುವುದುಸಾಲ ಪಡೆಯುವ ಶಿಕ್ಷಣ ಸಂಸ್ಥೆಯು ಈ ಪ್ರಕ್ರಿಯೆಗಳ ಬಗ್ಗೆ ಅನುಭವವನ್ನು ಅರ್ಥಮಾಡಿಕೊಳ್ಳಲು ಸಾಲದಾತ ರಿಂದ ಸಾಲ ಪಡೆದ ಇತರ ಶಿಕ್ಷಣಸಂಸ್ಥೆಯ ಪ್ರವರ್ತಕರನ್ನು ಭೇಟಿ ಮಾಡುವುದು ಒಳ್ಳೆಯದು. ಈ ಅಭ್ಯಾಸವು ಎರವಲು ಶಿಕ್ಷಣ ಸಂಸ್ಥೆಗೇ ಅನುಮಾನಗಳನ್ನು ಪರಿಹರಿಸಿಕೊಳ್ಳಲು ನೆರವಾಗುತ್ತದೆ.
ಸಾಲದಾತರಿಂದ ಗಂಭೀರ ಪರಿಶೀಲನೆಸಾಲದಾತರು ಸಾಮಾನ್ಯವಾಗಿ, ಪ್ರವರ್ತಕರಿಂದ ಹೊರತುಪಡಿಸಿ ಇತರ ಮೂಲಗಳಿಂದ ಸಂಗ್ರಹಿಸಿದ ನಿಧಿಗಳ ಹಿಂದಿನ ಬಳಕೆ, ಶಾಲೆ ಮತ್ತು ಪ್ರವರ್ತಕರ ಕ್ರೆಡಿಟ್ ರೇಟಿಂಗ್ ಹಾಗೂ ಶಾಲೆ ಮತ್ತು ಪ್ರವರ್ತಕರ ಆಸ್ತಿಗಳ ಬಗ್ಗೆ ಪುರಾವೆಗಳನ್ನು ಪಡೆಯುತ್ತಾರೆ.ಹೀಗೆ ʻಎನ್ಬಿಎಫ್ಸಿʼಗಳಿಂದ ಸಂಗ್ರಹಿಸಿದ ಹಣವನ್ನು ಹಲವಾರು ಉದ್ದೇಶಗಳಿಗಾಗಿ ಬಳಸಬಹುದು. ಹಾಲಿ ಶಾಲಾ ಕಟ್ಟಡದ ವಿಸ್ತರಣೆ/ನವೀಕರಣ, ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳಂತಹ ಹೊಸ ಮೂಲಸೌಕರ್ಯಗಳ ಸ್ಥಾಪನೆ, ವಿದ್ಯಾರ್ಥಿವೇತನಗಳನ್ನು ಸ್ಥಾಪಿಸುವುದು, ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಸಮೃದ್ಧಗೊಳಿಸಲು ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ಮುಖ್ಯವಾಗಿ ದುಡಿಯುವ ಬಂಡವಾಳ ಒದಗಿಸುವುದು ಇವುಗಳಲ್ಲಿ ಸೇರಿವೆ.
ಸಾಲ ಮರುಪಾವತಿಸುವತ್ತ ಗಮನಉತ್ತಮವಾಗಿ ನಿರ್ವಹಣೆ ಮಾಡಿದಲ್ಲಿ, ಕೈಗೆಟುಕುವ ದರದ ವಿದ್ಯಾಸಂಸ್ಥೆಗಳು ಸಾಮಾನ್ಯವಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿರುತ್ತವೆ. ಆದರೂ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಕ್ರಗಳ ನಡುವೆ ಸಾಗುವಾಗ ಮತ್ತು ಭವಿಷ್ಯದ ಬೆಳವಣಿಗೆಗಾಗಿ ಹೂಡಿಕೆ ಮಾಡುವಾಗ ತಾತ್ಕಾಲಿಕ ನಗದು ಬಿಕ್ಕಟ್ಟನ್ನು ಅನುಭವಿಸುವುದು ಸರ್ವೇಸಾಮಾನ್ಯ. ಆದ್ದರಿಂದ, ಅಂತಹ ಶಾಲೆಗಳ ಪ್ರವರ್ತಕರಿಗೆ ದೊರೆಯುವ ಸಾಲಗಳು ಅವರ ಕೈಯಲ್ಲಿರುವ ಆರ್ಥಿಕ ಸಂಪನ್ಮೂಲಗಳಿಗೆ ಮತ್ತಷ್ಟು ಬಲ ನೀಡುತ್ತವೆ. ಈ ಸಾಲಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು. ಆದಾಗ್ಯೂ, ಶಿಕ್ಷಣ ಸಂಸ್ಥೆಗಳು ಈ ಹಣವನ್ನು ನ್ಯಾಯಯುತವಾಗಿ ಬಳಸಬೇಕು, ಇದರಿಂದ ಸಾಲ ಪಡೆದ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಜೊತೆಗೆ, ಶಾಲೆಯು ಹೆಚ್ಚುವರಿ ಆದಾಯವನ್ನು ಗಳಿಸುವ ಮೂಲಕ ಸಕಾಲಿಕವಾಗಿ ಸಾಲಗಳನ್ನು ಮರುಪಾವತಿಸಲು ಅನುವಾಗುತ್ತದೆ.