: ಮೋಟಾರು ವಿಮಾ ಸ್ಕ್ಯಾಮ್ ವಿರುದ್ಧ ಕ್ರಮ ಕೈಗೊಂಡ ; ಲಕ್ಷಾಂತರ ಬೈಕ್ ಮಾಲೀಕರನ್ನು ಸಂರಕ್ಷಿಸಿ ಜಾಗೃತಿ ಪ್ರೋತ್ಸಾಹಿಸಿದೆ
ಬೆಂಗಳೂರು:ಮುಂಚೂಣಿ ಗ್ರಾಹಕರಿಗೇ-ನೇರ ವಿಮಾ ಸಂಸ್ಥೆಯಾದ , ಮಹತ್ತರವಾದ ಆನ್‌ಲೈನ್ ಮೋಟಾರು ವಿಮಾ ಸ್ಕ್ಯಾಮ್ ಬಯಲು ಮಾಡಿದೆ. ಸಂಸ್ಥೆಯು ಇಲ್ಲಿಯವರೆಗೆ, ಖರೀದಿಯ ವೇಳೆ ತಪ್ಪಾಗಿ ಪ್ರತಿ ನಿಧಿಸುವ ಮೂಲಕ ತಮ್ಮ ಖಾಸಗಿ ನಾಲ್ಕು ಚಕ್ರ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ದ್ವಿ-ಚಕ್ರ ವಾಹನ ವಿಮಾ ಪಾಲಿಸಿಗಳನ್ನು ಖರೀದಿಸುವ ವ್ಯಕ್ತಿಗಳ 200ಕ್ಕಿಂತ ಹೆಚ್ಚಿನ ವಂಚನೆಯ ಸಂದರ್ಭಗಳನ್ನು ಗುರುತಿಸಿದೆ. ಭಾರತೀಯ ದಂಡ ಸಂಹಿತೆಯ 420 ಅನುಚ್ಛೇದದಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ  ದೇಶಾದ್ಯಂತ ಇಂತಹ ವಂಚಕರ ವಿರುದ್ಧ ದೂರುಗಳನ್ನು ದಾಖಲಿಸಿದೆ.
ವಿಮಾ ವಂಚನೆಯಲ್ಲಿ ತೊಡಗಿಕೊಳ್ಳುವುದು ಗಂಭೀರವಾದ ಅಪರಾಧವಾಗಿದ್ದು ಇದು ತೀವ್ರತರವಾದ ಪರಿಣಾಮ ಗಳನ್ನು ಹೊಂದಿರುತ್ತದೆ. ವಿಮಾ ವಂಚನೆ ಮಾಡುತ್ತಿದ್ದಾರೆ ಎಂದು ಕಂದು ಬಂದ ವ್ಯಕ್ತಿಗಳು, ದಂಡ ಮತ್ತು ಸೆರೆ ವಾಸ ಒಳಗೊಂಡಂತೆ, ಅಪರಾಧಿಕ ಆರೋಪಗಳನ್ನು ಎದುರಿಸಬಹುದಾಗಿದೆ. ವಿಮಾ ಉದ್ದಿಮೆಯ ನ್ಯಾಯ ಪರತೆ ಮತ್ತು ವಿಶ್ವಾಸ ಕಾಪಾಡಲು, ವಿಮೆಯನ್ನು ಖರೀದಿಸುವಾಗ ಮತ್ತು ಕ್ಲೇಮು ಮಾಡುವಾಗ ಪ್ರಾಮಾಣಿಕ ಪದ್ಧತಿ ಗಳನ್ನು ಅನುಸರಿಸುವುದು ಅತ್ಯಾವಶ್ಯಕ.
ಭಾರತದ ದಕ್ಷಿಣಾತ್ಯ ಪ್ರದೇಶಗಳಲ್ಲಿ, ನಿರ್ದಿಷ್ಟವಾಗಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ಪ್ರದೇಶಗಳಲ್ಲಿ ಡಿಜಿಟಲ್ ಮೋಟಾರು ವಿಮಾ ವಂಚನೆಯಲ್ಲಿ ಆತಂಕವನ್ನುಂಟು ಮಾಡುವ ಏರಿಕೆಯನ್ನು  ಗಮನಿಸಿದೆ.
ಇಂತಹ ಸ್ಕ್ಯಾಮುಗಳನ್ನು  ಪರಿಗಣಿಸಿ, ಮಾಹಿತಿಯ ತಪ್ಪಾದ ಪ್ರತಿನಿಧಿತ್ವದ ಆಧಾರದ ಮೇಲೆ ನೀಡಲಾದ ಪಾಲಿಸಿಗಳನ್ನು ಅಮಾನ್ಯಗೊಳಿಸಿರುವುದಷ್ಟೇ ಅಲ್ಲದೆ ಕಟ್ಟುನಿಟ್ಟಾದ ಕಾನೂನುಕ್ರಮವನ್ನೂ ಕೈಗೊಂಡಿದೆ. ವಂಚನೆಗೆ ಸುಮ್ಮನೆ ಪ್ರತಿಕ್ರಿಯೆ ನೀಡುವುದರಾಚೆ ಬ್ರ್ಯಾಂಡ್ ನಡೆದಿದೆ. ಇಂತಹ ವಂಚನೆಯ ಪದ್ಧತಿಗಳ ಕುರಿತು  ಪಾಲಿಸಿದಾರರಿಗೆ ಒಂದು ಸಾರ್ವಜನಿಕ ಸೂಚನೆ ಹೊರಡಿಸಿದೆ.
ತನ್ನ ಗ್ರಾಹಕರಲ್ಲಿ ಅರಿವು ಮೂಡಿಸಿ ಅವರನ್ನು ಸಬಲಗೊಳಿಸುವಲ್ಲಿ ಸಂಸ್ಥೆಯು ಸಕ್ರಿಯ ಪ್ರೋತ್ಸಾಹಗಳನ್ನು ಕೈಗೊಳ್ಳುತ್ತಿದೆ. ಈ ಬದ್ಧತೆಯು, ಅದು ನೀಡಿರುವ ಸಾರ್ವಜನಿಕ ಸೂಚನೆ ಮತ್ತು ತನ್ನ ಪರಿಶೀಲಿಸಲ್ಪಟ್ಟ ಆಪ್ ಮತ್ತು ವೆಬ್‌ಸೈಟ್‌ನಿಂದ ನೇರವಾಗಿ ಪಾಲಿಸಿಗಳನ್ನು ಖರೀದಿಸುವುದರ ಮೇಲೆ ಒತ್ತುನೀಡುವುದರಲ್ಲಿ ಸ್ಪಷ್ಟವಾಗಿದೆ
ಈ ಸ್ಕ್ಯಾಮ್ ಬಗ್ಗೆ ಮಾತನಾಡುತ್ತಾ,  ದ ಲಿಟಿಗೇಶನ್ ಮತ್ತು ಪರಿಶೋಧನೆ ವಿಭಾಗದ ವಿಪಿ ರಾಜೇಶ್ ಧಾನೆ ”  ದಲ್ಲಿ ನಮಗೆ ಗ್ರಾಹಕರ ಹಕ್ಕುಗಳು ಮತ್ತು ಸುಭದ್ರತೆ ಅತಿಮುಖ್ಯವಾದುದಾಗಿದೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಯಾವುದೇ ವಂಚನೆಯ ವಿಮಾ ಚಟುವಟಿಕೆಗಳನ್ನು ಬೆಳಕಿಗೆ ತರಲು ನಾವು ನಿರಂತರವಾಗಿ ಶ್ರಮಿಸುತ್ತಿರುತ್ತೇವೆ.
ಇತ್ತೀಚೆಗೆ ಮುನ್ನೆಲೆಗೆ ಬಂದಿರುವ ಸಂದರ್ಭಗಳ ಕುರಿತು ಹೇಳುವುದಾದರೆ, ನಾವು ಸ್ಥಳೀಯ ಪ್ರಾಧಿಕಾರಗಳೊಡನೆ ಸಕ್ರಿಯ ಸಹಯೋಗ ಏರ್ಪಡಿಸಿಕೊಂಡು ವಂಚಕರು ಬಂಧಿತರಾಗುವಂತೆ ಮಾಡಿದ್ದೇವೆ. ಇಂತಹ ಸ್ಕ್ಯಾಮ್‌ಗಳನ್ನು ಗುರುತಿಸಿ ನಿವಾರಿಸುವ ನಮ್ಮ ಪ್ರಯತ್ನಗಳು, ಎಲ್ಲಾ ನಗರಗಳಾದ್ಯಂತ ವಿಸ್ತಾರ ಗೊಳ್ಳುತ್ತದೆ ಮತ್ತು ನಾವು ಈ ಪದ್ಧತಿಯ ನಿರ್ಮೂಲನೆ ಮಾಡುತ್ತೇವೆ ಎಂಬ ಆತ್ಮವಿಶ್ವಾಸವಿದೆ.” ಎಂದು ಹೇಳಿದರು.
ಈ ಸಕ್ರಿಯಾತ್ಮಕ ದೃಷ್ಟಿಕೋನವು, ತನ್ನ ಗ್ರಾಹಕರನ್ನು ರಕ್ಷಿಸುವ ಮತ್ತು ವಿಮಾ ವಂಚನೆ ಎದುರಿಸುವ ACKOದ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಭಾರತದಲ್ಲಿ ಕಾರು ವಿಮಾ ಸ್ಕ್ಯಾಮ್‌ಗಳು, ಪಾಲಿಸಿದಾರರು ಹಾಗೂ ವಿಮಾ ಸಂಸ್ಥೆಗಳಿಬ್ಬರಿಗೂ ಆತಂಕದ ವಿಷಯ ವಾಗಿರುವುದರಿಂದ, ವಂಚಕರು ಎಸಗುವ ಅಪರಾಧಗಳನ್ನು ಗುರುತಿಸುವ ಬಗೆಯನ್ನು ಅರ್ಥಮಾಡಿ ಕೊಳ್ಳುವುದು ಅತ್ಯಾವಶ್ಯಕ.