ಪಿಜನ್ ನಿಂದ ವಿಶಲ್ ರಹಿತ ಪ್ರೆಶರ್ ಕುಕ್ಕರ್ ಬಿಡುಗಡೆ
ಪ್ರೆಶರ್ ಕುಕಿಂಗ್ ಎನ್ನುವುದು ಭಾರತೀಯ ಅಡುಗೆ ಮನೆಗಳ ಹೃದಯ ಬಡಿತವಾಗಿ ಪರಿಣಮಿಸಿದೆ. ಇಲ್ಲಿ ಕುಕ್ಕರ್ ಲಯಬದ್ಧವಾದ ಸೀಟಿಯು ರುಚಿಕರವಾದ ಆಹಾರವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ಸಿದ್ಧಪಡಿಸುತ್ತದೆ ಎಂಬುದನ್ನು ಸಂಕೇತಿಸುತ್ತದೆ.
ಇದು ನಮ್ಮ ಪಾಕಶಾಲೆಯಲ್ಲಿ ಒಂದು ಅನಿವಾರ್ಯ ಎನಿಸುವಂತಹ ಭಾಗವಾಗಿದೆ. ಆಧುನಿಕತೆ ಬೆಳೆದಂತೆಲ್ಲಾ ಕೆಲವು ವಿಧಾನಗಳೂ ವಿಕಸನಗೊಳ್ಳುತ್ತವೆ. ಇಂದು ಪ್ರೆಶರ್ ಕುಕ್ಕರ್ ದಕ್ಷತೆ ಮತ್ತು ವಿಶ್ವಾಸಾರ್ಹತೆಯ ಸಂಕೇತ ವಾಗಿದೆ. ಮನೆ ಮನಗಳಲ್ಲಿ ಇದು ಅವಿಭಾಜ್ಯ ಅಂಗವಾದಂತಾಗಿದೆ. ಭಾರತೀಯ ಮಹಿಳೆಯ ಜೀವನದಲ್ಲಂತೂ ವಿಶೇಷವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಪ್ರೆಶರ್ ಕುಕ್ಕರ್ ನ ಮಹತ್ವದ ಬಗ್ಗೆ ಮಾತನಾಡಿರುವ ಸ್ಟೋವ್ ಕ್ರಾಫ್ಟ್ ಲಿಮಿಟೆಡ್ ನ ಮುಖ್ಯ ಮಾರುಕಟ್ಟೆ ಅಧಿಕಾರಿ ಡಾ.ಎಂ.ನಂದ ಅವರು, ಪ್ರಸ್ತುತ ಪ್ರೆಶರ್ ಕುಕ್ಕರ್ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮತ್ತು ಅಭಿವೃದ್ಧಿ ಯನ್ನು ಕಾಣುತ್ತಿದ್ದೇವೆ. ಅನನ್ಯವಾದ ನಾವೀನ್ಯತೆಯು ಈ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇದರ ಪರಿಣಾಮ ಪಿಜನ್ ಸಂಸ್ಥೆಯು ಪಿಜನ್ ಎಲೆಕ್ಟ್ರಾ ಎಂಬ ಹೆಸರಿನ ಪ್ರೆಶರ್ ಕುಕ್ಕರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಹಿಂದೆಂದಿಗಿಂತಲೂ ಸ್ಮಾರ್ಟರ್ ಮತ್ತು ಹೆಚ್ಚು ಕಾರ್ಯದಕ್ಷತೆಯಿಂದ ಕೂಡಿದ ಕುಕ್ಕರ್ ಆಗಿದೆ. ಸ್ಟೋವ್ ಕ್ರಾಫ್ಟ್ ಸಂಸ್ಥೆಯ ಉತ್ಪಾದನೆಯಾಗಿರುವ ಪಿಜನ್ ಎಲೆಕ್ಟ್ರಾ ಎಲೆಕ್ಟ್ರಿಕ್ ಪ್ರೆಶರ್ ಕುಕ್ಕಿಂಗ್ ಸಿಸ್ಟಂ ಆಗಿದೆ. ಇದು ಇಂದಿನ ಬಳಕೆದಾರರಿಗೆ ಹ್ಯಾಂಡ್ –ಫ್ರೀ ಕುಕ್ಕಿಂಗ್ ಅನುಭವವನ್ನು ನೀಡುವುದರ ಜೊತೆಗೆ ತಡೆರಹಿತವಾದ ಬಹುಬಳಕೆಯ ಕುಕ್ಕರ್ ಆಗಿದೆ’’ ಎಂದು ತಿಳಿಸಿದರು.
“ಆವಿಷ್ಕಾರ ಮತ್ತು ಸಂಶೋಧನೆಗಳು ಇನ್ನೂ ಮುಂದುವರಿದಿದ್ದು, ಇನ್ನು ಮುಂದೆ ಕುಕ್ಕರ್ ವಿಷಲ್ ಹಾಕುವ ಮತ್ತು ಅದಕ್ಕಾಗಿ ಕಾಯುವ ಪ್ರಮೇಯವೇ ಬರುವುದಿಲ್ಲ. ಪಿಜನ್ ಎಲೆಕ್ಟ್ರಾ ಸ್ವಯಂಚಾಲಿತವಾಗಿ ಪ್ರೆಶರ್ ಮತ್ತು ಹೀಟ್ ಕಂಟ್ರೋಲ್ ಮಾಡುವ ಮೂಲಕ ಅಡುಗೆಯನ್ನು ಸುರಕ್ಷಿತ ಮತ್ತು ಸುಲಭಗೊಳಿಸಲಿದೆ. ನೀವು ತಯಾರಿ ಸುವ ಆಹಾರಕ್ಕೆ ತಕ್ಕುದಾಗಿ ಇದರಲ್ಲಿನ ಎಲೆಕ್ಟ್ರಿಕ್ ಸಿಸ್ಟಂ ತನ್ನಿಂದ ತಾನೇ ಶಾಖವನ್ನು ಸಿದ್ಧಪಡಿಸಿಕೊಂಡು ಆಹಾರ ಉತ್ತಮ ರೀತಿಯಲ್ಲಿ ಬೇಯುವಂತೆ ಮಾಡುತ್ತದೆ. ಈ ಮೂಲಕ ಫೂಲ್ ಪ್ರೂಫ್ ಮಾಡಲಿದೆ’’ ಎಂದು ಹೇಳಿದರು.
ಇದಲ್ಲದೇ, ಪಿಜನ್ ಎಲೆಕ್ಟ್ರಾ ನಿಖರವಾದ ತಾಪಮಾನ ಸೆಟ್ಟಿಂಗ್ ಗಳು ಮತ್ತು ವಿವಿಧ ಅಡುಗೆ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಪ್ರೆಶರ್ ಕುಕ್ಕಿಂಗ್, ಸ್ಟೀಮಿಂಗ್, ನಿಧಾನಗತಿಯ ಅಡುಗೆ ಮತ್ತು ಇತ್ಯಾದಿ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿದೆ. ಈ ಮೂಲಕ ಇದು ಭಾರತೀಯ ಮನೆಗಳಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಇದರಲ್ಲಿ ಸಿದ್ಧವಾಗುವ ಆಹಾರದಲ್ಲಿ ಪೋಷಕಾಂಶಗಳು ಸಂರಕ್ಷಣೆಯಾಗುತ್ತವೆ ಎಂಬುದನ್ನು ಖಚಿತಪಡಿಸಲಾಗುತ್ತದೆ. ಅದೇ ರೀತಿ ರುಚಿ ಮತ್ತು ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ ಎಂದು ಅವರು ತಿಳಿಸಿದರು.