: ಎಚ್.ಡಿ.ಎಫ್.ಸಿ. ಬ್ಯಾಂಕಿನಿಂದ ಗಿಗಾ ಪ್ರಾರಂಭ
ಗಿಗ್ ಕೆಲಸಗಾರರಿಗೆ ಸಂಪೂರ್ಣ ಉತ್ಪನ್ನಗಳ ಹಣಕಾಸು ಸೂಟ್
ಭಾರತದ ಅತ್ಯಂತ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಇಂದು ಗಿಗ್ ಕೆಲಸಗಾರರು/ಫ್ರೀಲಾನ್ಸರ್ ಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಂಪೂರ್ಣ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳ ಸೂಟ್-ಗಿಗಾ() ಪ್ರಾರಂಭಿಸಿದೆ.
ಪ್ರಾರಂಭಿಕ ಅಂಶವಾಗಿ ಬ್ಯಾಂಕ್ ಆಳವಾದ ಗ್ರಾಹಕ ಸಂಶೋಧನಾ ಅಧ್ಯಯನವನ್ನು ಫ್ರೀಲಾನ್ಸರ್ ಗಳ ಅಗತ್ಯವನ್ನು ಅರ್ಥ ಮಾಡಿಕೊಳ್ಳಲು ನಡೆಸಿದ್ದು ಅದರ ಆಧಾರದಲ್ಲಿ ಡಿಜಿಟಲ್ ಪ್ರಥಮ ಕಾರ್ಯಕ್ರಮ ಗಿಗಾ ಪ್ರಾರಂಭಿಸಿದ್ದು ಇದು ಫ್ರೀಲಾನ್ಸರ್ ಗಳ ಅಗತ್ಯಗಳನ್ನು ಪೂರೈಸಲು ವಿಶೇಷವಾಗಿ ರೂಪಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತಿದೆ. ಗಿಗ್ ಅರ್ಥವ್ಯವಸ್ಥೆಯು ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಗಳು, ಸಾಫ್ಟ್ ವೇರ್ ಪ್ರೋಗ್ರಾಮರ್ ಗಳು ಮತ್ತು ವಿನ್ಯಾಸಕರು, ವಾಸ್ತುಶಿಲ್ಪಿಗಳು, ಹೂಡಿಕೆಯ ಸಲಹೆಗಾರರಂತಹ ಬಿಳಿ ಪಟ್ಟಿಯ ಉದ್ಯೋಗಿಗಳಿಂದ ನೀಲಿ ಪಟ್ಟಿಯ ಮತ್ತು ಡೆಲಿವರಿ ಪಾಲುದಾರರು ಮತ್ತು ಆರೈಕೆ ನೀಡುವ ಗುಲಾಬಿ ಪಟ್ಟಿಯ ಉದ್ಯೋಗಿಗಳವರೆಗೆ ನಿರ್ದಿಷ್ಟ ವೃತ್ತಿಯ/ತಾಂತ್ರಿಕ ಪರಿಣಿತಿಯನ್ನು ಹೊಂದಿದವರಿಗೆ ವಿಸ್ತರಿಸಿದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಗಿಗ್ ಬ್ಯಾಂಕಿಂಗ್, ಸ್ಟಾರ್ಟಪ್ಸ್ ಅಂಡ್ ಗೌರ್ನಮೆಂಟ್ ಅಂಡ್ ಇನ್ಸ್ ಟಿಟ್ಯೂಷನಲ್ ಬಿಸಿನೆಸ್ ಮುಖ್ಯಸ್ಥೆ ಸುನಾಲಿ ರೊಹ್ರಾ, “ಹಲವಾರು ಫ್ರೀಲಾನ್ಸರ್ ವಲಯಗಳ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹಣಕಾಸು ಉತ್ಪನ್ನಗಳ ಸಮಗ್ರ ಸೂಟ್ ಅನ್ನು ಬಿಡುಗಡೆ ಮಾಡಲು ನಾವು ಬಹಳ ಸಂತೋಷ ಹೊಂದಿದ್ದೇವೆ.
ನಮ್ಮ ಉತ್ಪನ್ನಗಳಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆ, ಡೆಬಿಟ್ ಕಾರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳು ಅತ್ಯಂತ ವಿಶೇಷ ಕೊಡುಗೆಗಳೊಂದಿಗೆ ಹೊಂದಿದ್ದು ದಿನಕ್ಕೆ ಕೇವಲ 20 ರೂ.ನಂತೆ ಆರೋಗ್ಯ ವಿಮೆ ಮತ್ತು ಅನುಕೂಲಕರ ಹೂಡಿಕೆಯ ಉತ್ಪನ್ನಗಳಿದ್ದು ಅದರಲ್ಲಿ ಅವರು ಸಾಂಪ್ರದಾಯಿಕ ಎಸ್.ಐ.ಪಿ ಮತ್ತು ಕಸ್ಟಂ ರೀಟೇಲ್ ಉತ್ಪನ್ನಗಳ ಬದಲಿಗೆ, “ಅವರಿಗೆ ಸಾಧ್ಯವಿರುವಾಗ ಮತ್ತು ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ” ಮಾಡಬಹುದು. ಆದಾಯ ಮತ್ತು ಸ್ವಾತಂತ್ರ್ಯ ಜನರಿಗೆ ಈ ಜೀವನಶೈಲಿ ಅಳವಡಿಸಿಕೊಳ್ಳಲು ಉತ್ತೇಜಿಸುತ್ತಿದೆ, ಅದು ಡಿಜಿಟಲ್ ಇಕೊಸಿಸ್ಟಂನಿಂದ ಮತ್ತು ರಿಮೋಟ್ ಕೆಲಸದ ಪ್ರವೃತ್ತಿಯಿಂದ ಸನ್ನದ್ಧವಾಗಿದೆ” ಎಂದರು. ಅಂದಾಜುಗಳ ಪ್ರಕಾರ ಭಾರತದಲ್ಲಿ ಗಿಗ್ ಕೆಲಸಗಾರರ ಸಂಖ್ಯೆ 30ರಿಂದ 50 ಮಿಲಿಯನ್ ಇದೆ ಮತ್ತು ಈ ವಲಯ ಮಾತ್ರ ಬೆಳೆಯುತ್ತಿದೆ.
ಗಿಗಾ ಅಡಿಯಲ್ಲಿ ಕೊಡುಗೆಗಳು*:• ಅನುಕೂಲಕರ ಗಿಗಾ ಉಳಿತಾಯ ಖಾತೆ: ಗಿಗಾ ಖಾತೆಯು ಫ್ರೀಲಾನ್ಸರ್ ಗಳಿಗೆ ತ್ರೈಮಾಸಿಕ ಬಾಕಿ ಆಯ್ಕೆ (ಮೆಟ್ರೋಗೆ ರೂ.10,000 ಮತ್ತು ಅರೆ ನಗರ/ಗ್ರಾಮೀಣ ಖಾತೆಗಳಿಗೆ ರೂ.5,000) ಕಾಪಾಡಿಕೊಳ್ಳುವ ಅಥವಾ ಅವರ ಹೂಡಿಕೆಯ ಪ್ರಯಾಣವನ್ನು ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್/ಫಿಕ್ಸೆಡ್ ಡಿಪಾಸಿಟ್/ ರಿಕರಿಂಗ್ ಡಿಪಾಸಿಟ್ ಇತ್ಯಾದಿ ಮೂಲಕ ಪ್ರಾರಂಭಿಸುವ ಆಯ್ಕೆಗಳನ್ನು ನೀಡುತ್ತದೆ.• ಗಿಗಾ ಬಿಸಿನೆಸ್ ಡೆಬಿಟ್ ಕಾರ್ಡ್ ವೆಚ್ಚಗಳ ಮೇಲೆ ಹೆಚ್ಚಿಸಲಾದ ಕ್ಯಾಶ್ ಬ್ಯಾಕ್ ಮತ್ತು ಕಸ್ಟಮೈಸ್ಡ್ ಕೊಡುಗೆಗಳು ಈ ಖಾತೆಯೊಂದಿಗೆ ಬರುತ್ತೆ. ಇದು ರೂ.10 ಲಕ್ಷದವರೆಗೆ ಉಚಿತ ವೈಯಕ್ತಿಕ ಅಪಘಾತ ಮರಣ ವಿಮೆಯನ್ನೂ ನೀಡುತ್ತದೆ.• ವಿಶೇಷ ಗಿಗಾ ಬಿಸಿನೆಸ್ ಕ್ರೆಡಿಟ್ ಕಾರ್ಡ್ ಗಳು ವಿಶೇಷವಾಗಿ ಫ್ರೀಲಾನ್ಸರ್ ಗಳಿಗೆ ವಿನ್ಯಾಸಗೊಳಿಸಲಾಗಿದ್ದು ಬಡ್ಡಿರಹಿತ ಸಾಲದ ಅವಧಿ 55 ದಿನಗಳು ಮತ್ತು ಉನ್ನತೀಕರಿಸಿದ ರಿವಾರ್ಡ್ಸ್ ಕಾರ್ಯಕ್ರಮ ಹೊಂದಿರುತ್ತದೆ.• ಗಿಗಾ ಕಾರ್ಡ್ಸ್ ಮೇಲೆ ವಿಶೇಷ ಕೊಡುಗೆಗಳು: ಫ್ರೀಲಾನ್ಸರ್ ಗಳಿಗೆ ನೆರವಾಗಲು ವಿನ್ಯಾಸಗೊಳಿಸಲಾದ ಮೌಲ್ಯಾ ಧಾರಿತ ಕೊಡುಗೆಗಳ ಗುಚ್ಛವನ್ನು ಕೂಡಾ ಗಿಗಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಎರಡರಲ್ಲೂ ಒಳಗೊಳ್ಳಲಾಗಿದೆ.
ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಕೊಡುಗೆಗಳು ಗ್ರಾಹಕ ಸಂಶೋಧನೆಯ ಮೂಲಕ ಗುರುತಿಸಲಾದ ಹಲವು ಅಗತ್ಯಗಳನ್ನು ಪೂರೈಸುತ್ತವೆ. ಬಿಡುಗಡೆಯಲ್ಲಿ ಇವುಗಳಲ್ಲಿ ಕೋ-ವರ್ಕಿಂಗ್ ತಾಣಗಳ ಮೇಲೆ ಡೀಲ್ ಗಳು(ವಿವರ್ಕ್ ಮತ್ತು ಅವ್ಫಿಸ್) ಆದ್ಯತೆ ಡೀಲ್ ಗಳು; ಕೌಶಲ್ಯವೃದ್ಧಿ ಮತ್ತು ಕಲಿಕೆ (ಹರಪ್ಪ, 42 ಕೋರ್ಸಸ್ ಮತ್ತು ದಿ ಡಿಸೈನರ್ಸ್ ಕ್ಲಾಸ್); ಬುಕ್ ಕೀಪಿಂಗ್, ಅಕೌಂಟಿಂಗ್ ಅಂಡ್ ಟ್ಯಾಕ್ಸೇಷನ್ (ಝೊಹೊ, ಲೀಗಲ್ ವಿಝ್ ಮತ್ತು ಇಂಡಿಯಾ ಫೈಲಿಂಗ್ಸ್); ಹೆಲ್ತ್ ಅಂಡ್ ವೆಲ್ ನೆಸ್ (ಅರ್ಥ್ ಫುಲ್, ಫ್ರಿಡೊ ಮತ್ತು ರಿಬೂಟ್ ವೆಲ್ ನೆಸ್); ಮತ್ತು ಗಿಗ್ ಪ್ಲಾಟ್ ಫಾರಂಗಳಲ್ಲಿ ಸದಸ್ಯತ್ವದ ರಿಯಾಯಿತಿಗಳು (ಟ್ರೂಲಾನ್ಸರ್ ಮತ್ತು ರೆಫ್ರೆನ್ಸ್) ಇತರೆ ಕೊಡುಗೆಗಳೊಂದಿಗೆ ಇರುತ್ತವೆ.
ಎಚ್.ಡಿ.ಎಫ್.ಸಿ. ಎರ್ಗೊದಿಂದ ಆರೋಗ್ಯ ವಿಮೆ: ಈಗ ಗಿಗ್ ಕೆಲಸಗಾರರು ಅವರಿಗೆ ಮತ್ತು ಅವರ ಕುಟುಂಬಗಳಿಗೆ ದಿನಕ್ಕೆ ರೂ.20ರಿಂದ ಪ್ರಾರಂಭಿಸಿ ಆರೋಗ್ಯ ವಿಮೆ ಪಡೆದುಕೊಳ್ಳಬಹುದು ಫ್ರೀಲಾನ್ಸರ್ ಗಳ ಜೀವನಶೈಲಿ ಅಗತ್ಯಗಳಿಗೆ ಬೆಂಬಲಿಸಲು ರೀಟೇಲ್ ಅಸೆಟ್ ಉತ್ಪನ್ನಗಳ ವಿಶೇಷ ಸೂಟ್: