   : ನೌಕರರ ಸಂಘದ ಚುನಾವಣೆಗೆ ನೀಡಿದ್ದ ತಡೆ ತೆರವು ಮಾಡಿದ ಹೈಕೋರ್ಟ್‌
ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಚುನಾವಣೆಗೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ (  )  ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್‌ (  ) ತೆರವು ಮಾಡಿದೆ. ಶುಕ್ರವಾರ ರಾಜ್ಯ ಸರ್ಕಾರಿ ನೌಕರ ಸಂಘದ ಚುನಾವಣಾ ಸಂಬಂಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತಡೆಯನ್ನು ವಜಾಗೊಳಿಸಿ ಚುನಾವಣಾ ಪ್ರಕ್ರಿಯೆಯನ್ನು ಕೈಗೊಳ್ಳಲು ಅವಕಾಶ ನೀಡಿದೆ.
ಸಿಟಿ ಸಿವಿಲ್ ಕೋರ್ಟ್ ಹೇಳಿದ್ದೇನು?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (  ) ಸಂಘದ 2024-2029 ಅವಧಿಯ ಆಡಳಿತ ಮಂಡಳಿಗಾಗಿ ನಡೆಸಲು ಉದ್ದೇಶಿಸಲಾಗಿದ್ದ ಚುನಾವಣೆಗೆ () ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ತಡೆಯಾಜ್ಞೆ (  ) ನೀಡಿತ್ತು.
ಚುನಾವಣಾಧಿಕಾರಿ ನೇಮಕ ಕ್ರಮ ಅಸಿಂಧುವಾಗಿದೆ ಎಂಬ ದೂರುದಾರರ ವಾದವನ್ನು ಕೋರ್ಟ್‌ ಎತ್ತಿ ಹಿಡಿದಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಕೃಷ್ಣಯ್ಯ ಎಂಬವರು ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನೂ ಓದಿ: : ಮಾಡಿದ್ದು ಪಿಎಚ್‌ಡಿ, ಉದ್ಯೋಗ ಸ್ಟ್ರೀಟ್‌ ಫುಡ್ ಅಂಗಡಿ; ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ
ಸರಕಾರಿ ನೌಕರರ ಸಂಘದ 20.02.2022ರ ಬೈಲಾದ ನಿಯಮ 48-ಎ ಪ್ರಕಾರ ಚುನಾವಣೆ ನಡೆಯಬೇಕು. ಅದರ ಪ್ರಕಾರ ಚುನಾವಣೆ ಅಧಿಕಾರಿಯು ಆಯಾ ರಾಜ್ಯ ಅಥವಾ ವಲಯದ ಎ ಅತವಾ ಬಿ ಡಿವಿಷನ್‌ ಅಧಿಕಾರಿ ಆಗಿರಬೇಕು. ಆದರೆ ಹನುಮರಸಯ್ಯ ಎ. ಎಂಬ ನಿವೃತ್ತ ಅಧಿಕಾರಿಯನ್ನು ರಾಜ್ಯ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದೆ. ಇದು ಬೈಲಾ ನಿಯಮ ಉಲ್ಲಂಘನೆಯಾಗಿದೆ. ಚುನಾವಣಾಧಿಕಾರಿ ನೇಮಕವೇ ಅಸಿಂಧುವಾಗಿದ್ದು, ಮುಂದಿನ ಪ್ರಕ್ರಿಯೆಗಳು ನಡೆಯಲು ಶಕ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.
ಅಕ್ಟೋಬರ್‌ 9ರಿಂದ ನೌಕರರ ಸಂಘದ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.