ಶಾಸಕ ಜಿ.ಬಿ.ಜೋತಿಗಣೇಶ್ ಹುಟ್ಟುಹಬ್ಬ: ಹಲವು ಸವಲತ್ತುಗಳ ವಿತರಣೆ
ತುಮಕೂರು:ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿ ಗಣೇಶ್ ಅವರ 43 ನೇ ಹುಟ್ಟು ಹಬ್ಬದ ಅಂಗ ವಾಗಿ ಜೋತಿಗಣೇಶ ಅಭಿಮಾನಿ ಗಳ ಬಳಗದ ವತಿಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು
ರಕ್ತದ ಗುಂಪು ಪರೀಕ್ಷೆ,ನೇತ್ರದಾನ ನೊಂದಣಿ,ಕೃತಕ ಕೈ,ಕಾಲುಗಳ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ, ಪೌರ ಕಾರ್ಮಿಕರಿಗೆ ವಸ್ತ್ರ ವಿತರಣೆ, ಆರ್ಹರಿಗೆ ಕೋವಿಡ್-19 ಬೂಸ್ಟರ್ ಡೋಸ್ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳು ಜರುಗಿದವು.
ಈ ವೇಳೆ ಮಾತನಾಡಿದ ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ,ಶಾಸಕರು ಸರಳ ಸಜ್ಜನಿಕೆ ಹೆಸರಾದವರು, ಕಾರ್ಮಿಕರ ದಿನದಂದು ಶ್ರಮಜೀಮಿಗಳಿಗೆ ಸಹಾಯ ಮಾಡುವ ಮೂಲಕ ಅವರ ಅಭಿಮಾನಿಗಳು ಶಾಸಕರ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸಿದ್ದಾರೆ.ತುಮಕೂರು ನಗರದ ಅಭಿವೃದ್ಧಿಗೆ ಹಲವಾರು ಜನ ಶಾಸಕರು ಕೆಲಸ ಮಾಡಿದ್ದಾರೆ.ಆದರೆ ಜಿ.ಬಿ.ಜೋತಿ ಗಣೇಶ ಅವರು ಶಾಸಕರಾದ ನಂತರ ಅಭಿವೃದ್ಧಿ ವೇಗ ಪಡೆದುಕೊಂಡಿತ್ತು.ಇದರ ಫಲ ವಾಗಿ ರಸ್ತೆ, ಕುಡಿಯುವ ನೀರಿನ ಸಮರ್ಪಕ ಹಂಚಿಕೆ ಸೇರಿದಂತೆ ಹಲವು ಸಮಸ್ಯೆ ಗಳು ಬಗೆಹರಿದಿವೆ.
ನೂತನ ಕ್ರೀಡಾಂಗಣ, ಶಾಲಾ,ಕಾಲೇಜುಗಳಿಗೆ ಹೊಸ ಕಟ್ಟಡ ನಿರ್ಮಾಣ ಹೀಗೆ ಹಲವು ಅಗತ್ತ ಕಾಮಗಾರಿಗಳನ್ನು ಕೈಗೊಂಡು ಉತ್ತಮ ನಗರವಾಗಿ ರೂಪಿಸಿದ್ದಾರೆ. ಅವರ ಸೇವೆ ನಿರಂತರವಾಗಿ ಹತ್ತಾರ ವರ್ಷ ದೊರೆಯುವಂತಾಗಬೇಕು ಎಂದರು.
ತಮ್ಮ ಹುಟ್ಟು ಹಬ್ಬದ ಅಂಗವಾಗಿ ಜಿ.ಬಿ.ಜೋತಿಗಣೇಶ್ ಅಭಿಮಾನಿ ಬಳಗದಿಂದ ಏರ್ಪಡಿಸಿದ್ದ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ವಿವಿಧ ಸಾಧನ, ಸಲಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದ ಶಾಸಕ ಜಿ.ಬಿ.ಜೋತಿ ಗಣೇಶ್,ಇಂತಹ ಅದ್ದೂರಿ ಕಾರ್ಯಕ್ರಮದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮುಜುಗರವೆನಿಸುತ್ತದೆ. ಒರ್ವ ಜನಪ್ರತಿನಿಧಿ ಯಾಗಿ ನನ್ನ ಕೈಲಾದ ಸಹಾಯ ಮತ್ತು ಸಹಕಾರವನ್ನು ಮಾಡಿ ದ್ದೇನೆ.
ಸ್ಮಾರ್ಟ್ಸಿಟಿ ಮತ್ತು ಇತರೆ ಅನುದಾನಗಳ ಜೊತೆಗೆ, ಸರಕಾರದಿಂದ ಬಿಡುಗಡೆಯಾದ 25 ಕೋಟಿ, 40 ಕೋಟಿ ಮತ್ತು 56 ಕೋಟಿ ರು.ಗಳ ಅನುದಾನದಲ್ಲಿ ಕುಡಿಯುವ ನೀರು,ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆ ಹಾಗೂ ಮುಖ್ಯರಸ್ತೆಗಳಿಗೆ ಲಿಂಕ್ ರಸ್ತೆ ಅಭಿವೃದ್ದಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾರ್ಯನಿರ್ವಹಿಸಿದ್ದೇನೆ.ಕೋರೋನದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಅಂತಹ ಕಾಮಗಾರಿಗಳು ನಡೆದಿಲ್ಲ. ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೆ ಸರಕಾರದ ಸವಲತ್ತುಗಳು ಆರ್ಹರ ಮನೆ ಭಾಗಿಲಿಗೆ ತಲುಪವಂತೆ ಮಾಡಿದ್ದೇನೆ. ನನ್ನ ಹುಟ್ಟು ಹಬ್ಬದ ಹೆಸರಿನಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಸಲವತ್ತು ವಿತರಿಸಲು ಸಹಕರಿಸಿದ ಅಭಿಮಾನಿ ಬಳಗಕ್ಕೆ ಹಾಗೂ ಸಹಕರಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಮಂಜುಳ ಆದರ್ಶ್,ಮುಖಂಡರಾದ ಕೊಪ್ಪಲ್ ನಾಗರಾಜು, ಜ್ಯೋತಿಗಣೇಶ್ ಅಭಿಮಾನಿ ಬಳಗದ ಪದಾಧಿಕಾರಿಗಳು  ಉಪಸ್ಥಿತರಿದ್ದರು.