ಪ್ರವರ್ಗ-2ಕ್ಕೆ ಪ್ರಬಲ ಜಾತಿಗಳ ಸೇರಿಸದಂತೆ ಆಗ್ರಹ
ತುಮಕೂರು:ಪ್ರಬಲ ಜಾತಿಗಳನ್ನು ಪ್ರವರ್ಗ-2ಕ್ಕೆ ಸೇರಿಸುವುದರಿಂದ ಹಿಂದುಳಿದ ವರ್ಗಗಳಿಗೆ ಸೇರಿದ 105 ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ.ಇದರ ವಿರುದ್ದ ಜನಜಾಗೃತಿ ಮೂಡಿಸುವ ಕೆಲಸವನ್ನು ಹಿಂದುಳಿದ ವರ್ಗಗಳ ಮುಖಂಡರು ಮಾಡಬೇಕಾಗಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕುಹಿಂದುಳಿದ ವರ್ಗಗಳ ಹಿತರಕ್ಷಣಾ ಸಮಿತಿ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಿಕ್ಕನಾಯಕನಹಳ್ಳಿ ತಾಲೂಕು ಹಿಂದುಳಿದ ವರ್ಗಗಗಳ ಹಿತರಕ್ಷಣಾ ಸಮಿತಿವತಿಯಿಂದ ಆಯೋಜಿಸಿದ್ದ ಪ್ರತಿ ಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಪ್ರಬಲ ಜಾತಿಗಳನ್ನು ಪ್ರವರ್ಗ-2ಎಗೆ ಸೇರಿಸುವುದರಿಂದ ಹಿಂದುಳಿದ ಜಾತಿಗಳಿಗೆ ಸರಕಾರಿ ನೌಕರಿ,ರಾಜಕೀಯ ಅಧಿಕಾರ ಮರೀಚಿಕೆಯಾಗಲಿದೆ.ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಅರ್ಥಿಕವಾಗಿ ಕುಸಿಯುವುದಲ್ಲದೆ, ಮುಂದಿನ ಯುವ ಜನತೆ ಸಾಕಷ್ಟು ಪಶ್ಚಾತಾಪ ಪಡಲಿದ್ದಾರೆ.ಹಾಗಾಗಿ ಸರಕಾರ ಪ್ರಬಲ ಜಾತಿಗಳನ್ನು ಹಿಂದುವರ್ಗ ಎಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಡಬೇಕೆಂಬುದು ನಮ್ಮ ಆಗ್ರಹವಾಗಿದೆ.ಅಲ್ಲದೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಚಾರಸಂಕಿರಣದAತಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾ ಸಮಿತಿಯ ಮುಖಂಡರುಗಳಿಗೆ ಮನವಿ ಮಾಡಿದರು.
ಸಮಿತಿಯ ಮತ್ತೊಬ್ಬ ಸಂಚಾಲಕ ಸಿ.ಡಿ.ಚಂದ್ರಶೇಖರ್ ಮಾತನಾಡಿ,ಪಂಚಮಶಾಲಿ ಲಿಂಗಾಯಿತರನ್ನು ಪ್ರವರ್ಗ 2 ಎ ಗೆ ಸೇರಿಸಲು ಸರಕಾರ ಮುಂದಾ ಗಿದೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವೆಂಬುದು ಈಗಾಗಲೇ ಮರೀಚಿಕೆಯಾಗಿದೆ. ಹಿಂದುಳಿದ ಸಮುದಾಯದಲ್ಲಿರುವ ಜಾತಿಗಳು,ಶೈಕ್ಷಣಿಕ, ಅರ್ಥಿಕ,ರಾಜಕೀಯ ಸೌಲಬ್ಯಗಳು ಸಿಗದೆ ತತ್ತರಿಸಿ ಹೋಗಿರುವಂತಹ ಹೊತ್ತಿನಲ್ಲಿ, ಪ್ರಬಲ ಜಾತಿಗಳನ್ನು ಪ್ರವರ್ಗ 2ಕ್ಕೆ ಸೇರಿಸುವು ದರಿಂದ ಆ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯಮಾಡಿದಂತಾಗುತ್ತದೆ. ಹಾಗಾಗಿ ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂಬುದು ಹಿಂದುಳಿದ ವರ್ಗಗಳ ಆಗ್ರಹವಾಗಿದೆ. ಒಂದು ವೇಳೆ ಸರಕಾರ ಸರಿಯಾದ ತೀರ್ಮಾನ ತೆಗೆದುಕೊಂಡು ಓಬಿಸಿಗಳ ಹಿತ ರಕ್ಷಿಸಿದಿದ್ದರೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ರೂಪಿಸಿ, ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಎಲ್ಲಾ ಹಿಂದುಳಿದ ವರ್ಗಗಳ ಸಮುದಾಯದವರು ಯಾವ ತ್ಯಾಗಕ್ಕಾದರೂ ಸಿದ್ದರಾಗುವಂತೆ ಮನವಿ ಮಾಡಿದರು.
ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಧನಿಯಕುಮಾರ್ ಮಾತನಾಡಿ,ಪ್ರಬಲ ಜಾತಿಗಳನ್ನು ಹಿಂದುಳಿದ ವರ್ಗ ಬ ಗೆ ಸೇರಿಸಲು ಮುಂದಾಗಿರುವುದು ಖಂಡನೀಯ. ಒ0ದು ವೇಳೆ ಸರಕಾರ ಈ ವಿಚಾರದಲ್ಲಿ ಹಿಂದುಳಿದ ಸಮುದಾಯಗಳ ವಿರುದ್ದವಾಗಿ ಕೆಲಸ ಮಾಡಿದರೆ, ಮುಂದಿನ ಚುನಾವಣೆಯಲ್ಲಿ ಸಂಪೂರ್ಣವಾಗಿ ಹಿಂದುಳಿದ ಜಾತಿಗಳು ಬಿಜೆಪಿಗೆ ವಿರುದ್ದವಾಗಿ ನಿಲ್ಲುತ್ತವೆ ಎಂಬ ಎಚ್ಚರಿಕೆ ನೀಡಿದರು.
ಹಿಂದುಳಿದ ವರ್ಗಗಳ ಯುವಜನರಿಗೆ ಸರಕಾರಿ ಕೆಲಸವೆಂಬುದು ಮರೀಚಿಕೆಯಾಗಿದೆ.ಶಿಕ್ಷಣ ಮತ್ತು ರಾಜಕೀಯದಲ್ಲಿಯೂ ಮೀಸಲಾತಿ ಬಹಳ ದೂರದ ಮಾತಾಗಿದೆ. ಇಂತಹ ವೇಳೆಯಲ್ಲಿ ಪ್ರಬಲ ಜಾತಿಗಳನ್ನು ಸೇರ್ಪಡೆ ಮಾಡುವುದು, ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಕಸಿದು, ಬಲಾಢ್ಯರಿಗೆ ನೀಡಿದಂತಾಗುತ್ತದೆ. ಇದು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳು ಮೀಸಲಾತಿ ಮೂಲಕ ಪಡೆಯುತ್ತಿರುವ ಸೌಲಭ್ಯಗಳಿಗೆ ಹಳ್ಳ ತೋಡಿದಂತಾಗುತ್ತದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶೀಘ್ರವೇ ವಿಚಾರಸಂಕಿರಣವೊಂದನ್ನು ಏರ್ಪಡಿಸಲಾಗುವುದು ಎಂದು ಧನಿಯಕುಮಾರ್ ತಿಳಿಸಿದರು.
ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಕೆಂಪರಾಜು ಮಾತನಾಡಿ,ಒಬಿಸಿಗಳ ಹಿತರಕ್ಷಣೆಗೆ ಧರಣಿ ಕೈಗೊಂಡಿರುವುದನ್ನು ಬೆಂಬಲಿಸಿ, ಇಂದು ನಾವೂ ಕೂಡ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ.ಹಿAದುಳಿದ ಸಮುದಾಯಗಳಿಗೆ ನೀಡುತ್ತಿರುವ ಅಲ್ಪಪ್ರಮಾಣದ ಸವಲತ್ತುಗಳು ಇನ್ನೂ ಕೆಲ ಸಣ್ಣ, ಅತಿ ಸಣ್ಣ ಜಾತಿಗಳಿಗೆ ತಲುಪಿಲ್ಲ.ಅಭಿವೃದ್ದಿ ನಿಗಮಗಳಲ್ಲಿ ನಿಗಧಿ ಪಡಿಸಿರುವ ಗುರಿಗಳಿಗೂ ಜನಸಂಖ್ಯೆಗೂ ಅಜಗಜಾಂತರ ವೆತ್ಯಾಸವಿದೆ.
ಹೀಗಿರುವಾಗ ಪ್ರಬಲ ಜಾತಿಗಳನ್ನು ಸೇರಿಸುವುದರಿಂ ಹೆಚ್ಚಿನ ತೊಂದರೆಯಾಗಲಿದೆ. ಈ ಬಗ್ಗೆ ಹಿಂದುಳಿದ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ತಾಲೂಕು, ಹೋಬಳಿ ಮಟ್ಟದಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಬೃಹತ್ ಹೋರಾಟ ರೂಪಿಸಿ, ಪ್ರಬಲ ಜಾತಿಗಳನ್ನು ಪ್ರವರ್ಗ -2ಎಗೆ ಸೇರಿದಂತೆ ಒತ್ತಡ ತರಲಾಗುವುದು ಎಂದರು.
ಧರಣಿ ಸತ್ಯಾಗ್ರಹದಲ್ಲಿ ಮುಖಂಡರಾದ ಜಾಕೀರ್ ಹುಸೇನ್,ಶಿವಣ್ಣ, ರವಿಕುಮಾರ್,ಚಂದ್ರಶೇಖರ್ ಹುಳಿಯಾರು, ನಟರಾಜು,ಸಿ.ಆರ್, ಗುರುಪ್ರಸಾದ್, ರಾಜು ಹೊನ್ನೇಬಾಗಿ ಮುಂತಾದವರು ಭಾಗವಹಿಸಿದ್ದರು.
