ಸಮಾಜವನ್ನು ಸರಿಯಾದ ಮಾರ್ಗದಲ್ಲಿ ತರಲು ಪತ್ರಕರ್ತರು ಶ್ರಮಿಸಬೇಕು
ಶಿರಾ:ಸಮಾಜದಲ್ಲಿ ನೈತಿಕತೆಯ ಕುಸಿತದಿಂದ ಹಲವಾರು ಅವಘಡಗಳನ ನಡೆಯುತ್ತಿವೆ. ಇದರಿಂದ ಕಟ್ಟಡಕಡೆಯ ವ್ಯಕ್ತಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅದರಿಂದ ಅವರು ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸಮಾಜವನ್ನು ಸರಿಮಾರ್ಗದತ್ತ ತರಲು ನಾವುನೀವೆಲ್ಲ ಶ್ರಮಿಸಬೆಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಪ್ರೆಸಿಡೆನ್ಸಿ ಶಾಲಾ ಆವರಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿರಾ ಮತ್ತು ತುಮಕೂರು ಘಟಕದ ವತಿಯಿಂದ ಏರ್ಪಡಿಸಿದ್ದ ಸಮಾಜಸೇವಾ ರತ್ನ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು. ಪಾವಗಡದ ಜಪಾನಂದ ಸ್ವಾಮೀಜಿ ಯವರ ಸಮಾಜ ಸೇವೆಯನ್ನು ಗುರ್ತಿಸಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡುತ್ತಿರುವುದು, ಈ ಸಮಯದಲ್ಲಿ ನಾನು ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.
ಸಮಾಜ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಾವಗಡದ ಜಪಾನಂದ ಸ್ವಾಮೀಜಿ ಅವರು ಸಮಾಜ ದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಸೇವಕನೇ ಆಗಿದ್ದು, ನಾನು ಅದರ ಒಂದು ಭಾಗವಷ್ಟೆ. ಸಮಾಜ ಸೇವೆಯನ್ನು ಮಾಡುವ ಭಾಗ್ಯ ನನಗೆ ದೊರಕಿರುವುದು ದೇವರ ಕೊಡುಗೆಯಾಗಿದೆ ಎಂದು ಭಾವುಕರಾಗಿ ನುಡಿದ ಸ್ವಾಮೀಜಿಗಳು ನನ್ನ ಜೀವಮಾನವನ್ನು ಸಂಕಷ್ಟದಲ್ಲಿರುವ ಜನರ ಕಷ್ಟದಲ್ಲಿ ಭಾಗಿಯಾಗಿ ಅವರ ಸಮಸ್ಯೆ ನೀಗಿಸುವು ದರಲ್ಲಿ ಸುಖ ಕಾಣುತ್ತೇನೆ ಎಂದರು. ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಪತ್ರಕರ್ತರಿಗಿದ್ದು, ಆಡಳಿತಾಂಗದ ಜೊತೆಗೆ ಪತ್ರಿಕಾರಂಗವೂ ಕೂಡ ಕೈಜೋಡಿಸಿದರೆ ಸ್ವಸ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮಾತನಾಡಿ ಪತ್ರಕರ್ತರು ಸಂಯಮ, ಶಾಂತಿಯನ್ನು ರೂಡಿಸಿಕೊಳ್ಳುವುದರ ಜೊತೆಗೆ ಸಮಾಜದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ಲಭ್ಯವಿರುವ ತಂತ್ರಜ್ಞಾನದಲ್ಲಿ ಎಲ್ಲಾ ವಿಷಯಗಳನ್ನು ಪತ್ರಕರ್ತರು ತಿಳಿದುಕೊಳ್ಳಬೇಕು. ನೇರ ದಿಟ್ಟ ವಿಷಯಗಳನ್ನು ಪ್ರಸಾರ ಮಾಡಬೇಕಿದೆ. ಸಮಾಜದ ಬದಲಾ ವಣೆ ರಾಜಕೀಯವಾಗಿ, ಸಾಮಾಜಿಕವಾಗಿ, ಪತ್ರಿಕೋದ್ಯಮವೂ ಸಹ ಬದಲಾವಣೆಯಾಗುತ್ತಿದೆ. ಪತ್ರಕರ್ತರ ಜೀವನ ಮುಳ್ಳಿನ ಹಾದಿಯಾಗಿದ್ದು, ಸಮಾಜದ ಹಾಗು ಹೋಗುಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಮಾತನಾಡಿ ಸಂವಿಧಾನದ ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಅದರ ಜೊತೆಗೆ ನಾಲ್ಕನೆ ಅಂಗವಾಡಿ ಪತ್ರಿಕಾರಂಗ ಇದೆ. ಇಂದು ಸಮಾಜದಲ್ಲಿ ನಡೆಯುವ ತಪ್ಪುಒಪ್ಪುಗಳನ್ನು, ಆಡಳಿತ ನಡೆಸುವವರು ಮಾಡುವ ತಪ್ಪುಗಳನ್ನು ತಿದ್ದುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಸಮಾಜದಲ್ಲಿ ನಡೆಯುವ ಒಳ್ಳೆಯ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಧ್ಯಮಗಳು ಮಾಡಬೇಕಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ ಸತ್ಯವನ್ನು ಹುಡುಕುವುದೇ ಪತ್ರಕರ್ತರ ಧ್ಯೇಯ ವಾಗಿದ್ದು, ಸತ್ಯ ಉಳಿಸುವುದಕ್ಕಾಗಿ ಪತ್ರಕರ್ತರು ಸೇವಾ ನಿಷ್ಠೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕಾರಂಗಕ್ಕೆ ಸ್ಮರಣೀಯ ಸ್ಥಾನ ದೊರಕುತ್ತದೆ ಎಂದರು.
ಸೇವಾ ರತ್ನ ಪ್ರಶಸ್ತಿ:ಪಾವಗಡದ ಜಪಾನಂದ ಸ್ವಾಮೀಜಿಗಳಿಗೆ ಅವರ ಸೇವೆಯನ್ನು ಸ್ಮರಿಸಿ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಿ ಗೌರವಿಸಲಾಯಿತು.
ದತ್ತಿ ಪ್ರಶಸ್ತಿ ವಿತರಣೆ:ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ಮಾನವೀಯ ವರದಿಗಾಗಿ ವಿ.ಹೆಚ್.ಚಂದ್ರಕಾ0ತ, ವೈ.ಕೆ. ರಾಮಯ್ಯ ಪ್ರಶಸ್ತಿ ಎ.ಆರ್.ಚಿದಂಬರ, ವೆಂಕಟಾಚಲ ಹೆಚ್.ವಿ., ಸಿ.ಎನ್.ಭಾಸ್ಕರಪ್ಪ ಪ್ರಶಸ್ತಿ ಹೆಚ್.ಐ.ಶಾಂತಿನಾಥ್, ಗುಂಡೂರಾವ್ ಪ್ರಶಸ್ತಿ ಮಂಜುನಾಥ್ ಅರಸ್, ಭಾಸ್ಕರಪ್ಪ ಪ್ರಶಸ್ತಿ ವಿಜಯ್‌ಕುಮಾರ್.ಟಿ.ಎ ಇವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟಿçÃಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಹಶೀಲ್ದಾರ್ ಮಮತ, ನಗರಸಭೆ ಅಧ್ಯಕ್ಷ ಅಂಜಿನಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಜಯಪಾಲ್, ಕಾರ್ಯದರ್ಶಿ ವಿನೋದ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಧಶರಥ, ಖಜಾಂಚಿ ದೇವರಾಜು.ಎನ್, ಹಿರಿಯ ಪತ್ರಕರ್ತರಾದ ಶಿವಕುಮಾರ್, ಬರಗೂರು ವಿರೂಪಾಕ್ಷ, ಅನಂತರಾಮು, ಸೇರಿದಂತೆ ಹಲವರು ಹಾಜರಿದ್ದರು.