ಅಂಗನವಾಡಿ ವಿದ್ಯಾರ್ಥಿನಿ ಮಡಿಲಿಗೆ ಪ್ರಥಮ ರ‍್ಯಾಂಕ್ ನೊಂದಿಗೆ ಚಿನ್ನದ ಪದಕ
ಚಿಕ್ಕನಾಯಕನಹಳ್ಳಿ:ತಾಲ್ಲೂಕಿನ ಗಡಿಭಾಗದಲ್ಲಿರುವ ಕುಗ್ರಾಮ ಹೊನ್ನಶೆಟ್ಟಿಹಳ್ಳಿಯ ಎಚ್.ಜಿ. ವರ್ಷರವರಿಗೆ ಬೆಂಗಳೂರು ವಿವಿಯ ಇಂಟಿಗ್ರೆಟಡ್ ಎಂಸ್ಸಿಯ ಅಂತಿಮವರ್ಷದ ಪರೀಕ್ಷೆಯಲ್ಲಿ ಪ್ರಥರ‍್ಯಾಂಕ್ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇದೇ ಏಪ್ರಿಲ್೨೯ ರಂದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ೫೬ನೇ ಘಟಿಕೋತ್ಸವದಲ್ಲಿ ರಾಜ್ಯ ಪಾಲರು, ಸಚಿವ ಡಾ. ಅಶ್ವಥ್‌ ನಾರಾಯಣ ರವರು ಹಾಗೂ ಉಪಕುಲಪತಿಗಳಾದ ವೇಣುಗೋಪಾಲ್‌ರವರ ಸಮ್ಮುಖದಲ್ಲಿ ೨೦೨೧ ರ ಕೊನೆ ವರ್ಷದ ಇಂಟಿಗ್ರೆಟಡ್ ಎಂಸ್ಸಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಶ್ವವಿದ್ಯಾ ಯಕ್ಕೆ ಪ್ರಥರ‍್ಯಾಂಕ್ ಪಡೆದ ಕಾರಣಚಿನ್ನದ ಪದಕ ಹಾಗೂ ಪ್ರಶಸ್ತಿಪತ್ರವನ್ನು ಪ್ರಧಾನ ಮಾಡಲಾಯಿತು.
ಈ ಸಾಧನೆ ಮಾಡಿದ ಎಚ್.ಜಿ.ವರ್ಷ ತಾಲ್ಲೂಕಿನ ಹಂದನಕೆರೆ ಹೋಬಳಿ ಹೊನ್ನಶೆಟ್ಟಿಹಳ್ಳಿಯ ಜಯಣ್ಣ ಮತ್ತು ವಿಮಲರವರ ಪುತ್ರಿಯಾಗಿದ್ದು, ಈಕೆ ತನ್ನ ಹುಟ್ಟೂರಿನಲ್ಲಿರುವ ಅಂಗನವಾಡಿಯ ವಿದ್ಯಾರ್ಥಿನಿಯಾಗಿ ಕಲಿತು ಈ ಸಾಧನೆ ಮಾಡಿರುವುದು ಅಲ್ಲಿನ ಅಂಗನವಾಡಿ ಕಾರ್ಯಕರ್ತೆ ಎಚ್.ಎ.ಪುಷ್ಪರವರಿಗೆ ಸಂತಸ ತ0ದಿದೆ. ಈಕೆಯ ಮುಂದಿನ ಪಿಎಚ್‌ಡಿ ವ್ಯಾಸಂಗ ಉತ್ತಮವಾಗಿರಲಿ ಎಂದು ಅವರು ಹಾರೈಸಿದ್ದಾರೆ.
ಗ್ರಾಮೀಣ ಮೂಲದ ಈಕೆಯ ಸಾಧನೆಗೆ ಪೋಷಕರು, ಬಂಧುಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.