ವೀರಶೈವ ಯುವ ಘಟಕದಿಂದ ಬಸವ ಜಯಂತಿ ಆಚರಣೆ
ಸಿರವಾರ :ಬಸವ ಜಯಂತಿ ಪ್ರಯುಕ್ತ ಪಟ್ಟಣದ ವೀರಶೈವ ಲಿಂಗಾಯತ ಯುವ ಘಟಕದ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು.
ಯುವ ಮುಖಂಡ ಉಮೇಶ ಜೇಗರಕಲ್ ಮಾತನಾಡಿ 12ನೇ ಶತಮಾನದಲ್ಲಿ‌ ಬಸವಣ್ಣನವರು ಹಲವು ಸಾಮಾಜಿಕ ಸುಧಾರಣೆ ಕಾರ್ಯಗಳಿಂದಲೇ ಪ್ರಸಿದ್ದಿಯಾಗಿದ್ದರು. ಸಮಾಜ ಜಾತಿ ವ್ಯವಸ್ಥೆಯಿಂದ ಸಂಪೂರ್ಣ ವಾಗಿ ಮುಕ್ತರಾಗಿರಬೇಕು. ಸಮಾನತೆ ಇರಬೇಕು ಎಂದು ಬಯಸಿದ್ದ ಅವರು ಅದಕ್ಕಾಗಿಯೇ ಶ್ರಮಿಸಿದರು ಎಂದರು.
ಬಸವೇಶ್ವರ ಮೂರ್ತಿಗೆ ಪ್ರತಿ ಅಮವಾಸ್ಯೆಗೆ ಪೂಜೆ ಸಲ್ಲಿಸುವ ಬಸವರಾಜ ಮಾಡಗೀರಿ, ನಾಗೇಶ ಅವರಿಗೆ ಸನ್ಮಾನಿಸಲಾಯಿತು.
ವಿರುಪಾಕ್ಷಗೌಡ ನಂದರೆಡ್ಡಿ, ದೇವೆಂದ್ರಪ್ಪ ಸುಂಕೇಶ್ವರಹಾಳ, ಶೇಖರಯ್ಯಸ್ವಾಮಿ, ,ಬದ್ರಿ ಚಿತ್ತಾಪುರ, ಮಂಜು ನಾಥ ಅರಕೇರಿ, ಚನ್ನು ಹೊಸಮಠ, ಲಿಂಗನಗೌಡ ತಡಕಲ್, ಕೆ.ಶಂಕರಗೌಡ, ಸುರೇಶಗೌಡ, ಡೊಣ್ಣೆಪ್ಪ, ಉಮೇಶ.ಜೆ, ಶಿವರಾಜ ಬೆಳವಿನೂರು, ಬಸವಲಿಂಗ, ಚಂದ್ರು ಯಂಬಲಮಠ, ಮಹೇಶ ಸಾಳೇರ್, ಕೆ.ಶಿವಲಿಂಗ, ನಾಗರಾಜ ಹಡಪದ, ಬಸನಗೌಡ, ಚೇತನ್ ಸಜ್ಜನ್, ರವಿ, ಹರೀಶ, ಮಧುಕುಮಾರ್, ಅರುಣ್, ಮಿಥುನ್ ಇದ್ದರು.