ಕ.ಸಾ.ಪ ದಿಂದ ನೀರಿನ ಅರವಟಿಗೆ ಪ್ರಾರಂಭ
ಮಾನ್ವಿ:ಬಸವಣ್ಣನವರು ೧೨ನೇ ಶತಮಾನದಲ್ಲಿ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯವೆನ್ನುವ ವಿಶೇಷ ಸಾಹಿತ್ಯ ಪ್ರಕಾರವನ್ನು ನೀಡಿದ್ದಾರೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.
ಪಟ್ಟಣದ ಸಿಂಧನೂರು ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರೀಷತ್ ತಾಲ್ಲೂಕು ಘಟಕವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬೇಸಿಗೆಯಲ್ಲಿ ಸಾರ್ವಜ ನಿಕರಿಗೆ ಕುಡಿಯುವ ನೀರನ್ನು ಒದಗಿಸುವ ಅರವಟಿಗೆ ಪ್ರಾರಂಭಿಸಿರುವುದರಿ0ದ ಜನರಿಗೆ ಅನುಕೂಲವಾಗಿದೆ ಕ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕನ್ನಡ ಭಾಷೆಯ ಅಭಿವೃದ್ದಿ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಅಭಿನಂದನಿಯ ಎಂದು ತಿಳಿಸಿದರು.
ಕ.ಸಾ.ಪ.ತಾ.ಅಧ್ಯಕ್ಷ ರವಿಕುಮಾರ ಪಾಟೀಲ್, ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿ, ಮುಖಂಡರಾದ ರಾಜಾ ರಾಮಚಂದ್ರನಾಯಕ, ಸಾಹಿತಿ ರಮೇಶ ಯಾಳಗಿ. ಮಹಮ್ಮದ್ ಮುಜೀಬ್, ಶರಣಪ್ಪ ಮೇದಾ,ಬಸವರಾಜ ಭೋಗಾವತಿ ಅಣ್ಣಪ್ಪಗೌಡ,ಲಕ್ಷö್ಮಣ ಕಪಗಲ್ ಬಸವರಾಜ, ಬಿಷ್ಟಪ್ಪ ಅಬ್ಬಿಗೇರಿ,ತಾಯಪ್ಪ ಹೊಸೂರು, ಸೇರಿದಂತೆ ಇನ್ನಿತರರು ಇದ್ದರು,