ಮನಸ್ಪೂರ್ವಕವಾಗಿ ಕಾಯಕ ನಿರ್ವಹಿಸಿದಾಗ ಮಾತ್ರ ಬಸವಣ್ಣನವರ ಆಶಯ ಈಡೇರುತ್ತದೆ : ತೇಜಸ್ವಿನಿ
ಚಿಕ್ಕನಾಯಕನಹಳ್ಳಿ :ಕಾಯಕದಲ್ಲಿ ದೇವರನ್ನು ಬಸವಣ್ಣನವರು ಕಂಡಿದ್ದಾರೆ ಕಾಯಕವನ್ನು ಹುದ್ದೆಗಳಿಗೆ ಸೀಮಿತಗೊಳಿಸದೇ ಶ್ರದ್ದೆಯಿಂದ ಮನಸ್ಪೂರ್ವಕವಾಗಿ ನಿರ್ವಹಿಸಿದಾಗ ಮಾತ್ರ ಬಸವಣ್ಣನವರ ಆಶಯ ಈಡೇರುತ್ತದೆ ಎಂದು ತಹಸೀಲ್ದಾರ್ ಬಿ.ತೇಜಸ್ವಿನಿ ತಿಳಿಸಿದರು.
ಪಟ್ಟಣದ ತಾಲ್ಲೂಕು ನ್ಯಾಯಾಲಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮುದಾಯದ ಮುಖಂಡರುಗಳ ಸಮ್ಮುಖದಲ್ಲಿ ಶ್ರೀ ಬಸವೇಶ್ವರ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಬಸವಣ್ಣನವರು ಈ ವಿಶ್ವ ಕಂಡ0ತಹ ಮಹಾನ್ ಶ್ರೇಷ್ಠ ದಾರ್ಶನಿಕ ತತ್ವಜ್ಞಾನಿ, ಹಾಗೂ ಸಮಾಜವಾದಿಯಾಗಿದ್ದರು ಈ ನಾಡಿನಲ್ಲಿ ಜಾತಿ ರಹಿತ ಸಮಾಜಕ್ಕಾಗಿ ಹೋರಾಡಿದ ಸಮಾನತೆಯ ಹರಿಕಾರರು, ಕಾಯಕದಿಂದಲೇ ದೇವರನ್ನು ಕಾಣಬೇಕು ತಮ್ಮ ಪ್ರಾಮಾಣಿಕತೆಯಿಂದ ಮುಕ್ತಿಯನ್ನು ಕಾಣಬೇಕು ಎಂದ ಅವರು ನಮ್ಮ ಪ್ರತಿನಿತ್ಯ ಜೀವನದಲ್ಲಿ ದಾರ್ಶನಿಕರ ಆಶಯ ಗಳು ಒಂದಾನೊ0ದು ರೀತಿಯಲ್ಲಿ ಬಂದು ಹೋಗುತ್ತವೆ ಅದ್ದರಿಂದ ಅವರ ವ್ಯಕ್ತಿತ್ವವೇ ನಮಗೆ ಆದರ್ಶವಾಗಿವೆ ಎಂದು ತಿಳಿಸಿದರು.
ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಮೇಲನಹಳ್ಳಿ ಗಂಗಾಧರ್ ಮಾತನಾಡಿ ವಿಶ್ವ ಗುರುವಿನ ಸ್ಥಾನದಲ್ಲಿರುವ ಬಸವಣ್ಣ ನವರು ೧೨ ನೇ ಶತಮಾನದಲ್ಲೇ ಲಿಂಗ ,ಜಾತಿ ಬೇಧಗಳ ವಿರುದ್ದ ಸಮಾನತೆ ಸಾರಿದವರು. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ಸಮಾನತೆಯಲ್ಲಿ ಕಂಡವರು ಅವರು ದೇವರು ಹಾಗೂ ದೇವಾಲಯದ ಪರಿಕಲ್ಪನೆಯನ್ನು ಮೂಡಿಸಿದವರು, ಅಂತಜಾರ್ತಿ ವಿವಾಹವನ್ನು ಮಾಡಿ ಸುವ ಮೂಲಕ ಸಮಾಜದ ಎಲ್ಲರೂ ಸಮಾನರು ಎಂದು ಮಾತಿಗಿಂತ ಕೃತಿಯಲ್ಲಿ ಮಾಡಿ ತೋರಿಸಿ ಕಲ್ಯಾಣ ಕ್ರಾಂತಿಯನ್ನು ಮಾಡಿದವರು ಇಂತಹ ಮಹನೀಯರ ಸ್ಮರಿಸಬೇಕಾಗಿದರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸ್ಮರಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್ ರವಿಕುಮಾರ್ ಕಟ್ಟೇಮನೆ ಮಾತನಾಡಿ ಮಾರ್ಟಿನ್ ಲೂಥರ್ ಎಂದೇ ಕರೆಸಿಕೊಂಡ ಬಸವಣ್ಣನವರು ನೆಲೆ ಗಟ್ಟಿನಲ್ಲಿ ನಿಂತು ತನ್ನ ಬೇರುಗಳನ್ನು ಆಳವಾಗಿ ಬೇರೂರಿ ಕಾಯಕವನ್ನು ಹೇಳುತ್ತಾ ಸಮಾನತೆ ಹೇಳುತ್ತಾ ಅನಿಷ್ಠಪದ್ದತಿಯನ್ನು ತೊಡೆಯುವುದಕ್ಕೆ ಶ್ರಮಿಸಿದವರು. ಅಲ್ಲಮಪ್ರಭು ಹಾಗೂ ಬಸವಣ್ಣನವರು ಅನುಭವ ಮಂಟಪದ ಮಹಾಮನೆಯಲ್ಲಿದ್ದವರು ಸಮಾಜದ ಅಂಕುಡೊ0ಕನ್ನು ತಿದ್ದುವಲ್ಲಿ ಅವರ ಪಾತ್ರ ಮುಖ್ಯವಾಗಿತ್ತು ತಮ್ಮ ಶಕ್ತಿ ವಿಶಿಷ್ಟಾದೈತ್ವ ಸಿದ್ಧಾಂತ ಮೂಲಕ ಸಮಾಜದ ಪ್ರತಿಯೊಬ್ಬರಲ್ಲೂ ಕಾಯಕವೇ ಕೈಲಾಸ ಎಂಬುದನ್ನು ತೋರಿಸಿವರು ಬಸವಣ್ಣನವರು ಒಂದು ಜಾತಿಯಲ್ಲಿ ಬಂಧಿಸುವ ಕೆಲಸವನ್ನು ಮಾಡಿರುವುದು ದುರ್ದೈವ್ಯ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಸಿ.ಎಲ್ ಜಯದೇವ್ ಮಾತನಾಡಿ ಸಕಲರಿಗೂ ನ್ಯಾಯ ಜಾತ್ಯಾತೀತ ರಾಷ್ಟçವನ್ನು ಕಾಣ ಬೇಕೆಂಬ ಉದ್ದೇಶದಿಂದ ೮೦೦ ವರ್ಷಗಳ ಹಿಂದೆಯೇ ವಿವಿಧ ರೂಪದಲ್ಲಿ ಕೆರೆಯಲ್ಪಡುವ ಬಸವೇಶ್ವರರು ವಚನಗಳ ಮೂಲಕ ಸಮಾಜದ ಅಂಕು ಡೊ0ಕನ್ನು ತಿದ್ದಿತೀಡುವ ಸಹಭಾಳ್ವೆಯ ಸಮಾಜ ನಿರ್ಮಾಣಕ್ಕಾಗಿ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಾಸಲು ದಿನೇಶ್ ಮಾತನಾಡಿ ಸಾಮಾಜಿಕ ನ್ಯಾಯದ ನಿಲುವನ್ನು ಸಾಧಿಸಿ ತೋರಿಸಿದ ಬಸವಣ್ಣನವರ ಮೇಲುಕೀಳಿಲ್ಲದ ಸರ್ವಸಮಾನತೆ, ಸಮಾಜದ ಸೌಖ್ಯವನ್ನು ಸದಾ ಕಾಪಿಡುವ ದಯಾಪೂರ್ಣರು ಬಸವಣ್ಣನವರು ಅವರ ಸಾಧನೆ ಮತ್ತು ವಚನಗಳು ಸಮಾಜಕ್ಕೆ ದಾರಿದೀಪವಾಗಿದ್ದು ಇದೇ ಮೇ ತಿಂಗಳೊಳಗೆ ಎಲ್ಲಾ ಸಂಘ ಸಂಸ್ಥೆಗಳೊಳಗೂಡಿ ಬೃಹತ್ ಮಟ್ಟದಲ್ಲಿ ಬಸವಣ್ಣನವರ ಜಾಗೃತಿ ಜಯಂತಿಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಪುರಸಭಾಧ್ಯಕ್ಷೆ ಪುಷ್ಪ ಹನುಮಂತರಾಜು, ಮುಖ್ಯಾಧಿಕಾರಿ ಶ್ರೀನಿವಾಸ್, ಸಿ.ಡಿ.ಪಿ.ಒ ಹೊನ್ನಪ್ಪ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ ನಾಗಭೂಷಣ್, ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಜು, ರಾಜಶೇಖರ್, ಅಬಕಾರಿ ಇಲಾಖೆ, ಅಗ್ನಿಶಾಮಕ ಅಧಿಕಾರಿಗಳು ಸಮಾಜದ ಮುಖಂಡರುಗಳು ಭಾಗಿಯಾಗಿದ್ದರು.