ಭಾವೈಕ್ಯತೆ ಮೂಡಿಸಿದ ಬಸವ ಜಯಂತಿ
ಮಾನ್ವಿ:ವಿಶ್ವಗುರು ಬಸವೇಶ್ವರರ ಮೆರವಣಿಗೆಯಲ್ಲಿ ಭಾಗವಹಿಸಿದ ಹಿಂದೂಗಳಿಗೆ ಬಿಸಿಲಿನ ತಾಪ ತಡೆಯಲು ಮುಸ್ಲಿಂ ಸಮುದಾಯದವರು ಐಸ್ ಕ್ರೀಂಗಳನ್ನು ವಿತರಿಸಿದರು.
ವೇದಿಕೆ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಕುಡಿಯಲು ಶುಧ್ದವಾದ ನೀರನ್ನು ವಿತರಿಸುವ ಮೂಲಕ ಮುಸ್ಲಿಂ ಯುವಕು ಗಮನ ಸೆಳೆದರು ಹಾಗೂ ಬಸವ ವೃತ್ತದ ಅಲಂಕಾರದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದು ವಿಶೇಷ ವಾಗಿತು. ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ದವರು ಪರಸ್ಪರ ರಂಜಾನ್ ಹಾಗೂ ಬಸವ ಜಯಂತಿ ಶುಭಾಶಯಗಳನ್ನು ಕೊರಿದರು.