ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಾಸಕ ಗೌರಿಶಂಕರ್ ಸಹಾಯಧನ
ತುಮಕೂರು:ಗ್ರಾಮಾಂತರ ಹೊನಸಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಯ್ಯನ ಪಾಳ್ಯ ಗ್ರಾಮದ ಶ್ರೀ ದೊಡ್ಡಮ್ಮ ದೇವಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಗೌರಿಶಂಕರ್ ರವರು ಭಾಗವಹಿಸಿ ತಾಯಿಯ ದರ್ಶನ ಪಡೆದು ಭಕ್ತಾದಿಗಳಿಗೆ ಊಟ ಬಡಿಸಿದರು,
ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕ ಡಿ.ಸಿ ಗೌರಿಶಂಕರ್ ಅವರ ಕುಟುಂಬದ ವತಿಯಿಂದ ವೈಯಕ್ತಿಕವಾಗಿ 4ನಾಲ್ಕು ಲಕ್ಷ ರೂ. ಗಳ ಧನಸಹಾಯ, ಹಾಗೂ ಸಾವಿರಾರು ಭಕ್ತಾದಿಗಳಿಗೆ ಸುಮಾರು ಎರಡು ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮದ ಸಂಪೂರ್ಣ ಅನ್ನದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ.