ಸನ್ಮಾರ್ಗ ತೋರಿದ ಮಹಾನ್ ತತ್ವಜ್ಞಾನಿ ಶ್ರೀಆದಿಶಂಕರರು: ಬಿ.ತೇಜಸ್ವಿನಿ
ಚಿಕ್ಕನಾಯಕನಹಳ್ಳಿ :ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಅವರು ಮಾತನಾಡಿ ಆಧ್ಯಾತ್ಮಕತೆಯೇ ಭಾರತದ ತಳಹದಿಯಾಗಬೇಕೆಂಬ ನಿಟ್ಟಿನಲ್ಲಿ ಹಿಂದೂಧರ್ಮದ ಪಾವಿತ್ರö್ಯತೆ, ವೈಶಾಲ್ಯತೆ, ಮೂಲ ಸಿದ್ದಾಂತ, ಆತ್ಮಜ್ಞಾನಕ್ಕೆ ಇತರೆ ಧರ್ಮಗಳಿಂದ ಗೊಂದಲಮಯ ಸ್ಥಿತಿ ಸೃಷ್ಠಿಯಾಗಿದ್ದ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರು ಉದಯಿಸಿ ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನ ಸಂಪಾದನೆಯೊAದಿಗೆ ಕಾಲ್ನಡಿಗೆಯಲ್ಲಿ ಮೂರು ಬಾರಿ ದೇಶಾದ್ಯಂತ ಸಂಚರಿಸಿ ನಾಲ್ಕು ದಿಕ್ಕುಗಳಲ್ಲಿ ಪೀಠ ಗಳನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮವನ್ನು ಉಚ್ಚಾçಯಸ್ಥಿತಿಗೆ ಕೊಂಡೊಯ್ದ ಆಚಾರ್ಯರಲ್ಲಿ ಮೊದಲಿಗರು ಶ್ರೀ ಶಂಕರರೆAದರು.
ಸತ್ಯದ ಪರಾಮರ್ಷಯೇ ಮುಖ್ಯವೆಂದುಜಗತ್ತಿಗೆ ತಿಳಿಸಿ ಅದ್ವೆöÊತಸಿದ್ದಾಂತವನ್ನು ನೀಡಿ,ಆಧ್ಯಾತ್ಮದ ಹಾದಿಗೆ ಸಾಮಾನ್ಯರು ಸಾಗಲು ಹಲವು ವೇದೋಪನಿಷತ್ತುಗಳನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲಲಿದೆ ಎಂದರು.
ಪಟ್ಟಣದ ಬ್ರಾಹ್ಮಣ ಸಮಾಜದ ಮುಖಂಡರಾದಕೆ.ಎಸ್. ಚಂದ್ರಶೇಖರಯ್ಯ ಮಾತನಾಡಿ ಹಿಂದೂ ಧರ್ಮದ ಉನ್ನತಿಗೆ ಕಾರಣ ರಾದ ಶ್ರೀ ಶಂಕರಾಚಾರ್ಯರು ದೈವಾಂಶ ಸಂಭೂತರಾಗಿದ್ದರೆಂದರು. ಈ ಸಂದರ್ಭದಲ್ಲಿ ಮುಖಂಡರುಗಳು ಕಾರ್ಯ ಕ್ರಮ ಕಂದಾಯಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.