ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚರಣೆ
ಮಾನ್ವಿ:ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿಯಾವ ಭಾಷೆಯನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಾರೋ ಅಂತಹ ಭಾಷೆ ಮಾತ್ರ ಬೆಳೆಯುತ್ತದೆ ಮತ್ತು ಉಳಿಯುತ್ತದೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ವ್ಯವಹಾರಿಕ ಲಾಭಕ್ಕಾಗಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡಿದರು ಮನೆಯಲ್ಲಿ ಮಾತನಾಡುವ ಭಾಷೆ ಕನ್ನಡ ವಾಗಿರಬೇಕು ಹಾಗಾದಾಗ ಮಾತ್ರ ಮುಂದಿನ ಪೀಳಿಗೆ ಕನ್ನಡ ಬಾಷೆಯ ಮಹತ್ವ ವನ್ನು ನಮ್ಮ ಸಂಸ್ಕೃತಿಯನ್ನು ತಿಳಿಯಲು ಸಾಧ್ಯವಾಗುತ್ತದೆ.
ವಚನಗಳನ್ನು ಅಧ್ಯಯನ ಮಾಡುವುದರಿಂದ ಜಾತಿ,ವರ್ಗ ,ವರ್ಣರಹಿತವಾಗಿ ಬದು ಕನ್ನು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಮೌಲ್ಯಯುತವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ರಂಗಭೂಮಿಯ ಮೂಲಕ ಸಮರ್ಥವಾಗಿ ಕನ್ನಡ ಭಾಷೆಯನ್ನು ಅಭಿವ್ಯಕ್ತಿಸಲು ಪಟ್ಟಣದಲ್ಲಿನ ರಂಗಮ0ದಿರವನ್ನು ಅಭಿವೃದ್ದಿ ಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ತಾಲೂಕು ಕ.ಸಾ.ಪ ಅಧ್ಯಕ್ಷ ರವಿಕುಮಾರ್ ಪಾಟೀಲ್ ಮಾತನಾಡಿ ಕ.ಸಾ.ಪರಿಷತ್ ನಾಡಿನಾದ್ಯಂತ ಹಿರಿಯ ಸಾಹಿತಿಗಳ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ೮೫ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ೮೬ನೇ ಸಮ್ಮೇಳನ ನಡೆಸುವ ಸಿದ್ದತೆಯಲ್ಲಿದೆ ರಾಜ್ಯದಲ್ಲಿ ಕ.ಸಾ.ಪ.ತನ್ನ ತಾಲೂಕು ಘಟಕಗಳ ಮೂಲಕ ಕನ್ನಡ ಮನಸ್ಸುಗಳನ್ನು ಬೆಸೆಯುವ ಕಾರ್ಯ ಮಾಡುತ್ತಿದೆ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಮಹಿಳಾ ಸಾಹಿತ್ಯ ಸಮ್ಮೆಳನವನ್ನು ನಡೆಸುವ ಮೂಲಕ ತಾಲ್ಲೂಕಿನ ಮಹಿಳಾ ಸಾಹಿತಿಗಳನ್ನು ಪರಿ ಚಯಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವನ್ನು ಕ.ಸಾ.ಪ ನಡೆಸಲಿದೆ ನಿರಂತರವಾಗಿ ದತ್ತಿ ಉಪನ್ಯಾಸ ಸೇರಿದಂತೆ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಕುರಿತು ಕನ್ನಡ ಉಪನ್ಯಾಸಕ ಶರಣುಕುಮಾರ ಮಾತನಾಡಿ ಕ.ಸಾ.ಪ.ರಾಜ್ಯ ಘಟಕವು ಪ್ರಭುತ್ವದ ಜೊತೆಗಿದ್ದು ಕನ್ನಡ ಭಾಷೆಯ ಬಗ್ಗೆ ಸರಕಾರಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತ ಬಂದಿದೆ ಎಂದು ತಿಳಿಸಿದರು.
ಕನ್ನಡ ಉಪನ್ಯಾಸಕಿ ರತ್ನಾಬಾಯಿ ಶಿರೋಳ್ಕರ್,ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಾಥ ಚೌದ್ರಿ,ಸಾಹಿತ್ಯ ಭವನದ ಪರಿಚಾರಕರಾದ ಬಂದೇನವಾಜ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾನ್ವಿಯ ಜಗನ್ನಾಥದಾಸರ ಜೀವನ ಹಾಗೂ ಸಾಹಿತ್ಯ ವಿಷಯದ ಕುರಿತು ದತ್ತಿ ಉಪನ್ಯಾಸಕ್ಕಾಗಿ ಮನ್ಸಾಲಿ ಯಂಕಯ್ಯ ಶೆಟ್ಟಿ ದಂಪತಿಗಳು ಕ.ಸಾ.ಪ ತಾ.ಅಧ್ಯಕ್ಷ ರವಿಕುಮಾರ ಪಾಟೀಲ್ ರವರಿಗೆ ೨೫ ಸಾವಿರ ರೂಗಳ ದತ್ತಿದಾನದ ಚೆಕ್‌ಅನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಇ.ಓ.ಸ್ಟೇಲಾ ವರ್ಗೀಸ್, ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು. ಜಿಲ್ಲಾ ಕ.ಸಾ.ಪ. ವಿಶೇಷ ಅಹ್ವಾನಿತರಾದ ಸಾಹಿತಿ ರಮೇಶ ಬಾಬು ಯಾಳಗಿ,ಈರಣ್ಣ ಮರ್ಲಟ್ಟಿ, ಜಿಲ್ಲಾ ಕ.ಸಾ.ಪ.ಗೌರವ ಸದಸ್ಯರಾದ ಬಸವರಾಜ ಭೋಗಾವತಿ,ಹಿರಿಯ ಪತ್ರಿಕಾ ವರದಿಗಾರರಾದ ರಾಮಾಂಜನೇಯಲು, ತಾ. ಕ.ಸಾ.ಪ. ಮಹಿಳಾ ಪ್ರತಿನಿಧಿ ಉಷಾ ಜ್ಯೋತಿ, ಕ.ಸಾ.ಪ.ಗೌರವ ಕಾರ್ಯದರ್ಶಿ ಬಸವರಾಜ ಜಂಗಮರಹಳ್ಳಿ,ಸೇರಿದಂತೆ ಇನ್ನಿತರರು ಇದ್ದರು.