ಗಂಗೆಯನ್ನು ಭೂಲೋಕಕ್ಕೆ ಕರೆತಂದ ಕೀರ್ತಿ ಭಗೀರಥ ಮಹರ್ಷಿ ಅವರಿಗೆ ಸಲ್ಲುತ್ತದೆ
ಕಲಬುರಗಿ:ತಮ್ಮ‌ ಪೂರ್ವಜರ‌ ಸದ್ಗತಿಗೆ ಕಠೋರ ತಪ್ಪಸ್ಸಿನ ಮೂಲಕ ಅಕಾಶ ಗಂಗೆಯನ್ನು ಭೂಲೋಕಕ್ಕೆ ಕರೆತಂದ‌ ಕೀರ್ತಿ ಶ್ರೀ ಭಗೀರಥ ಮಹರ್ಷಿ ರಾಜರಿಗೆ ಸಲ್ಲುತ್ತದೆ ಎಂದು ಸಾವಳಗಿಯ ಟ್ಯುಟೋರಿಯಲ್ ಆಡಳಿತಾಧಿಕಾರಿ ಲಕ್ಷ್ಮೀ ಆರ್. ಸಾವಳಗಿತಿಳಿಸಿದರು.
ರವಿವಾರ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಮಹರ್ಷಿ ಶ್ರೀ ಭಗೀರಥ ಜಯಂತ್ಯೋತ್ಸವ ಸಮಿತಿ ಕಲಬುರಗಿ ಇವರ ಸಹಯೋಗದಲ್ಲಿ ಆಯೋಜಿಸಿದ ಮಹರ್ಷಿ ಶ್ರೀ ಭಗೀರಥ ಮಹರ್ಷಿ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಾ‌ ಮಾತನಾಡಿದರು.
ಭಗೀರಥರು ತ್ಯಾಗದಿಂದ ಗಂಗೆಯನ್ನು ಭೂಮಿಗೆ ಕರೆತಂದಿದ್ದಕ್ಕೆ ಕೆಲವೊಮ್ಮೆ‌ ಕಠಿಣ‌ ಪರಿಶ್ರಮ, ಛಲದ‌ ಮನೋಭಾವನೆಗೆ ಭಗೀರಥ ಪ್ರಯತ್ನ ಎನ್ನುವುದು ನಾನ್ನುಡಿಯಾಗಿದೆ ಎಂದರು. ಇದಕ್ಕೂ‌ ಮುನ್ನ ಶ್ರೀ‌ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಅವರು ಜಯಂತ್ಯೋ ತ್ಸವ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ್ಪಾರ ಸಮಾಜದ ಉಪಾಧ್ಯಕ್ಷ ಗೋಪಣ್ಣ ದೊಡ್ಮನಿ, ಸಮಾಜದ ಮುಖಂಡರಾದ ಪ್ರೊ. ಯಂಕಪ್ಪ ನೀರಡಗಿ, ಎನ್.ಆರ್.ಜಡಿ, ಜಗನ್ನಾಥ ಕೋರಳ್ಳಿ, ವೆಂಕಟೇಶ ನೀರಡಗಿ, ಮಹಾದೇವಪ್ಪ ಉಪ್ಪಾರ, ಸಿದ್ದಣ್ಣ ಹಾವನೂರ, ಜಗನ್ನಾಥ ಕೋರಳ್ಳಿ, ಗೋಪಣ್ಣ ನೀರಡಗಿ, ಗುರುನಾಥ ಸಗರ, ದೊಡ್ಡಪ್ಪ ಸಗರ ಸೇರಿದಂತೆ ಹಲವರಿದ್ದರು.