ಅಖಿಲ ಕರ್ನಾಟಕ ಸಮುದಾಯ ನೌಕರರ ಸಂಘದ ರಾಜ್ಯ ಸಂಘಟನೆಗೆ ಎಂ.ಡಿ.ಜಾವಿದ್ ಮುಕ್ತ ಅವಕಾಶ
ಅಖಿಲ ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದ ರಾಜ್ಯಧ್ಯಕ್ಷ ಮಮಿತ್ ಗಾಯಕ್ವಾಡ್ ರಾಯಚೂರು ಜಿಲ್ಲೆಗೆ ಭೇಟಿ ಮಹತ್ವದ ಚರ್ಚೆ –
ಎಂ.ಡಿ .ಜಾವಿದ್ ಹವಲ್ದಾರ್ ಅವರಿಗೆ ರಾಜ್ಯ ಸಂಘಟನೆಗೆ ಬರಲು ಮುಕ್ತ ಅವಕಾಶ ಘೋಷಣೆ
ರಾಯಚೂರು:ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಾಯಚೂರು ಜಿಲ್ಲಾ ಪದಾಧಿ ಕಾರಿಗಳ ಸಭೆಗೆ ಕರ್ನಾಟಕ ರಾಜ್ಯ ಸಮು ದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀ ಮಮಿತ್ ಗಾಯಕ್ವಾಡ್ ರವರು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡರು.
ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪದಾಧಿಕಾರಿಗಳ ಸಭೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರ ಸಂಘದ ಅನೇಕ ಬೇಡಿಕೆಗಳ ಬಗ್ಗೆ ಮುಂದಿನ ನಿಲುವು ಗಳ ಹಾಗೂ ಮುಂದಿನ ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ಒಳಿತಿಗಾಗಿ ನೀಲಿ ನಕ್ಷೆ ಯನ್ನು ಸಿದ್ಧಪಡಿ ಮುಂದಿನ ವಾರ ಬೆಂಗಳೂರು ನಗರದಲ್ಲಿ ಕರ್ನಾಟಕ ರಾಜ್ಯದ 29 ಜಿಲ್ಲೆಗಳಲ್ಲಿನ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಜಿಲ್ಲೆಯಿಂದ ರಾಜ್ಯ ಸಂಘಟನೆಗೆ ಆಯ್ಕೆಯಾದ ಪದಾಧಿಕಾರಿಗಳ ಸಭೆಯನ್ನು ಹಮ್ಮಿಕೊಂಡು ಕೂಲಂಕುಶವಾಗಿ ಚರ್ಚಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಯಚೂರು ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಎಂ ಡಿ ಜಾವೇದ್ ಹವಲ್ದಾರ್ ಅವರು ಸಮುದಾಯ ಆರೋಗ್ಯ ಅಧಿಕಾರಿಗಳು ಗ್ರಾಮೀಣ ಭಾಗದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಗಳಲ್ಲಿ ಗ್ರಾಮೀಣ ಭಾಗದ ಜನರಿಗೆ 12 ರೀತಿಯ ವಿವಿಧ ವೈದ್ಯಕೀಯ ಸೇವೆಗಳನ್ನು ಕೊಡುವುದರ ಮುಖಾಂತರ ಗ್ರಾಮೀಣ ಭಾಗದ ಜನರ ಮನೆಮಾತಾಗಿದ್ದಾರೆ.
ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆಯು ದೇವರ ಸೇವೆಗೆ ಸಮಾನ ಕರ್ನಾಟಕ ರಾಜ್ಯದಲ್ಲಿ ನಮಗೆ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಟ್ಟ ಸರ್ಕಾರಕ್ಕೆ ಅಭಿನಂದನೆಯನ್ನು ಕೂಡ ತಿಳಿಸಿದರು ನಾವೆಲ್ಲರೂ ಒಗ್ಗಟ್ಟಾಗಿ ಇಡೀ ಕರ್ನಾಟಕ ರಾಜ್ಯದ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಒಳ್ಳೆಯದಾಗುವ ದೃಷ್ಟಿಯಲ್ಲಿ ಚಿಂತನೆ ಮಾಡೋಣ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳ ಬಗ್ಗೆ ಮತ್ತೊಂದು ಬಾರಿ ಮನವಿ ಸಲ್ಲಿಸೋಣ ಮನವಿ ಸಲ್ಲಿಕೆಯ ಚಟುವಟಿಕೆಯೂ ಅತ್ಯಂತ ಯಶಸ್ವಿ ರೀತಿಯಲ್ಲಿ ಮಾಡೋಣ, ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ನೀಡುವ ಪ್ರೋತ್ಸಾಹ ಧನ, ಮುಕ್ತನಿಧಿ ಅನುದಾನ, ಸೇವಾ ಭದ್ರತೆ, ಕೋವಿಡ್ ರಿಸ್ಕ್ ಅಲ್ಲೋವನ್ಸ್, ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಅನ್ವಯಿಸದ ಕೆಲಸಗಳನ್ನು ಇಲಾಖೆ ಮಾಡಿ ಎಂದು ಒತ್ತಡ ಹೇರುತ್ತಿರುವುದು. ಇನ್ನೂ ಅನೇಕ ವಿಷಯಗಳ ಬಗ್ಗೆ ಬೆಂಗಳೂರಿನಲ್ಲಿ ಸಭೆ ಮಾಡಿ ರಾಜ್ಯದ ಮುಖ್ಯಮಂತ್ರಿಗಳನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳನ್ನು, ರಾಷ್ಟ್ರೀಯ ಅಭಿಯಾನ ನಿರ್ದೇಶಕರನ್ನು , ಆರೋಗ್ಯ ಇಲಾಖೆಯ ಆಯುಕ್ತರನ್ನು ನಮ್ಮ ಕಾರ್ಯ ಕ್ರಮದ ರಾಜ್ಯ ಉಪನಿರ್ದೇಶಕರನ್ನು ಅನೇಕ ಅಧಿಕಾರಿಗಳನ್ನು ಭೇಟಿ ಮಾಡಿ ಕೂಲಂಕುಶವಾಗಿ ಚರ್ಚಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷ ಮಮಿತ್ ಗಾಯಕ್ವಾಡ್ , ರಾಜ್ಯ ಸಮಿತಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ್ ನೂಲ್ಕರ್, ವಿಶ್ವರಾಜ್, ಕಿರಣ್ ತೊಡಿಚರಿ ಬೀದರ್ ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳು ನೌಕರ ಸಂಘದ ಜಿಲ್ಲಾಧ್ಯಕ್ಷ ಖಾದರ್ ಖಾನ್, ರಾಯಚೂರು ಜಿಲ್ಲೆಯ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಲತೀಫ್, ಶ್ರವಣ್ ಕುಮಾರ್, ಶರಣಬಸವ, ರಾಘವೇಂದ್ರ, ರಶೀದ್ ಖಾನ್, ಜಾಫರ್ ಖಾನ್, ಕ್ರಾಂತಿ ಕುಮಾರ್ , ಶ್ರೀಕಾಂತ್ ಶಿವಪುರ ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು