ಯುವಜೋಡಿಗಳು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಶವಂತ್(23) ಮತ್ತು ಜ್ಯೋತಿ(23) ಆತ್ಮಹತ್ಯೆ ಮಾಡಿಕೊಂಡಿರುವ ಯುವಜೋಡಿಗಳು. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ತಮ್ಮ ಮಗಳು ಇಂಟರ್ವ್ಯೂಗೆ ಹೋಗುತ್ತೇನೆ ಎಂದವಳು ವಾಪಸ್ ಬಂದಿರುವು ದಿಲ್ಲ ಎಂದು ದೂರು ನೀಡಿದ್ದಾರೆ. ಆಕೆಯನ್ನು ಪತ್ತೆ ಹಚ್ಚಿ ಕೊಡುವಂತೆ ಪೊಲೀಸರಲ್ಲಿ ತಾಯಿ ದೂರು ನೀಡಿದ್ದರು ಈ ದೂರಿನ ಮೇರೆಗೆ ಪೊಲೀಸ್ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
20ನೇ ತಾರೀಖಿನಂದು ಯುವಕ ಯಶವಂತ ನಾಪತ್ತೆಯಾಗಿರುವ ದೂರು ಕೂಡ ದಾಖಲಾಗಿದೆ. ಟ್ಯಾಲಿ ಕ್ಲಾಸಿಗೆ ತೆರಳುತ್ತೇನೆ ಎಂದು ಮನೆಯಿಂದ ಹೋಗಿದ್ದ ಯುವಕ ಮರಳಿ ಮನೆ ಕಡೆ ಬರಲಿಲ್ಲ ಎಂದು ಯುವಕನ ತಂದೆ ಠಾಣೆಯಲ್ಲಿ ದೂರು ನೀಡಿದ್ದಾರೆ.