ಒತ್ತುವರಿಯಾದ 5-24.08 ಎಕರೆ ಸರ್ಕಾರಿ ಪ್ರದೇಶ ತೆರವು: ಜೆ.ಮಂಜುನಾಥ್
ಬೆಂಗಳೂರು:ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒತ್ತುವಾರಿಯಾದ ಒಟ್ಟು 5-24.08 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ಮೇ.27 ರಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ನೇತೃತ್ವದಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ.
ಆನೇಕಲ್ ತಾಲ್ಲೂಕಿನಲ್ಲಿ 220 ಲಕ್ಷ ರೂಗಳ ಮೌಲ್ಯದ ಒತ್ತುವರಿಯಾದ ಒಟ್ಟು 3-21.08 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ, ರಾಜಕಾಲುವೆ ಹಾಗೂ ಕುಂಟೆ ಪ್ರದೇಶವನ್ನು ಈ ಕಾರ್ಯಾಚರಣೆಯಲ್ಲಿ ತೆರವುಗೊಳಿಸ ಲಾಗಿದ್ದು, ಆನೇಕಲ್, ಬೆಂಗಳೂರು ದಕ್ಷಿಣ ಹಾಗೂ ಯಲಹಂಕ ತಾಲ್ಲೂಕುಗಳಲ್ಲಿ ರೂ. 1555.60 ಲಕ್ಷಗಳ ಮೌಲ್ಯದ ಒತ್ತುವರಿಯಾದ ಒಟ್ಟು 2-03.00 ಎಕರೆ ವಿಸ್ತೀರ್ಣದ ಗೋಮಾಳ, ಮುಫತ್ ಕಾವಲ್, ಗುಂಡು ತೋಪು ಹಾಗೂ ಸ್ಮಶಾನ ಪ್ರದೇಶವನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಹೊಂಗಸಂದ್ರ ಗ್ರಾಮದಲ್ಲಿ ರೂ.512.50 ಲಕ್ಷ ಬೆಲೆಬಾಳುವ 1-01 ಎಕರೆ ವಿಸ್ತೀರ್ಣದ ಗೋಮಾಳ ಪ್ರದೇಶ ಹುಳಿಮಾವು ಗ್ರಾಮದಲ್ಲಿ ರೂ. 1000.00 ಲಕ್ಷ ಮೌಲ್ಯದ 0-20 ಎಕರೆ ವಿಸ್ತೀರ್ಣದ ಮುಘತ್ ಕಾವಲ್ ಪ್ರದೇಶ ಒತ್ತುವರಿಯನ್ನು ತೆರೆವುಗೊಳಿಸ ಲಾಗಿದೆ.
ಯಲಹಂಕ ತಾಲ್ಲೂಕಿನ ಹೆಸರುಘಟ್ಟ ಹೋಬಳಿಯ ಚೋಕ್ಕನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾದ ರೂ.8.10 ಲಕ್ಷ ಮೌಲ್ಯದ 0-09 ಎಕರೆ ವಿಸ್ತೀರ್ಣದ ಗುಂಡು ತೋಪು ಪ್ರದೇಶವನ್ನು ತೆರೆವುಗೊಳಿಸಲಾಗಿದೆ. ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ರಾಜಾಪುರ ಗ್ರಾಮದ ರೂ.35 ಲಕ್ಷ ಮೌಲ್ಯದ 0-13 ಎಕರೆ ವಿಸ್ತೀರ್ಣದ ಸ್ಮಶಾನ ಪ್ರದೇಶವನ್ನು ತೆರೆವುಗೊಳಿಸ ಲಾಗಿದೆ.
ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಬ್ಯಾಗಡದೇವಹಳ್ಳಿ ಮತ್ತು ಅವಡದೇವನಹಳ್ಳಿ ಗ್ರಾಮದ ರೂ.20.00 ಲಕ್ಷ ಮೌಲ್ಯದ 0-03 ಎಕರೆ ವಿಸ್ತೀರ್ಣದ ರಾಜಕಾಲುವೆ ಜಿಗಣಿ ಹೋಬಳಿಯ ಹುಲ್ಲಹಳ್ಳಿ ಗ್ರಾಮದ ರೂ.20.00 ಲಕ್ಷ ಮೌಲ್ಯದ 0-03 ಎಕರೆ ವಿಸ್ತೀರ್ಣದ ಕುಂಟೆ, ಸರ್ಜಾಪುರ ಹೋಬಳಿಯ ಅಡಿಗಾರ ಕಲ್ಲಹಳ್ಳಿ ಗ್ರಾಮದ 3-07 ಎಕರೆ ವಿಸ್ತೀರ್ಣದ ರೂ.150.00 ಲಕ್ಷ ಮೌಲ್ಯದ ಸರ್ಕಾರಿ ಕರೆ ಪ್ರದೇಶ, ಸರ್ಜಾಪುರ ಹೋಬಳಿಯ ಚೂಡಸಂದ್ರ ಗ್ರಾಮದ 0-05 ಎಕರೆ ವಿಸ್ತೀರ್ಣದ ರೂ.2.00 ಲಕ್ಷ ಮೌಲ್ಯದ ಸರ್ಕಾರಿ ಕರೆ ಹಾಗೂ ಸರ್ಜಾಪುರ ಹೋಬಳಿಯ ಕಾಡಗ್ರಹಾರ ಗ್ರಾಮದಲ್ಲಿ ಒತ್ತುವರಿಯಾದ 0-03.08 ಎಕರೆ ವಿಸ್ತೀರ್ಣದ ರೂ.10.00 ಲಕ್ಷ ಮೌಲ್ಯದ ರಾಜಕಾಲುವೆ ಪ್ರದೇಶವನ್ನು ತೆರೆವುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.