ವಿಶ್ವ ಅಪ್ಪಂದಿರ ದಿನ: ವಂಡರ್‌ಲಾದಿಂದ ಮೂರು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ ಉಚಿತ
ಬೆಂಗಳೂರು:ವಂಡರ್‌ಲಾ ವತಿಯಿಂದ “ವಿಶ್ವ ತಂದೆಯ ದಿನ”ದ ಪ್ರಯುಕ್ತವಾಗಿ ಇದೇ ಜೂ.19ರಂದು ಮೂರು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ನನ್ನು ಉಚಿತವಾಗಿ ನೀಡುವ ವಿಶೇಷ ಕೊಡುಗೆ ಪ್ರಕಟಿಸಿದೆ.
ವಂಡರ್‌ ಲಾ ಪ್ರತಿಯೊಂದು ವಿಶೇಷ ದಿನಗಳ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದೇರೀತಿ, ಈ ಬಾರಿಯ ಅಪ್ಪಂದಿರ ದಿನವನ್ನು ವಂಡರ್‌ಲಾ ಇನ್ನಷ್ಟು ಆತ್ಮೀಯತೆಗೊಳಿಸುವ ಪ್ರಯತ್ನ ನಡೆಸಿದೆ. ಅದರಂತೆ ಈ ಬಾರಿ ಅಪ್ಪಂದಿರ ದಿನದಂದು ಮೂರು ಟಿಕೆಟ್‌ ಖರೀದಿಸಿದರೆ ನಾಲ್ಕನೇಯ ಟಿಕೆಟ್‌ನನ್ನು ಉಚಿತವಾಗಿ ಪಡೆಯಬಹುದು.
ಇನ್ನು 10 ನೇ ತರಗತಿ, ಪಿಯುಸಿ ಹಾಗೂ ದ್ವಿತಿಯಾ ಪಿಯುಸಿ ಪರೀಕ್ಷೆಗಳನ್ನು ಪೂರ್ಣ ಗೊಳಿಸಿದ ವಿದ್ಯಾರ್ಥಿಗಳಿಗೂ ವಿಶೇಷ ಕೊಡುಗಡೆ ನೀಡಲಾಗಿದೆ. ಅವರು ತಮ್ಮ ಹಾಲ್‌ ಟಿಕೆಟ್‌ಗಳನ್ನು ತೋರಿಸುವ ಮೂಲಕ ಶೇ. 35ರಷ್ಟು ರಿಯಾಯಿತಿ ಪಡೆಯ ಬಹುದು.
ಅಷ್ಟೆ ಅಲ್ಲದೆ, 22 ವರ್ಷ ಒಳಗಿನ ವಿದ್ಯಾರ್ಥಿಗಳಿಗೂ ಸಹ ತಮ್ಮ ಕಾಲೇಜು ಐಡಿ ತೋರಿಸುವ ಮೂಲಕ ಶೇ.20ರಷ್ಟು ರಿಯಾ ಯಿತಿ ಪಡೆಯಬಹುದು. ಟಿಕೆಟ್‌ ಬುಕ್ಕಿಂಗಾಗಿ ://../ ವೆಬ್‌ಸೈಟ್‌ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ  .. ಭೇಟಿ ನೀಡಿ. ಅಥವಾ 080 37230333, 080 35073966 ಸಂಖ್ಯೆಗೆ ಕರೆ ಮಾಡಬಹುದು.