ಕೃಷಿ ಮೇಳದ ವೀಕ್ಷಣೆಗೆ ಸಾಕ್ಷಿಯಾದ ಲಕ್ಷಾಂತರ ರೈತರು
ಶಿರಸಿ:ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.21 ರಿಂದ ನಡೆಯುತ್ತಿರುವ ಕೃಷಿ ಮೇಳದ ಭಾನುವಾರ ಲಕ್ಷಾಂತರ ರೈತರು ಆಗಮಿಸಿ ಕೃಷಿ ಮೇಳದ ವೀಕ್ಷಣೆಗೆ ಸಾಕ್ಷಿಯಾದರು‌.
ಕೃಷಿ ಮೇಳದಲ್ಲಿ ಕರ್ನಾಟಕ ಉತ್ತರ ಭಾಗದ ಬಹುತೇಕ ಜಿಲ್ಲೆಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.
ಈ ಬಾರಿಯ ಕೃಷಿ ಮೇಳದಲ್ಲಿ ಕೃಷಿ ಸಂಬಂಧಿತ ಯಂತ್ರೋಪಕರಣಗಳು ಈ ಬಾರಿಯ ವಿಶೇಷ ಆಕರ್ಷಣೆ ಯಾಗಿದ್ದು, ಅತ್ಯಾಧುನಿಕ ಟ್ರ್ಯಾಕ್ಟರ್, ನೇಗಿಲು, ಹಿಟಾಚಿ, ಧಾನ್ಯ ಬೇರ್ಪಡಿಸುವ ಯಂತ್ರ, ನೀರಾವರಿ ಉಪಕರಣ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರದರ್ಶನಕ್ಕಾಗಿ ಕಂಪನಿಗಳು ಆಗಮಿಸಿದ್ದವು.
ಎಂಟು ಜಿಲ್ಲೆಗಳಲ್ಲಿ ಅತ್ತಯತ್ತಮ ಕೃಷಿಕರಿಗೆ ಉತ್ತಮ ಕೃಷಿಕ ಪ್ರಶಸ್ತಿಯನ್ನೂ ಈ ಸಂದರ್ಬದಲ್ಲಿ ಕಾರ್ಮಿಕ ಸಚಿವ ತೋಷಲಾಡ್ ವಿತರಿಸಿದರು.
ಇದನ್ನೂ ಓದಿ:   : ಆರ್‌ಜಿ ಕರ್ ಆಸ್ಪತ್ರೆಯ ಮಾಜಿ ಪ್ರಿನ್ಸಿಪಾಲ್, ಪೊಲೀಸ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ; ಹಲವು ಆರೋಪಗಳು ದಾಖಲು