ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ನೀಡಿ
ದಾವಣಗೆರೆ:ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.೧೦೬ ರಷ್ಟು ಅಧಿಕ ಮಳೆಯಾಗಿದ್ದು ಅತೀವೃಷ್ಟಿಯಿಂದ ಜಿಲ್ಲೆಯಲ್ಲಿ ೧,೩೧೧ ಮನೆಗಳು ದುರಸ್ತಿಗೊಳಗಾಗಿವೆ. ಈ ಎಲ್ಲಾ ಮನೆಗಳಿಗೂ ಇನ್ನೆರಡು ದಿನಗಳಲ್ಲಿ ಪರಿಹಾರ ವಿತರಣೆ ಮಾಡಬೇಕೆಂದು ಎಲ್ಲಾತಹಶೀಲ್ದಾರ್‌ಗಳಿಗೆ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆ ಹಾನಿ ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೂರ್ವ ಮುಂಗಾರು ಹಾಗೂ ಜುಲೈ, ಆಗಸ್ಟ್ ತಿಂಗಳಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ೩೮೧, ದಾವಣಗೆರೆ ೧೭೫, ಹರಿಹರ ೧೭೩, ಹೊನ್ನಾಳಿ ೨೧೬, ಜಗಳೂರು ೧೬೧ ಹಾಗೂ ನ್ಯಾಮತಿಯಲ್ಲಿ ೨೦೫ ಮನೆಗಳು ದುರಸ್ತಿಗೆ ಒಳಗಾಗಿದ್ದು ಒಟ್ಟು ದುರಸ್ತಿಯಾದ ಮನೆಗಳಲ್ಲಿ ೫೨ ಎ, ೧೦೮ ಬಿ, ೧೫೩ ಸಿ ವರ್ಗದ ಮನೆಗಳು ಸೇರಿವೆ ಎಂದರು.
ಹರ್ ಘರ್ ತಿರಂಗಾ