ಅಮಾನಿಕೆರೆ ಪಾರ್ಕಿನಲ್ಲಿ ಹಾರಾಡುತ್ತಿದೆ 213 ಅಡಿ ಎತ್ತರದ ರಾಷ್ಟ್ರಧ್ವಜ
ರಾಷ್ಟ್ರಧ್ವಜದ ವಿಶೇಷ213 ಅಡಿ ಎತ್ತರ.48 ಅಡಿ ಅಗಲ.72 ಅಡಿ ಉದ್ದ.
ತುಮಕೂರು:ಅಮಾನಿಕೆರೆ ಪಾರ್ಕಿನಲ್ಲಿ 213 ಅಡಿ ಉದ್ದದ ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆಯುತ್ತಿದೆ.
ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ರಾಷ್ಟ್ರಧ್ವಜದ ಹಾರಾಟ ನೋಡುವುದು ಮುದ ನೀಡುತ್ತಿದೆ. ಅಮಾನಿಕೆರೆಗೆ ನೀರು ಹರಿಯುತ್ತಿರುವ ಸಂಭ್ರಮದೊಂದಿಗೆ ದೊಡ್ಡಮಟ್ಟದ ಧ್ವಜ ಸ್ವಾತಂತ್ರ್ಯ ದಿನೋತ್ಸವಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ.