ಪಾಲಿಕೆ ಮೇಯರ್ ಗದ್ದುಗೆ ಕಾಂಗ್ರೆಸ್ ಪಾಲಿಗೆ
ರಂಗನಾಥ ಕೆ.ಮರಡಿ
ಕೈ-ದಳ ಮೈತ್ರಿ
ಮೇಯರ್, ಉಪಮೇಯರ್ ಮೀಸಲು ಪ್ರಕಟ
ತುಮಕೂರು:ತುಮಕೂರು ಮಹಾನಗರ ಪಾಲಿಕೆ ಮೇಯರ್, ಉಪಮೆಯರ್ ಮೀಸಲು ಪ್ರಕಟಗೊಂಡಿದ್ದು, ಕಾಂಗ್ರೆಸ್ ಪಾಲಿಗೆ ಪಾಲಿಕೆ ಮೆಯರ್ ಗದ್ದುಗೆ ಒಲಿಯಲಿದೆ.
ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮೀಸಲಾಗಿದ್ದು, ಕಾಂಗ್ರೆಸ್ ಪಕ್ಷದ ೧೯ನೇ ವರ‍್ಡಿನ ರೂಪಶ್ರೀ ಅಥವಾ ೯ನೇ ವರ‍್ಡಿನ ಪ್ರಭಾವತಿ ಅವರಿಗೆ ಲಭಿಸಲಿದೆ.
ಮಹಾಪೌರರಾಗಲು ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಕಾಂಗ್ರೆಸ್ ವಲಯ ದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಉಪಮೇಯರ್ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿದ್ದು, ಜೆಡಿಎಸ್ ಪಕ್ಷಕ್ಕೆ ಒಲಿಯುವ ಸಾಧ್ಯತೆಯಿದೆ.
ಮೂರು ಪಕ್ಷಗಳಿಗೆ ಪಾಲಿಕೆಯಲ್ಲಿ ಬಹುಮತವಿಲ್ಲದ ಕಾರಣ ಕಾಂಗ್ರೆಸ್, ಜೆಡಿಎಸ್ ನಡುವೆ ಮೈತ್ರಿ ನಡೆಯುವ ಲಕ್ಷಣಗಳು ಕಂಡುಬಂದಿದೆ. ಪ್ರಸ್ತುತ ಬಿಜೆಪಿಯ ಕೃಷ್ಣಪ್ಪ ಮೇಯರ್ ಆಗಿದ್ದರು. ಅವಧಿ ಮುಗಿದರೂ ಕಾರಣಾಂತರದಿಂದ ಚುನಾವಣೆ ನಡೆಯದೆ ನನೆಗುದಿಗೆ ಬಿದ್ದಿತ್ತು.
ಪಾಲಿಕೆ ಬಲಾಬಲಒಟ್ಟು ೩೫ ಸದಸ್ಯರುಬಿಜೆಪಿ-೧೨ಕಾಂಗ್ರೆಸ್-೧೦ಜೆಡಿಎಸ್-೧೦ಪಕ್ಷೇತರ-೦೩