ಅಮೆಜಾ಼ನ್‌ನಲ್ಲಿ ಮಹಿಳೆಯರು ಗುರುತಿಸಬಲ್ಲ ತಂತ್ರಜ್ಞಾನ ಶಕ್ತಿಯಾಗಿದ್ದು ಹೇಗೆ!
ಅಮೆಜಾ಼ನ್‌ನಲ್ಲಿ ತಂತ್ರಜ್ಞಾನಕ್ಕೆ ಮಹಿಳಾ ಶಕ್ತಿ
ತಂತ್ರಜ್ಞಾನದಲ್ಲಿ ಮಹಿಳೆಯರು ಹಲವು ಉದ್ಯಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮೂಲಕ ಜಾಗತಿಕ ಪ್ರತಿಷ್ಠೆಯನ್ನು ಪಡೆದುಕೊಂಡಿದ್ದಾರೆ. ಒಂದೊಮ್ಮೆ ಪುರುಷರ ಪ್ರಭಾವ ಹೊಂದಿದ್ದ ವಲಯ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಮಹಿಳೆಯರು ಹೆಚ್ಚು ಹೆಚ್ಚು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಅತ್ಯಂತ ನಿರೀಕ್ಷೆಯಆಯ್ಕೆಯಾಗಿದೆ.
ಅಮೆಜಾ಼ನ್ ಸ್ವಾಗತಿಸುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ನಿರ್ಮಿಸು ವಲ್ಲಿ ನಂಬಿಕೆ ಇರಿಸಿದ್ದು ಇದು ಜನರಿಗೆ ಅವರ ಅತ್ಯುತ್ತಮ ಕೆಲಸ ಮಾಡುವಲ್ಲಿ ಅವಿಭಾಜ್ಯ ಅಂಗವಾಗಿದೆ ಮತ್ತು ಕಂಪನಿಯಾಗಿ ನಾವು ಏನು ಸಾಧಿಸುತ್ತೇವೋ ಅದಕ್ಕೆ ಅಗತ್ಯವಾಗಿದೆ. ವಿಶ್ವದಾದ್ಯಂತ ಅಮೆಜಾ಼ನಿಯನ್ನರು ಅವರ ದಿನಗಳನ್ನು ಗ್ರಾಹಕರಿಗೆ ಸಂತೃಪ್ತಿಪಡಿಸಲು ಮತ್ತು ಅವರ ಜೀವನ ಗಳನ್ನು ಸರಳಗೊಳಿಸಲು ಕಳೆಯುತ್ತಾರೆ.
ಮಹಿಳೆಯರು ಕಂಪನಿಯ ಅತ್ಯಂತ ದೊಡ್ಡ ಹಾಗೂ ಆವಿಷ್ಕಾರಕ ಉದ್ಯಮ ತಂಡ ಗಳನ್ನು ನಡೆಸುತ್ತಾರೆ ಮತ್ತು ಅಮೆಜಾ಼ನ್ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ಸಕಾರಾತ್ಮಕ ಪರಿಹಾರ ಬೀರುತ್ತಾರೆ. ಅಂತಹ ಎರಡು ಉದಾಹರಣೆಗಳಲ್ಲಿ ಅಮೆಜಾ಼ನ್‌ನಲ್ಲಿ ತಂತ್ರಜ್ಞಾನ ಪರಿಣಿತರಾಗಿ ಸಾಧನೆ ಮಾಡುವ ಮೂಲಕ ಅಡೆತಡೆಗಳನ್ನು ಮೀರಿದವರು ಅಮೆಜಾ಼ನ್ ಪ್ರೆöÊಮ್ ಇನ್‌ಸೈಟ್ಸ್ನ ಸಾಫ್ಟ್ವೇರ್ ಡೆವಲಪ್‌ಮೆಂಟ್ ಮ್ಯಾನೇಜರ್ ಶಿಪ್ರಾ ಜೈನ್ ಮತ್ತು ಅಮೆಜಾ಼ನ್ ಟಾಸ್ಕ್ಲೆಸ್‌ನ ಸಾಫ್ಟ್ವೇರ್ ಡೆವಲಪ್‌ಮೆಂಟ್ ಮ್ಯಾನೇಜರ್ ಅಪ್ಪರಸ್ಚೆರುವು ಇದ್ದಾರೆ.
ಅಮೆಜಾ಼ನ್‌ನಲ್ಲಿ ಶಿಪ್ರಾ ಪ್ರೆöÊಮ್‌ಗೆ ಮೂರನೇ ಪಾರ್ಟಿಗಳನ್ನು ಒಗ್ಗೂಡಿಸುವಲ್ಲಿ, ವಿದ್ಯಾರ್ಥಿಗಳ ಚಂದಾದಾರಿಕೆ ವಿಂಗಡಣೆ ಮತ್ತು ಉಳಿಸಿಕೊಳ್ಳುವುದರಲ್ಲಿ ಅಥವಾ ಅಮೆಜಾ಼ನ್ ಪ್ರೆöÊಮ್ ಚಂದಾದಾರಿಕೆಗಳ ಸೈನ್ ಅಪ್ ಸರಳಗೊಳಿಸುವುದಲ್ಲಿ ಪ್ರಮುಖರಾಗಿದ್ದಾರೆ. ತಮ್ಮ ಅನುಭವ ಕುರಿತು, “ಇಂಗ್ಲಿಷ್ ಮೀಡಿಯಂ ಶಾಲೆ ಇಲ್ಲದ ರಾಜಾಸ್ಥಾನದ ಸಣ್ಣ ನಗರದಲ್ಲಿ ಬೆಳೆದು ನಾನು ಸುದೀರ್ಘ ಹಾದಿ ಸವೆಸಿದ್ದೇನೆ ಮತ್ತು ಅಮೆಜಾ಼ನ್‌ನಲ್ಲಿ ಕೆಲಸ ಮಾಡಲು ಯಾವುದೇ ರೋಲ್ ಮಾಡೆಲ್‌ಗಳಿಲ್ಲ ಇಲ್ಲಿ ನನಗೆ ಅಮೆಜಾ಼ನ್ ಗ್ರಾಹಕರ ಮೇಲೆ ಗಮನಾರ್ಹ ರೀತಿಯಲ್ಲಿ ಪರಿಣಾಮ ಬೀರುವ ಉತ್ಸಾಹಕರ ಮತ್ತು ಕಠಿಣ ಸಮಸ್ಯೆಗಳ ಶ್ರೇಣಿಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಈ ಇಡೀ ಪ್ರಯಾಣ ಅತ್ಯಂತ ಉತ್ಸಾಹಕರ ಮತ್ತು ಸಂತೃಪ್ತಿಕರವಾಗಿದೆ” ಎಂದರು.
ಅಮೆಜಾ಼ನ್‌ನಲ್ಲಿ ತಮ್ಮ ವೃತ್ತಿಯಲ್ಲಿ ಎಂಟು ವರ್ಷಗಳಿಗೂ ಮೇಲ್ಪಟ್ಟು ಶಿಪ್ರಾ ಈಗಲೂ ಕಂಪನಿಯ ಉಪಕ್ರಮಗಳು ಮತ್ತು ಸಂಸ್ಕೃತಿಯಿAದ ಸ್ಫೂರ್ತಿ ಪಡೆಯುತ್ತಾರೆ. ಪ್ರಸೂತಿ ರಜೆಯ ನಂತರ ರ‍್ಯಾಂಪ್ ಬ್ಯಾಕ್ ಪ್ರೋಗ್ರಾಮ್ ಅಮೆಜಾ಼ನ್‌ನಂತಹ ಕಂಪನಿಯಲ್ಲಿ ಕೆಲಸ ಮಾಡುವಾಗ ಕಂಡ ದೊರೆಯುವ ಅನುಕೂಲಗಳ ಅತ್ಯುತ್ತಮ ಸಂಗತಿಗಳಲ್ಲಿ ಒಂದು ಎನ್ನುತ್ತಾರೆ ಮತ್ತು ಅವರು ಅದು ಕ್ರಮೇಣ ಕೆಲಸಕ್ಕೆ ಮರಳಲು ನೆರವಾಯಿತು ಮತ್ತು ಆಕೆಯ ಮಗಳಿಗೆ ಅವರ ಕೆಲಸದ ವೇಳಾಪಟ್ಟಿಯೊಂದಿಗೆಹೊಂದಿಕೊಳ್ಳಲು ನೆರವಾಯಿತು ಎನ್ನುತ್ತಾರೆ.
ಶಿಪ್ರಾ ಅವರು ಮಹಿಳೆಯರು ತಂತ್ರಜ್ಞಾನ ಕ್ಷೇತ್ರದಲ್ಲಿ ದೊರೆಯುತ್ತಿರುವ ಅವಕಾಶಗಳು ಮತ್ತು ಸುಧಾರಣೆಗಳ ಕುರಿತು ಅರಿವನ್ನು ಹೊಂದಬೇಕು ಎನ್ನುತ್ತಾರೆ. “ತಂತ್ರಜ್ಞಾನ ಉದ್ಯಮದಲ್ಲಿ ಅಪಾರವಾದ ಲಿಂಗ ತಾರತಮ್ಯವನ್ನು ನಿವಾರಿಸುವ ತುರ್ತು ಅಗತ್ಯವಿದೆ, ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವುದೇ ಮಹಿಳೆಯು ಪ್ರಾಮಾಣಿಕ ಮತ್ತು ಸ್ವಯಂ ಭರವಸೆ ಹೊಂದಿರಬೇಕು ಮತ್ತು ವೈವಿಧ್ಯಮಯ ಸನ್ನಿವೇಶಗಳನ್ನು ಎದುರಿಸಲು ನೆರವಾಗುವ, ಅವಕಾಶಗಳನ್ನು ಆವಿಷ್ಕರಿಸುವ ಮತ್ತು ಅವುಗಳನ್ನು ಪಡೆದುಕೊಳ್ಳುವ ಮಾರ್ಗದರ್ಶಕರು ಮತ್ತು ಪ್ರಾಯೋಜಕರನ್ನು ನಿರೀಕ್ಷಿಸಬೇಕು” ಎನ್ನುತ್ತಾರೆ.
ಮತ್ತೊಂದೆಡೆ ಹಿಮಜ ಅಪ್ಪರಸ್ಚೆರುವು ಹಲವು ಜವಾಬ್ದಾರಿಗಳನ್ನು ಹೊಂದಿದ್ದಾರೆ ಮತ್ತು ಗ್ರಾಹಕರಿಗ ಅತ್ಯಾಧುನಿಕ ಆವಿಷ್ಕಾರವನ್ನು ಉತ್ತೇಜಿಸುವಲ್ಲಿ ಪ್ರಮುಖರಾಗಿದ್ದಾರೆ.
ಅಮೆಜಾ಼ನ್‌ನಲ್ಲಿ ತನ್ನ ಇಡೀ ಪ್ರಯಾಣದಲ್ಲಿ ಹಲವಾರು ಉತ್ಸಾಹಕರ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಅಂತಹ ಯೋಜನೆಗಲಲ್ಲಿ ಒಂದು ವಿಎಎಸ್‌ಟಿ(ವೆಂಡರ್ ಅಪಾಯಿಂಟ್‌ಮೆAಟ್ ಶೆಡ್ಯೂಲಿಂಗ್ ಟೂಲ್) ಆಗಿದ್ದು ಅದು ಸಮಗ್ರವಾದ ಸೆಲ್ಫ್-ಸರ್ವೀಸ್ ಸಿಸ್ಟಂ ಆಗಿದ್ದು ಅದು ರಿಯಲ್ ಟೈಮ್‌ನಲ್ಲಿ ನಿಶ್ಚಿತ ಅಪಾಯಿಂಟ್‌ಮೆAಟ್ ದೃಢಪರಿಸುತ್ತದೆ. ಇದು ಮರು ನಿಗದಿ ಮತ್ತು ರದ್ದತಿಗಳನ್ನು ಕಡಿಮೆ ಮಾಡಿ ಅವರ ಆದ್ಯತೆಯ ಮೇಲೆ ಅಪಾಯಿಂಟ್‌ಮೆAಟ್‌ಗಳನ್ನು ನಿಗದಿಪಡಿಸಿಕೊಳ್ಳಲು ವೆಂಡರ್‌ಗಳಿಗೆ ಅವಕಾಶ ನೀಡುತ್ತದೆ. ವಿಎಎಸ್‌ಟಿಗೆ ಮುನ್ನ ಎಲ್ಲ ವೆಂಡರ್ ಅಪಾಯಿಂಟ್‌ಮೆAಟ್‌ಗಳನ್ನು ಭೌತಿಕವಾಗಿ(ಇಮೇಲ್‌ಗಳ ಮೂಲಕ) ನಿಗದಿಪಡಿಸಲಾಗುತ್ತಿತ್ತು ಮತ್ತು ದೃಢೀಕರಣಕ್ಕೆ ಮುನ್ನ ಹಲವಾರು ಮಾನವ ಸಂವಹನಗಳ ಅಗತ್ಯವಿತ್ತು. ಅವರು ಅಲೆಕ್ಸಾದಲ್ಲಿ ಕೆಲಸ ಮಾಡುವಾಗ ಗಮನಾರ್ಹ ಕೊಡುಗೆಗಳನ್ನು ನೀಡಿದ್ದು ಪೇ ವಿಥ್ ಅಲೆಕ್ಸಾ(ಪಿಡಬ್ಲೂö್ಯಎ) ಚಾರ್ಟರ್ ತ್ವರಿತವಾಗಿ ಮತ್ತು ಅತ್ಯಂತ ಸುಲಭವಾಗಿ ಗ್ರಾಹಕರಿಗೆ ಡಿಜಿಟಲ್ ಸೇವೆಗಳಿಗೆ ಪಾವತಿಸಲು ಧ್ವನಿ ಮೂಲಕ ಡಿಜಿಟಲ್ ಪಾವತಿಗಳನ್ನು ನೀಡುವ ಗುರಿ ಹೊಂದಿದೆ. ಅವರು ಅಮೆಜಾ಼ನ್ ಅಲೆಕ್ಸಾದಲ್ಲಿ ವಿದ್ಯಾರ್ಥಿಗಳು ಮತ್ತು ಎಲ್ಲ ವಯೋಮಾನದ ಶಿಕ್ಷಣಾರ್ಥಿಗಳಿಗೆ ಇಂಗ್ಲಿಷ್ ಕಲಿಯಲು “ವಿದ್ಯಾ” ಎಂಬ ಸಂವಹನ ಆಧರಿತ ಕೌಶಲ್ಯಗಳನ್ನೂ ಪರಿಚಯಿಸಿದ್ದಾರೆ.
ಅವರು ತಮ್ಮ ತಂಡದೊAದಿಗೆ ಇತ್ತೀಚೆಗೆ ಭಾರತ ಮತ್ತು ಮೆಕ್ಸಿಕೊ ಮಾರುಕಟ್ಟೆಗಳಲ್ಲಿ ಮಾರಾಟಗಾರರು, ರೀಟೇಲ್ ವೆಂಡರ್‌ಗಳು ಮತ್ತು ನಾನ್-ರೀಟೇಲ್ ವೆಂಡರ್‌ಗಳಿಗೆ ಟಿಡಿಎಸ್ ಕಾಂಪ್ಲಯನ್ಸ್ ಸೂಟ್ ಪರಿಚಯಿಸುವ ಮೂಲಕ ಅಲ್ಲಿನ ತೆರಿಗೆ ನಿಯಮಗಳಿಗೆ ಅನುಸರಣೆ ಹೊಂದುವAತೆ ಮಾಡಿದ್ದಾರೆ. ನಾನ್-ಇಂಟ್ರೂಸಿವ್ ತಾಂತ್ರಿಕ ಪರಿಹಾರಗಳ ಮೂಲಕ ಇದರ ಉದ್ದೇಶ ಗ್ರಾಹಕರು, ಉದ್ಯಮಿಗಳು ಮತ್ತು ತೆರಿಗೆ ಪ್ರಾಧಿಕಾರಗಳಿಗೆ ಟಾಸ್ಕ್ಲೆಸ್ ಅನುಭವ ನೀಡುವುದಾಗಿದೆ. ಹಲವು ವರ್ಷಗಳ ತಮ್ಮ ಯಶಸ್ಸಿನ ಕುರಿತು ಅವರು, “ವಿಕಾಸಗೊಳ್ಳುತ್ತಿರುವ ಮತ್ತು ಬದಲಾಗುತ್ತಿರುವ ತಾಂತ್ರಿಕ ಸನ್ನಿವೇಶವು ತಂತ್ರಜ್ಞಾನ ವಲಯದಲ್ಲಿ ಉಳಿಯಲು ಅಗತ್ಯವಾದ ಕುತೂಹಲ ಉಳಿಸಿದೆ. ಪ್ರಸ್ತುತ ಪ್ರವೃತ್ತಿಗಳ ವೇಗಕ್ಕೆ ಅನುಗುಣವಾಗಿ ನಾವು ಈಗಾಗಲೇ ಕಲಿತದ್ದನ್ನು ಪುನರಾವರ್ತಿತವಾಗಿ ಮರೆತುಬಿಡಬೇಕಾಗುತ್ತದೆ ಏಕೆಂದರೆ ತಂತ್ರಜ್ಞಾನ ಉದ್ಯಮದಲ್ಲಿ ಕಲಿಕೆ ಎಂದೂ ಸ್ಥಿರವಾಗಿರುವುದಿಲ್ಲ” ಎಂದರು.
ಅಮೆಜಾ಼ನ್‌ನಲ್ಲಿ ತಮ್ಮ ಉದ್ಯೋಗದ ಪ್ರಯಾಣದ ಕುರಿತು ಹಿಮಜಾ, “ನನಗೆ ಅತ್ಯಂತ ಕಠಿಣ ಅಡೆತಡೆ ಎಂದರೆ ಎರಡು ಹೆರಿಗೆ ರಜೆ ಪಡೆದುಕೊಂಡೂ ನನ್ನದೇ ಸ್ಥಾನವನ್ನು ರೂಪಿಸಿಕೊಳ್ಳಲು ಶಕ್ತಳಾಗಿದ್ದು. ಅದರಲ್ಲಿಯೂ ಕೋವಿಡ್ ಸಂದರ್ಭದಲ್ಲಿ ಸ್ವಯಂ ಮತ್ತು ಗೃಹಕೃತ್ಯ ನಿರ್ವಹಣೆ ಮಾಡುವುದು ಕಠಿಣವಾಗಿತ್ತು. ನಾನು ಅಸಂಖ್ಯ ಸಂದರ್ಭದಲ್ಲಿ ಕೆಲಸದಿಂದ ಬಿಡುವು ಪಡೆದುಕೊಳ್ಳಲು ಬಯಸಿದ್ದೆ. ಆದರೆ ನನ್ನ ಕುಟುಂಬ, ಮಿತ್ರರು ಮತ್ತು ಸಹ-ಕೆಲಸಗಾರರ ನೆರವಿನಿಂದ ನಾನು ಮುಂದುವರಿಯಲು ಮತ್ತು ಬಲವಾಗಿ ಹೊರಹೊಮ್ಮಲು ಸಾಧ್ಯವಾಗಿದೆ” ಎಂದರು.
ಅವರು ಅಮೆಜಾ಼ನ್‌ನೊಂದಿಗೆ ಕೆಲಸ ಮಾಡುವ ಮೂಲಕ ಹೆಚ್ಚಿನ ಶಕ್ತಿ ಪಡೆದರು ಮತ್ತು ಆಂತರಿಕ ವರ್ಗಾವಣೆ ಅವಕಾಶಗಳು ಮತ್ತು ಮೆಂಟರ್‌ಶಿಪ್ ಕಾರ್ಯಕ್ರಮಗಳ ಮೂಲಕ ಅವರ ಉದ್ಯೋಗದ ಪ್ರಗತಿಗೆ ಮಾರ್ಗದರ್ಶನ ಮತ್ತು ಬೆಂಬಲ ಪಡೆದರು.