 : ಬೆಂಗಳೂರಿನ ಗುಹೆಯಲ್ಲಿ ಕಂಡುಬಂದರೇ 188 ವಯಸ್ಸಿನ ಬಾಬಾ? ನಿಜಕ್ಕೂ ಯಾರಿವರು?
ಬೆಂಗಳೂರು: ಬೆಂಗಳೂರು ( ) ಸಮೀಪದ ಕಾಡಿನ ಗುಹೆಯೊಂದರಿಂದ 188 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಹೊರಗೆ ಕರೆತರಲಾಗಿದೆ ಎಂಬ ಸುದ್ದಿ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನಿನ್ನೆಯಿಂದ ವೈರಲ್ ಆಗುತ್ತಿದೆ. ‘ಕನ್ಸರ್ನ್ಡ್ ಸಿಟಿಜನ್’ ಎಂಬ ಹ್ಯಾಂಡಲ್‌ನಿಂದ  ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ತುಣುಕು ದಿಢೀರ್‌ ವೈರಲ್‌ ( ) ಆಗಿದೆ. ಸುಮಾರು 2.9 ಕೋಟಿ ಜನ ಇದನ್ನು ವೀಕ್ಷಿಸಿದ್ದಾರೆ. ಇದೀಗ ಇದರ ಫ್ಯಾಕ್ಟ್‌ ಚೆಕ್‌ ( ) ಮಾಡಲಾಗಿದೆ.
“ಈ ಭಾರತೀಯ ವ್ಯಕ್ತಿ ಈಗಷ್ಟೇ ಗುಹೆಯಲ್ಲಿ ಪತ್ತೆಯಾಗಿದ್ದಾರೆ. ಆತನಿಗೆ 188 ವರ್ಷ ವಯಸ್ಸಾಗಿದೆ ಎಂದು ಹೇಳಲಾಗಿದೆ. ಅದ್ಭುತ” ಎಂದು ಈ ವೀಡಿಯೊಗೆ ಕ್ಯಾಪ್ಷನ್‌ ಹಾಕಲಾಗಿದೆ. 24 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ, ಇಬ್ಬರು ವ್ಯಕ್ತಿಗಳು ಆ ವೃದ್ಧರಿಗೆ ನಡೆಯಲು ಸಹಾಯ ಮಾಡುತ್ತಾರೆ. ಬೆನ್ನು ಬಾಗಿರುವ, ಬಿಳಿ ಗಡ್ಡವನ್ನು ಹೊಂದಿರುವ ಈ ವೃದ್ಧರು ವಾಕಿಂಗ್ ಸ್ಟಿಕ್ ಬಳಸಿ ನಡೆಯುತ್ತಾರೆ.
ಆದರೆ ಇದು ನಿಜಾನಾ? 188 ವರ್ಷ ವಯಸ್ಸಿನ ವ್ಯಕ್ತಿ ಇರುವುದು ಸಾಧ್ಯವಾ? ಅದೂ ಬೆಂಗಳೂರಿನ ಬಳಿ? ಈ ವೈರಲ್‌ ವೀಡಿಯೊವನ್ನು ಪರಿಶೀಲನೆಗೆ ಒಳಪಡಿಸಿದಾಗ ತಿಳಿದುಬಂದ ಸತ್ಯವೇ ಬೇರೆ. ವೀಡಿಯೊದಲ್ಲಿರುವ ಈ ವ್ಯಕ್ತಿಗೆ 110 ವರ್ಷ ವಯಸ್ಸಾಗಿದೆ. ಮತ್ತು ಇವರು ಬೆಂಗಳೂರಿನವರಲ್ಲ. ಇವರು ಮಧ್ಯಪ್ರದೇಶದ ಒಬ್ಬ ಹಿಂದೂ ಸಂತ.
🇮🇳          .’  ’ 188  . .../a7DgyFWeY6
ಸ್ವತಃ  ಮೀಡಿಯಾ ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಸ್ಪಷ್ಟನೆ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಉಲ್ಲೇಖಿಸಲಾದ ವಯಸ್ಸು ನಿಖರವಾಗಿಲ್ಲದಿರಬಹುದು ಎಂದಿದೆ. “ಇದು ತಪ್ಪು ಮಾಹಿತಿ. ಈ ವಯಸ್ಸಾದ ವ್ಯಕ್ತಿ ಭಾರತದ ಮಧ್ಯಪ್ರದೇಶದಲ್ಲಿ ವಾಸಿಸುವ ‘ಸಿಯಾರಾಮ್ ಬಾಬಾ’ ಎಂಬ ಹಿಂದೂ ಸಂತ. ವರದಿಗಳ ಪ್ರಕಾರ ಅವರು ಸುಮಾರು 110 ವರ್ಷ ವಯಸ್ಸಿನವರು” ಎಂದು ಎಕ್ಸ್ ಟಿಪ್ಪಣಿ ಇದೆ.
2024ರ ಜುಲೈ 2 ರಂದು ನವಭಾರತ್ ಟೈಮ್ಸ್‌ನಲ್ಲಿ ಬಂದ ಒಂದು ಲೇಖನ ಈ ಕುರಿತು ವಿವರ ನೀಡಿತ್ತು. ವರದಿಯ ಪ್ರಕಾರ ಸಿಯಾರಾಮ್ ಬಾಬಾ ಅವರ ವಯಸ್ಸು 109. ಸಿಯಾರಾಮ್ ಬಾಬಾ ಅವರು ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ವಾಸಿಸುತ್ತಾರೆ ಮತ್ತು ಈ ಪ್ರದೇಶದಲ್ಲಿ ತುಂಬಾ ಜನಪ್ರಿಯರು.
ಡೇಟಾ ಪರಿಶೀಲನೆ ಗುಂಪು ಡಿ-ಇಂಟೆಂಟ್ ಡೇಟಾ ಕೂಡ ಈ ವೈರಲ್ ವೀಡಿಯೊ ದಾರಿತಪ್ಪಿಸುವಂತಿದೆ ಎಂದಿದೆ. “ವಿಡಿಯೊ ಮಾಹಿತಿ ದಾರಿತಪ್ಪಿಸುವಂತಿದೆ. 188 ವರ್ಷ ವಯಸ್ಸಿನ ಭಾರತೀಯ ವ್ಯಕ್ತಿಯೊಬ್ಬರು ಗುಹೆಯಲ್ಲಿ ಪತ್ತೆಯಾಗಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವೆಂದರೆ ಈ ಹೇಳಿಕೆ ನಿಜವಲ್ಲ. ಇವರು ಭಾರತದ ಮಧ್ಯಪ್ರದೇಶದಲ್ಲಿ ವಾಸಿಸುವ ‘ಸಿಯಾರಾಮ್ ಬಾಬಾ’ ಎಂಬ ಸಂತ” ಎಂದಿದೆ.
ಇದನ್ನೂ ಓದಿ:   :  14 ದೇವಾಲಯಗಳ ಸಾಯಿಬಾಬಾ ವಿಗ್ರಹ ತೆರವು; ಮೃತರ ಮೂರ್ತಿಗಳಿಗೆ ದೇಗುಲದಲ್ಲಿ ಸ್ಥಳವಿಲ್ಲಎಂದ ಹಿಂದೂಪರ ಸಂಘಟನೆಗಳು