 : ಪೋಸ್ಟ್ ಮಾರ್ಟಂ ಬೇಡ, ತನಿಖೆ ಬೇಡ! ಸಾಯುವ ಮುನ್ನ ಯುವತಿ ವಿಚಿತ್ರ ಡೆತ್‌ ನೋಟ್
ಬೆಂಗಳೂರು: ವಿಚಿತ್ರವಾದ ಡೆತ್ ನೋಟ್‌ ( ) ಒಂದನ್ನು ಬರೆದಿಟ್ಟು ಯುವತಿಯೊಬ್ಬರು ಆತ್ಮಹತ್ಯೆ ( ) ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶ ಮೂಲದ ಯುವತಿ ಬೆಂಗಳೂರಿನಲ್ಲಿ ( ) ಡೆತ್‌ನೋಟ್‌ ಬರೆದಿಟ್ಟು ಪಿಜಿ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವತಿ ಗುರುವಾರ ತಾನು ಇದ್ದ ಪಿಜಿಯ ಐದನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮುನ್ನ ಈ ಯುವತಿ ಬರೆದಿಟ್ಟಿರುವ ಪತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಕಡಪ ಮೂಲದ ಗೌತಮಿ ಎನ್ನುವ ಯುವತಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಟಿಸಿಎಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ನಿನ್ನೆ ಸಂಜೆ ಏಳು ಗಂಟೆಯಲ್ಲಿ ವೈಟ್​ಫೀಲ್ಡ್​ ()ನ ಪ್ರಶಾಂತ್ ಲೇಔಟ್​ನಲ್ಲಿ ಘಟನೆ ನಡೆದಿದೆ. ಪಿಜಿಯ ಐದನೇ ಮಹಡಿಯಿಂದ ಹಾರಿ ಗೌತಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ಗೌತಮಿ ಡೆತ್​ನೋಟ್​ ಬರೆದಿಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್​ ಬರೆದಿಟ್ಟಿದ್ದು, ‘ನನ್ನ ಮೃತ ದೇಹವನ್ನು ಪಿಎಂ(ಪೋಸ್ಟ್​ ಮಾರ್ಟಂ) ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. ನನ್ನ ಪೋಷಕರಿಗೆ‌ ನನ್ನ ಮೃತ ದೇಹ ನೀಡಿʼ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:  : ಐಫೋನ್ ನೀಡಲು ಬಂದ ಡೆಲಿವರಿ ಬಾಯ್‍ ಕೊಲೆಯಾಗಿದ್ದು ಹೇಗೆ?