 : ‘ಮುಖಪುಸ್ತಕದ ಮರೆಯದ ಮುಖಗಳು’ ಕೃತಿ ಬಿಡುಗಡೆ ಇಂದು
ಬೆಂಗಳೂರು:ಲೇಖಕ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರ ‘ಮುಖಪುಸ್ತಕದ ಮರೆಯದ ಮುಖಗಳು’ ಕೃತಿ ಬಿಡುಗಡೆ ಸಮಾರಂಭ ( ) ಅಕ್ಟೋಬರ್ 5 ರಂದು ಸಂಜೆ 4 ಗಂಟೆಗೆ ನಗರದ ಬಸವೇಶ್ವರ ವೃತ್ತದ ಬಳಿಯ ಬಸವ ಸಮಿತಿಯಲ್ಲಿ ಏರ್ಪಡಿಸಲಾಗಿದೆ.
ಮೈಸೂರಿನ ಕವಿತಾ ಪ್ರಕಾಶನದ ಮೂಲಕ ಪ್ರಕಟಗೊಂಡ ಈ ಕೃತಿಯನ್ನು ಹಿರಿಯ ಲೇಖಕ ಡಾ.ಎಸ್.ಜಿ. ಸಿದ್ದರಾಮಯ್ಯ ಬಿಡುಗಡೆಗೊಳಿಸುವರು. ಹಿರಿಯ ಲೇಖಕ ರಂಜಾನ್ ದರ್ಗಾ ಕೃತಿ ಪರಿಚಯಿಸುವರು.
ಈ ಸುದ್ದಿಯನ್ನೂ ಓದಿ |  : ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ
ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಶ್ರೀನಿವಾಸ ಬಿದರಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ, ಬಿಎಲ್‌ಡಿಇ ಸಂಸ್ಥೆ ನಿರ್ದೇಶಕ ಬಸನಗೌಡ ಪಾಟೀಲ ಹಾಗೂ ಕೆಎಸ್ ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿಕೆಎಂ ಭಾಗವಹಿಸುವರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸುವರು.
ಈ ಸುದ್ದಿಯನ್ನೂ ಓದಿ |   2024: ನವರಾತ್ರಿ ಸೀರೆಗಳ ಮೇಲೆ ಮೂಡಿದ ದುರ್ಗಾವತಾರ!
ಕಾರ್ಯಕ್ರಮಕ್ಕೆ ಮುನ್ನ ಜ್ಯೋತಿರ್ಲಿಂಗ ಹೊನಕಟ್ಟಿ ಅವರ ಜಾನಪದ ಗಾಯನವಿದೆ ಎಂದು ಕವಿತಾ ಪ್ರಕಾಶನದ ಗಣೇಶ ಅಮೀನಗಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.