 : ದಾಸರಹಳ್ಳಿ ಮೀಸಲು ಅರಣ್ಯದಲ್ಲಿ ಶವ ಸಂಸ್ಕಾರ- ಖಂಡನೆ
ತುಮಕೂರು:ತಾಲ್ಲೂಕಿನ ಕಸಬಾ ಹೋಬಳಿ ತಿಪ್ಪನಹಳ್ಳಿ ಗ್ರಾಮದ ಸರ್ವೆ ನಂ 35ರ ದಾಸರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶವ ಸಂಸ್ಕಾರ ಮಾಡಿ ಅರಣ್ಯ ಕಾಯ್ದೆ ಮತ್ತು ಅರಣ್ಯ ಅಧಿನಿಯಮ ಉಲ್ಲಂಘನೆ ಮಾಡಿರುವುದನ್ನು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯು ಖಂಡಿಸಿದೆ.
ತಿಪ್ಪನಹಳ್ಳಿ ಸರ್ವೆ ನಂ-35೫ರಲ್ಲಿ 482.10ಎಕರೆ ಗುಂಟೆ ಪ್ರದೇಶವು ಸಂಪೂರ್ಣ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು 1878ರ ಅರಣ್ಯ ಕಾಯಿದೆ ಸೆಕ್ಷನ್ 9ರ ಪ್ರಕಾರ ಮಹರಾಜ ಮೈಸೂರು ಸರಕಾರವು ದಿ: 02.06.1896 ರಂದು ದಾಸರಹಳ್ಳಿ ಅರಣ್ಯ ನೆಡುತೋಪು ಎಂದು ಮೈಸೂರು ಗೆಜೆಟ್ ನೋಟಿಫಿಕೇಷನ್‌ಲ್ಲಿ ನಮೂದಾಗಿದೆ ನಂತರದಲ್ಲಿ ದಿನಾಂಕ 07.01.1901ರಲ್ಲಿ ಈ ಪ್ರದೇಶವನ್ನು ರಾಜ್ಯ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿದೆ.
ಆದರೆ ದಿನಾಂಕ ೧೭.೦೨.೨೦೧೮ರಂದು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಬಗರ್ ಹುಕುಂ ಕಮಿಟಿಯಲ್ಲಿ ನಂತರದಲ್ಲಿ ಬಂದಂತಹ ತಾಲ್ಲೂಕು ತಹಶೀಲ್ದಾರ್ ರವರು ಹಿಂದೆಮುAದೆ ನೋಡದೇ ಮೀಸಲು ಅರಣ್ಯ ಪ್ರದೇಶ ದಲ್ಲಿ ಬಗರ್ ಹುಕುಂ ಅರ್ಜಿದಾರರಿಗೆ ಜಮೀನು ಮಂಜೂರು ಮಾಡಿ ಅರಣ್ಯ ಕಾಯ್ದೆ ಮತ್ತು ಅರಣ್ಯ ಅಧಿನಿಯಮ ವನ್ನು ಉಲ್ಲಂಘಿಸಿದ್ದಾರೆ.