 : ವಿದ್ಯಾನಿಧಿ 48 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ತುಮಕೂರು:ಆಟೋಟಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯವಿರುವುದು ಮಾತ್ರವಲ್ಲ, ಮನೋದೈಹಿಕ ಕ್ಷಮತೆ ಹೆಚ್ಚಿಸುವ ಮೂಲಕ ಕಲಿಕೆಗೆ ಪೂರಕವಾಗಿ ಇವು ಒದಗುತ್ತವೆ. ತರಗತಿಯಲ್ಲಿ ಆಸಕ್ತಿಯಿಂದ ಪಾಠ ಕೇಳುವುದಕ್ಕೆ, ಸಮಸ್ಯೆಗಳನ್ನು ಬಿಡಿಸುವುದಕ್ಕೆ ನೆರವಾಗುವುದಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಸ್ಪೋಟ್ಸ್ ಕೋಟಾದಲ್ಲಿ ಸೀಟುಗಳೂ ಮೀಸಲಿರುತ್ತವೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಓದಿನ ಜತೆಗೆ ಆಟೋಟಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು.
ಅಥ್ಲೆಟಿಕ್ಸ್ ನಲ್ಲಿ ಶಿವಾನಿ ಹಾಗೂ ತನಿಷ್ಕ್ ನೂರು ಮೀ. ಓಟ, ಇನ್ನೂರು ಮೀ.ಓಟ, 4 * 400 ಮೀ ರಿಲೇ, ಯಶಸ್ವಿನಿ 800 ಮೀ. ಓಟ, ನಯನಾ 4* 400 ಮೀ ರಿಲೇ, ಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾನಿಧಿ ಬಾಲಕರ ಫುಟ್ ಬಾಲ್ ತಂಡದಲ್ಲಿ ಸೃಜನ್ ಸಿಂಹ, ಮಿಥಿಲ್ ರಾಜ್, ವಿಶ್ವಾಸ್, ಆದಿತ್ಯ, ಸಿದ್ಧಾರ್ಥ, ಯುವರಾಜ್, ಪುನೀತ್, ಶಶಾಂಕ್, ವೈಭವ್ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.
ವಿದ್ಯಾನಿಧಿ ಬಾಲಕಿಯರ ಫುಟ್ ಬಾಲ್ ತಂಡದಲ್ಲಿ ರಿಷಿಕಾ ಜೈನ್, ರಿಷಿಕಾ ಆರ್., ಮಾನ್ಯ ಕೆ. ಸಾಂಘ್ವಿ, ವಂಶಿಕಾ, ಯೋಗಿತಾ, ಮೋನಿಕಾ, ಹರ್ಷಿತಾ, ನೇಹಾ ಅಫ್ರೀನ್, ಮಹಿ ಜೈನ್, ಮಧುರಾ, ನಯನಾ ಪ್ರದೀಪ್, ಸಾಂಪ್ರತಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯೋಗದಲ್ಲಿ ಮೀನಾಕ್ಷಿ, ಚೆಸ್‌ನಲ್ಲಿ ಶ್ರೇಯಸ್ ಮತ್ತು ಶ್ರವಣ್, ಷಟಲ್ ಬ್ಯಾಡ್ಮಿಂಟನ್ ನಲ್ಲಿ ಲಿಖಿತ್ ಜೆ. ಮತ್ತು ತರುಣ್ ಆರ್., ಟೇಕ್ವಾಂಡೋದಲ್ಲಿ ಸೋಹನ್, ಶ್ರೀಹರಿ ಮತ್ತು ಶ್ರೇಯಸ್ ರಾಜ್ಯಮಟ್ಟದಲ್ಲಿ ಸ್ಪರ್ಧೆಯನ್ನೊಡ್ಡ ಲಿದ್ದಾರೆ.
ಹೇಮಶ್ರೀ (ಕುಸ್ತಿ), ಶ್ಯಾಮ್ ಸುಂದರ್ (ಕರಾಟೆ), ಗಗನ್ (ಜಿಮ್ನಾಸ್ಟಿಕ್), ಯಶ್ವಂತ್ (ಹ್ಯಾಂಡ್‌ಬಾಲ್), ದರ್ಶನ್, ಶ್ರೀ ಹರಿ (ವಾಲಿ ಬಾಲ್), ಹನ್ಸಿನ್ ರಾಜ್ (ಸ್ವಿಮ್ಮಿಂಗ್) ನಲ್ಲಿ ಆಯ್ಕೆಯಾಗಿದ್ದಾರೆ.
ನೆಟ್‌ಬಾಲ್‌ನಲ್ಲಿ ಮನೋಜ್, ಚೇತನ್, ಯಶ್ವಂತ್, ಶಶಾಂಕ್, ಧನುಷ್, ಜೀವನ್, ಗಗನ್, ಜಯಂತ್ ರಾಜ್ಯಮಟ್ಟ ದಲ್ಲಿ ಸ್ಪರ್ಧಿಸಲಿದ್ದಾರೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕವೃಂದದವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಇದನ್ನೂ ಓದಿ: : ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್ ಎಂಬುದು ಸುಳ್ಳು ಸುದ್ದಿ