ದಲಿತ ಕುಟುಂಬಕ್ಕೆ ದೇವಸ್ಥಾನದ ಪ್ರವೇಶ ನಿರ್ಬಂಧ: ವಿಡಿಯೋ ವೈರಲ್‌
ಗುಬ್ಬಿ:ದೇವಸ್ಥಾನದ ಪ್ರವೇಶ ನಿರ್ಬಂಧಿಸಿದ ಅರ್ಚಕ ತಾಲೂಕಿನ ನಿಟ್ಟೂರು ಗ್ರಾಮದ ಶ್ರೀ ಮುಳಕಟ್ಟಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರಅಸಮಾಧಾನಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ದಲಿತ ಕುಟುಂಬಕ್ಕೆ ದೇವಾಲಯ ದ ಅರ್ಚಕ ಪ್ರವೇಶ ನಿರಾಕರಿಸಿದ್ದಾನೆ. ನಂತರ ಇಬ್ಬರ  ಪರಸ್ಪರ ವಾದ ವಿವಾದ ನಡೆದಿದ್ದು ಅರ್ಚಕರು ಪೂಜೆ ಮಾಡದೆ  ಪೂಜೆ ಸಾಮಾನು ವಾಪಸ್ಸು ಕೊಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ.