400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರಿಂದ ಸಾಮೂಹಿಕ ರಾಜೀನಾಮೆ
ಗುಬ್ಬಿ:ಚೇಳೂರು  ಶ್ರೀ ಮರಳು ಬಸವೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಶಾಸಕ ಎಸ್ಆರ್ ಶ್ರೀನಿವಾಸ್( ವಾಸಣ್ಣ) ಅಭಿಮಾನಿ ಬಳಗದ ವತಿಯಿಂದ ಹಮ್ಮಿ ಕೊಂಡಿದ್ದ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕಾರ್ಯಕ್ರಮದಲ್ಲಿ  ಸುಮಾರು 400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟ ಹಾಗೂ ಪ್ರಾಥ ಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀ ನಾಮೆ ನೀಡಿ ಜೆಡಿಎಸ್ ವಿರುದ್ಧ ಪ್ರತಿಭಟಿಸಿದರು.