ಎರಡನೇ ಶಾಖೆ ತೆರೆದ ಎಡೆಲ್ವೀಸ್ ವೆಲ್ತ್ ಮ್ಯಾನೇಜ್ ಮೆಂಟ್
ಬೆಂಗಳೂರು:ಹಣಕಾಸು ಅಡೈಸರಿ ಸಂಸ್ಥೆಯಾದ ಎಡೆಲ್ವೀಸ್ ವೆಲ್ತ್ ಮ್ಯಾನೇಜ್ ಮೆಂಟ್(ಇಡಬ್ಲ್ಯೂಎಂ) ವಿಭಾಗವಾದ ಎಡೆಲ್ವೀಸ್ ಪರ್ಸನಲ್ ವೆಲ್ತ್ ಬೆಂಗಳೂರಿನ ವಾಲ್ಟನ್ ರಸ್ತೆಯಲ್ಲಿ ತನ್ನ ಹೊಸ ಶಾಖೆ ತೆರೆದಿದೆ.
ಈ ಶಾಖೆಯ ಪ್ರಾರಂಭದೊದಿಗೆ ಈ ವೆಲ್ತ್ ಮ್ಯಾನೇಜ್ಮೆಂಟ್ ಕಛೇರಿಗೆ ಈಗ ಬೆಂಗಳೂರಿನಲ್ಲಿ 2 ಶಾಖೆಯನ್ನು ಹೊಂದಿದಲಾಗಿದೆ. ಈಗಾಗಲೇ 900ಕ್ಕೂ ಹೆಚ್ಚು ಪಾಲುದಾರರ ಫ್ರಾಂಚೈಸಿ ಹೊಂದದಿರುವ ಈ ಸಂಸೈ, ಪ್ರಸ್ತುತ 65ಕ್ಕೂ ಹೆಚ್ಚು ಸ್ವಂತ ಶಾಖೆಗಳನ್ನು ತೆರೆಯಲಾಗಿದೆ. 2023ರೊಳಗೆ 100ಕ್ಕೂ ಹೆಚ್ಚು ಶಾಖೆಗಳನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ ಎಂದು ನೂತನ ಶಾಖೆ ಉದ್ಘಾಟಿಸಿದ ಎಡೆಲ್ವೀಸ್ ವೆಲ್ತ್ ಮ್ಯಾನೇಜ್ಮೆಂಟ್ ನ ಪರ್ಸನಲ್ ವೆಲ್ತ್ ಅಧ್ಯಕ್ಷ ಮತ್ತು ಮುಖ್ಯಸ್ಥ ರಾಹುಲ್ ಜೈನ್ ತಿಳಿಸಿದರು.
ಕಳೆದೆರಡು ವರ್ಷಗಳಿಂದ ಕೋವಿಡ್‌ನಿಂದ ಸಾಕಷ್ಟು ಜನ ಆರ್ಥಿಕವಾಗಿ ಏಟು ತಿಂದಿದ್ದರು. ಇಡಬ್ಲ್ಯೂಎಂ ಒಂದು ವಹಿವಾ ಟಾಗಿ ಸದಾ ಮುಂಚೂಣಿಯಲ್ಲಿದೆ, ಇದೀಗ ಹೈಬ್ರಿಡ್ ಬಿಸಿನೆಸ್ ಮಾದರಿಯಾಗಿ ವಿಕಾಸಗೊಂಡಿದೆ. ಹೀಗಾಗಿ ಗ್ರಾಹಕರಿಗೆ ಹಣಕಾಸು ಅಡೈಸರಿಯನ್ನು ವರ್ಚುಯಲ್ ರೂಪದಲ್ಲಿಯೂ ನೀಡಲಾಗುತ್ತಿದೆ ಎಂದರು. ಇನ್ನು 2023ರ ಹಣಕಾಸು ವರ್ಷದ ಅಂತ್ಯಕ್ಕೆ ನಮ್ಮ ಬಳಕೆದಾರರ ಪ್ರಮಾಣವನ್ನು ಶೇ,60ಕ್ಕೆ ಹೆಚ್ಚಿಸುವ ವಿಶ್ವಾಸ ಹೊಂದಿದ್ದೇವೆ.
ಎಡೆಲ್ವೀಸ್ ಮೊಬೈಲ್ ಟ್ರ್ಯಾಕರ್(ಇಎಂಟಿ) ಅಪ್ಲಿಕೇಷನ್ ಬೆಂಗಳೂರಿನಾದ್ಯಂತ ಬಳಕೆದಾರರಲ್ಲಿ ಗಮನಾರ್ಹ ಹೆಚ್ಚಳ ತೋರಿದೆ. ಕಂಪನಿಯ ಆಂತರಿಕ ವಿಶ್ಲೇಷಣೆಯ ಆಧಾರದಲ್ಲಿ, 2022ರ ಹಣಕಾಸು ವರ್ಷದ ಇನ್-ಹೌಸ್ ಮೊಬೈಲ್ ಟ್ರೇಡರ್ಸ್ ಗೂಗಲ್ ಅನಲಿಟಿಕ್ಸ್ ನಲ್ಲಿ ಬೆಂಗಳೂರಿನಲ್ಲಿ ಇಎಂಟಿ ಅಪ್ಲಿಕೇಷನ್ ಗಳನ್ನು ನೀಡುತ್ತಿರುವ ಹೂಡಿಕೆದಾರರಲ್ಲಿ ವರ್ಷದಿಂದ ವರ್ಷಕ್ಕೆ ಶೇ.39ರಷ್ಟು ಪ್ರಗತಿ ಕಂಡಿದೆ. ಈ ಹೇಳಲಾದ ಸಂಖ್ಯೆಯು ಕರ್ನಾಟಕದಲ್ಲಿ ಶೇ.41 ಮತ್ತು ಭಾರತಕ್ಕೆ ಶೇ.41 ಆಗಿದೆ.
ಹೆಚ್ಚುವರಿಯಾಗಿ, ಎಡೆಲ್ವೀಸ್ ಮೊಬೈಲ್ ಟ್ರೇಡರ್ ಗೂಗಲ್ ಪ್ಲೇಸ್ಟೋರ್ ನಲ್ಲಿ ಅಕ್ಟೋಬರ್ 18,2022ರಂತೆ 4.7ರ ರೇಟಿಂಗ್ ಮೂಲಕ ಅತ್ಯಂತ ಹೆಚ್ಚಿನ ರೇಟಿಂಗ್ ಹೊಂದಿರುವ ಮಾರ್ಕೆಟ್ಸ್ ಆಪ್ ಆಗಿದೆ.
ಎಡೆಲ್ವೀಸ್ ವೆಲ್ತ್ ಮ್ಯಾನೇಜ್ ಮೆಂಟ್ ಜನರಿಗೆ ಸಾಕಷ್ಟು ಸೇವೆಯನ್ನು ನೀಡಿತ್ತಾ ಬಂದಿದೆ. ಅದರಲ್ಲಿ ಪ್ರಮುಖವಾಗಿ ಈಕ್ವಿಟಿ, ನಿಶ್ಚಿತ ಆದಾಯ, ಕಾರ್ಪೊರೇಟ್ ಎಫ್.ಡಿ.ಗಳು, ಎನ್.ಸಿ.ಡಿ.ಗಳು, ಬಾಂಡ್ ಗಳು, ಸಾಲ, ವಿಮೆ, ಮ್ಯೂಚುಯಲ್ ಫಂಡ್ ಗಳು, ಸ್ಟ್ರಕ್ಚರ್ಡ್ ಉತ್ಪನ್ನಗಳು, ಪಿ.ಎಂ. ಮತ್ತು ಪರ್ಯಾಯ ಒಳಗೊಂಡು 45ಕ್ಕೂ ಹೆಚ್ಚು ಉತ್ಪನ್ನಗಳನ್ನು ವಿತರಿಸುತ್ತದೆ.
ಹೆಚ್ಚುವರಿಯಾಗಿ ಗ್ರಾಹಕರು ನಮ್ಮ ವೆಲ್ತ್ ಮ್ಯಾನೇಜರ್ ಗಳ ಸಹಾಯದಿಂದ ನೇರ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ವಿವರಣೆ ನೀಡಿದರು.