ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ: ಪ್ರವೀಣ್ ಸೂದ್ ಆದೇಶ
ಬೆಂಗಳೂರು:ವಾಹನಗಳಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ, ಅಪಘಾತ ಗಳಲ್ಲಿ ವಾಹನ ಸವಾರರು ಸಾವನ್ನಪ್ಪುತ್ತಿದ್ದು, ಕೇಂದ್ರ ಸರ್ಕಾರದಿಂದ ವಾಹನ ಚಾಲನೆ ವೇಳೆ ಸೀಟ್ ಬೆಲ್ಡ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ.
ಈಗಾಗಲೇ ಮುಂಬೈನಲ್ಲಿ ಈ ನಿಯಮ ನವೆಂಬರ್ 1ರಿಂದ ಜಾರಿಗೊಳ್ಳಲಿದೆ. ಕರ್ನಾಟಕ ದಲ್ಲಿಯೂ ವಾಹನ ಚಾಲನೆ ವೇಳೆ ಸೀಟ್ ಬೆಲ್ಡ್ ಧರಿಸುವುದನ್ನು ಕಡ್ಡಾಯಗೊಳಿಸಿ, ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಾರು ತಯಾರಕರಿಗೆ ಹಿಂಭಾಗದ ಸೀಟ್ ಬೆಲ್ಟ್ಗಳಿಗೆ ಅಲಾರಂ ವ್ಯವಸ್ಥೆ ಸ್ಥಾಪಿಸುವುದನ್ನು ಕಡ್ಡಾಯಗೊಳಿಸಲು ಕರಡು ನಿಯಮಗಳನ್ನು ಹೊರಡಿಸಿದ್ದರು.
ನವೆಂಬರ್ 1, 2022ರಿಂದ ಮುಂಬೈನಲ್ಲಿ ವಾಹನ ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ಇಂದಿನಿಂದಲೇ ಜಾರಿಗೆ ಬರುವಂತೆ ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಈ ನಿಯಮವನ್ನು ಮೀರು ವಂತವರಿಗೆ 1 ಸಾವಿರ ದಂಡ ವಿಧಿಸಲಾಗುತ್ತದೆ ಎಂಬುದಾಗಿ ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.