ಬೆಂಗಳೂರು ವಿಮಾನ ನಿಲ್ದಾಣ: ಪ್ರಸ್ತುತ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಟ್ರಾಫಿಕ್ ನಲ್ಲಿ ಗಮನಾರ್ಹ ಪ್ರಗತಿ
*ಪ್ರಸ್ತುತ ಹಣಕಾಸು ವರ್ಷದಲ್ಲಿ ಅಕ್ಟೋಬರ್ 26ರವರೆಗೆ 16-30 ಮಿಲಿಯನ್ ಪ್ರಯಾಣಿಕರ ಪ್ರಮಾಣ ದಾಖಲು• ಟ್ರಾಫಿಕ್ ರಿಕವರಿ ಅಕ್ಟೋಬರ್ 2019ರ ಅವಧಿಗಿಂತಲೂ ಅಕ್ಟೋಬರ್ 2022ರಲ್ಲಿ ಸ್ಥಳೀಯ ಪ್ರಯಾಣಿಕರ ಪ್ರಮಾಣ ಶೇ.102 ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ ಶೇ.85 ಹೆಚ್ಚಾಗಿದೆ• ದೆಹಲಿ, ಮುಂಬೈ, ಕೊಲ್ಕತಾ, ಕೊಚ್ಚಿ ಮತ್ತು ಪುಣೆ ಶೇ.44ರಷ್ಟು ಕೊಡುಗೆ ನೀಡಿದ ಮುಂಚೂಣಿಯ ಸ್ಥಳೀಯ ತಾಣಗಳು• ದುಬೈ, ದೋಹಾ, ಸಿಂಗಪೂರ್, ಫ್ರಾಂಕ್ ಫರ್ಟ್ ಮತ್ತು ಮಾಲೆ ಶೇ.54ರಷ್ಟು ಅಂತಾರಾಷ್ಟ್ರೀಯ ಟ್ರಾಫಿಕ್ ನೀಡಿದ ಮುಂಚೂಣಿಯ ಅಂತಾರಾಷ್ಟ್ರೀಯ ಮಾರ್ಗಗಳು
ಬೆಂಗಳೂರು:ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಕ್ಟೋಬರ್ 26, 2022ರವರೆಗೆ 2023ರ ಪ್ರಸ್ತುತ ಹಣಕಾಸು ವರ್ಷದಲ್ಲಿ ಹೆಚ್ಚಿನ ಟ್ರಾಫಿಕ್ ಸಂಖ್ಯೆಯಿಂದ ಕೋವಿಡ್-ಪೂರ್ವ ಪ್ರಯಾಣಿಕರ ಮಟ್ಟಕ್ಕೆ ಮರಳಿದೆ.
ಪ್ರಯಾಣಿಕರ ಪುನಶ್ಚೇತನ, ಪ್ರಯಾಣಿಕರ ಟ್ರಾಫಿಕ್ ಪ್ರಮಾಣಗಳಲ್ಲಿ ಪ್ರಸ್ತುತ ಆವೇಗವನ್ನು ಪ್ರದರ್ಶಿಸಿದ್ದು ಅಕ್ಟೋಬರ್ 2019ಕ್ಕೆ ಹೋಲಿಸಿದರೆ ಅಕ್ಟೋಬರ್ 2022ರಲ್ಲಿ ಸ್ಥಳೀಯ ಪ್ರಯಾಣದಲ್ಲಿ ಶೇ.102ರಷ್ಟು ಪ್ರಗತಿ ಮತ್ತು ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇ.85ರಷ್ಟು ಪ್ರಗತಿ ದಾಖಲಿಸಿದೆ.
ಬೆಂಗಳೂರು ವಿಮಾನ ನಿಲ್ದಾಣವು ಪ್ರಸ್ತುತ ಹಣಕಾಸು ವರ್ಷದಲ್ಲಿ ಅಕ್ಟೋಬರ್ ತಿಂಗಳ ಕೊನೆಯ ವಾರದವರೆಗೆ 16.30 ಮಿಲಿಯನ್ ಪ್ರಯಾಣಿಕರನ್ನು ಸ್ವಾಗತಿಸಿತ್ತು, ಕಳೆದ ವರ್ಷ ಇದೇ ಅವಧಿಯಲ್ಲಿ 10.9 ಮಿಲಿಯನ್ ಪ್ರಯಾಣಿಕರು ಇದ್ದರು.ಈ ಟ್ರಾಫಿಕ್ ಪುನಶ್ಚೇತನವು ರಜಾದಿನಗಳು ಮತ್ತು ಹಬ್ಬದ ಋತುವಿನಿಂದ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಲಯ ಗಳಲ್ಲೂ ಕಂಡುಬಂದಿದೆ. ಅಕ್ಟೋಬರ್ 21ರಂದು ದೀಪಾವಳಿ ವಾರಾಂತ್ಯದ ಹಬ್ಬದ ಋತುವಿನ ಪ್ರಾರಂಭವಾಗಿದ್ದು ಬೆಂಗಳೂರು ವಿಮಾನ ನಿಲ್ದಾಣದಿಂದ 94,330 ಪ್ರಯಾಣಿಕರು ಪ್ರಯಾಣಿಸಿದ್ದಾರೆ.
“ಕಳೆದ ಆರು ತಿಂಗಳಲ್ಲಿ ವೈಮಾನಿಕ ಮಾರುಕಟ್ಟೆಯು ಅಪಾರ ಪ್ರಗತಿಯನ್ನು ಕಂಡಿದೆ ಮತ್ತು ಇದು ಪ್ರಯಾಣಿಕರ ಪ್ರಮಾಣಕ್ಕೆ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ. ವೈಮಾನಿಕ ಪ್ರಯಾಣವು ಸಾಂಕ್ರಾಮಿಕದಿಂದ ಗಮನಾರ್ಹ ರೀತಿಯಲ್ಲಿ ಪರಿಣಾಮ ಬೀರಿತ್ತು, ಆದರೆ ಈಗ ಪುನಶ್ಚೇತನಗೊಳ್ಳುತ್ತಿದೆ ಮತ್ತು ನಾವು ಇತ್ತೀಚಿನ ತಿಂಗಳುಗಳಲ್ಲಿ ಪ್ರಗತಿಯನ್ನು ಕಂಡಿದ್ದೇವೆ. ಈ ಪ್ರಗತಿಯ ಪ್ರವೃತ್ತಿಯು ಮುಂದಿನ ಕೆಲ ತಿಂಗಳು ಮುಂದುವರಿಯುತ್ತದೆ ಎಂಬ ಆಶಾವಾದ ನಮ್ಮದು.
ಬೆಂಗಳೂರು ವಿಮಾನ ನಿಲ್ದಾಣವು ತನ್ನ ಕನೆಕ್ಟಿವಿಟಿಯಿಂದ ಉತ್ತಮ ಸಂಖ್ಯೆಯ ಪ್ರಯಾಣಿಕರನ್ನು ಪಡೆಯುತ್ತಿದೆ ಮತ್ತು ಆದ್ಯತೆಯ ವರ್ಗಾವಣೆ ಕೇಂದ್ರವಾಗಿದೆ. ಟರ್ಮಿನಲ್ 2 ಪ್ರಾರಂಭದಿಂದ ನಾವು ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ ನಮ್ಮ ಸ್ಥಾನವನ್ನು ಮತ್ತಷ್ಟು ಸದೃಢಗೊಳಿಸಿಕೊಳ್ಳುತ್ತಿದ್ದೇವೆ” ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಚೀಫ್ ಸ್ಟ್ರಾಟಜಿ ಅಂಡ್ ಡೆವಲಪ್ಮೆಂಟ್ ಆಫೀಸರ್ ಸಾತ್ಯಕಿ ರಘುನಾಥ್ ಹೇಳಿದರು.
ದಕ್ಷಿಣ ಭಾರತದ ಆದ್ಯತೆಯ ವರ್ಗಾವಣೆ ಕೇಂದ್ರ:ಈ ಸ್ಥಿರವಾದ ಪ್ರಗತಿಯಿಂದ ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲಿ ಮುಂಚೂಣಿಯ ಟ್ರಾನ್ಸ್ ಫರ್ ಗೇಟ್ ವೇ ಎಂದು ರೂಪುಗೊಂಡಿದೆ. ದೆಹಲಿ, ಮುಂಬೈ, ಕೊಲ್ಕತಾ, ಕೊಚ್ಚಿ ಮತ್ತು ಪುಣೆಗಳು ಮುಂಚೂಣಿಯ ಸ್ಥಳೀಯ ಮಾರ್ಗಗಳಾಗಿದ್ದು ಎಲ್ಲ ಟ್ರಾಫಿಕ್ ನ ಶೇ.44ರಷ್ಟಿದೆ, ದುಬೈ, ದೋಹಾ, ಸಿಂಗಪೂರ್, ಫ್ರಾಂಕ್ ಫರ್ಟ್ ಮತ್ತು ಮಾಲೆ ಮುಂಚೂಣಿಯ ಅಂತಾರಾಷ್ಟ್ರೀಯ ಮಾರ್ಗಗಳಾಗಿದ್ದು 2023ರ ಹಣಕಾಸು ವರ್ಷದಿಂದ ಇಲ್ಲಿಯವರೆಗೆ ಶೇ.54ರಷ್ಟು ಕೊಡುಗೆ ನೀಡಿವೆ. ಅಂತಾರಾಷ್ಟ್ರೀಯ ವಲಯದ ಪ್ರಗತಿಯು ಹೆಚ್ಚಾಗುವ ನಿರೀಕ್ಷೆಯಿದ್ದು ಹೆಚ್ಚು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಸಾಮರ್ಥ್ಯ ಸೇರ್ಪಡೆ ಮಾಡುತ್ತಿವೆ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಗಳನ್ನು ಮತ್ತೆ ಪ್ರಾರಂಭಿಸುತ್ತಿವೆ.
ಹೆಚ್ಚುವರಿಯಾಗಿ ಸ್ಥಳೀಯ ತಾಣಗಳಿಗೆ ವಿಮಾನಗಳ ಸಂಖ್ಯೆ ಹೆಚ್ಚಳವು ಟೈಯರ್ / ನಗರಗಳಿಗೆ ಹೆಚ್ಚಿಸಲಾದ ಕನೆಕ್ಟಿವಿಟಿಗೆ ಅವಕಾಶ ನೀಡಿದೆ. ಇದರ ಫಲಿತಾಂಶದಿಂದ ಏಪ್ರಿಲ್-ಸೆಪ್ಟೆಂಬರ್ 22ರ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ನಾನ್-ಮೆಟ್ರೊ ಟ್ರಾಫಿಕ್ ಪ್ರಮಾಣವು ಶೇ.58ರಷ್ಟು ಹೆಚ್ಚಿದ್ದು ಟ್ರಾನ್ಸ್ ಫರ್ ಟ್ರಾಫಿಕ್ ಶೇ.14ರಷ್ಟಿದೆ.
ಪ್ರಗತಿ ಕಾಣುತ್ತಿರುವ ಏರ್ ಟ್ರಾಫಿಕ್ ಮೂವ್ ಮೆಂಟ್ಸ್ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಮೂವ್ ಮೆಂಟ್ಸ್(ಎಟಿಎಂ) 2023ರ ಹಣಕಾಸು ವರ್ಷದಲ್ಲಿ 118,852 ಎಟಿಎಂಗಳಿಗೆ ಪುನಶ್ಚೇತನ ಕಂಡಿದೆ. ಸ್ಥಳೀಯ ಎಟಿಎಂಗಳು 105,354 ಇದ್ದರೆ ಅಂತಾರಾಷ್ಟ್ರೀಯ ಎಟಿಎಂಗಳು 13,498 ಆಗಿವೆ.
ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು:ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಾದ ಕ್ವಾಂಟಾಸ್ ಮತ್ತು ಕ್ಯಾಥೇ ಪೆಸಿಫಿಕ್ ಬೆಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು ಮತ್ತು ಈ ಪ್ರಾರಂಭದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಅಪಾರ ಹೆಚ್ಚಳ ಕಂಡವು. ಎಮಿರೇಟ್ಸ್, ಏರ್ ಫ್ರಾನ್ಸ್, ಕೆ.ಎಲ್.ಎಂ, ಜಪಾನ್ ಏರ್ ಲೈನ್ಸ್ ಮತ್ತು ಕುವೈತ್ ಏರ್ ವೇಸ್ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಿವೆ. ಇಥಿಯೋಪಿಯನ್, ಮಾಲಿಂಡೊ ಏರ್ ಮತ್ತು ಏರ್ ಏಷ್ಯಾ ಪ್ರಯಾಣಿಕರ ನಿಗದಿತ ವಿಮಾನಗಳನ್ನು ಮತ್ತೆ ಪ್ರಾರಂಭಿಸಿವೆ. ಹೆಚ್ಚಿನ ಬೇಡಿಕೆಯಿಂದ ಎಮಿರೇಟ್ಸ್ ಎ380ಯನ್ನು ಬೆಂಗ ಳೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸಲು ಕಾರಣವಾಗಿದೆ. ಜಝೀರಾ ಏರ್ ವೇಸ್ ನವೆಂಬರ್ 4, 2022ರಿಂದ ವಾರಕ್ಕೆ ಎರಡು ವಿಮಾನಗಳ ಮೂಲಕ ಬೆಂಗಳೂರಿನಲ್ಲಿ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದೆ.
ದೀಪಾವಳಿಯ ಸಂದರ್ಭದಲ್ಲಿ ದಾಖಲೆಯ ಪ್ರಯಾಣಿಕರ ಪ್ರಯಾಣದೀಪಾವಳಿಯ ಸಂದರ್ಭದಲ್ಲಿ ವಿಮಾನ ನಿಲ್ದಾಣವು ಆರು ದಿನಗಳ ಅವಧಿಯಲ್ಲಿ 5.2 ಲಕ್ಷ ಸ್ಥಳೀಯ ಪ್ರಯಾಣಿಕರ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಟ್ರಾಫಿಕ್ 70,000 ಪ್ರಯಾಣಿಕರನ್ನು ದಾಖಲಿಸಿದೆ.
ಪ್ರಯಾಣಿಕರ ಪ್ರಮಾಣಗಳು:
ವಿವರಗಳು ಪ್ರಯಾಣಿಕರ ಟ್ರಾಫಿಕ್(ಮಿಲಿಯನ್) ಪ್ರಯಾಣಿಕರ ಎಟಿಎಂಗಳುಸ್ಥಳೀಯ ಅಂತಾರಾಷ್ಟ್ರೀಯ ಒಟ್ಟು ಸ್ಥಳೀಯ ಅಂತಾರಾಷ್ಟ್ರೀಯ ಒಟ್ಟುವೈಟಿಡಿ(ಅಕ್ಟೋಬರ್ 26ರವರೆಗೆ) 14.34 1.96 16.30 105,354 13,498 118,852
ಅಕ್ಟೋಬರ್ 20-26ರಲ್ಲಿ ಟ್ರಾಫಿಕ್20--2022 78,873 10,508 89,381 548 54 60221--2022 81,692 12,638 94,330 555 64 61922--2022 82,130 12,023 94,153 553 59 61223--2022 73,554 11,061 84,615 548 60 60824--2022 61,120 8,841 69,961 512 57 56925--2022 68,535 8,513 77,048 533 57 59026--2022 77,857 10,822 88,679 553 61 614
ಪ್ಯಾಕ್ಸ್ ಟ್ರಾಫಿಕ್ ಪ್ರಮಾಣದಲ್ಲಿ ಅಕ್ಟೋಬರ್ 20-26ರ ಅವಧಿಯಲ್ಲಿ ಮುಂಚೂಣಿಯ 3 ಸ್ಥಳೀಯ ತಾಣಗಳು: ದೆಹಲಿ, ಮುಂಬೈ ಮತ್ತು ಕೊಚ್ಚಿ