 : ಕಾರಿನೊಳಗೆ ಕೊಳೆತ ಶವ ಪತ್ತೆ, ಕೊಲೆ ಶಂಕೆ
ಚಾಮರಾಜನಗರ: ಚಾಮರಾಜನಗರ ( ) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾರಿನೊಳಗೆ ವ್ಯಕ್ತಿಯ ಕೊಳೆತ ಶವ ( ) ಪತ್ತೆಯಾಗಿದೆ. ಹ್ಯಾಂಡ್ ಪೋಸ್ಟ್ ಬಸ್ ನಿಲ್ದಾಣ ಬದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ( ) ಗಂಡಸಿನ ಶವ ಕಂಡುಬಂದಿದೆ.
ಸುಮಾರು 40ರಿಂದ 45 ವರ್ಷದ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಸ್ವಿಪ್ಟ್ ಕಾರಿನ ಹಿಂಬದಿ ಸೀಟ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಶವ ಕಂಡುಬಂದಿದೆ. ಕಾರಿನ ಡೋರ್‌ನಿಂದ ರಕ್ತ ಕೆಳಗಡೆ ಸುರಿದು ವಾಸನೆ ಬಂದದ್ದನ್ನು ಸಾರ್ವಜನಿಕರು ಗಮನಿಸಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದಾಗಿ ಶವವಿದ್ದುದು ಗೊತ್ತಾಗಿದೆ.
ಕಾರಿನಲ್ಲಿದ್ದ ವ್ಯಕ್ತಿ ಬನಿಯನ್ ಹಾಗೂ ಚಡ್ಡಿ ಧರಿಸಿದ್ದ. ದೇಹ ಕೊಳೆತು ದುರ್ವಾಸನೆ ಬರುತ್ತಿತ್ತು. ವ್ಯಕ್ತಿ ಸತ್ತು ಎರಡು ದಿನಗಳು ಕಳೆದಿರಬಹುದು. ಇದು ಕೊಲೆ ಎಂದು ಶಂಕಿಸಲಾಗಿದೆ. ಕಾರಿನ ಕಿಟಕಿ ಬಾಗಿಲು ಸಂಪೂರ್ಣ ಬಂದ್‌ ಮಾಡಿ ಮಲಗಿದ್ದುದರಿಂದ ಉಸಿರುಗಟ್ಟಿ ಮೃತಪಟ್ಟಿರುವ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಪೊಲೀಸರಿಉ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಪಿಐ ಶಿವಮಾದಯ್ಯ, ಎಸ್‌ಐ ಸುಪ್ರೀತ್, ಕ್ರೈಂ ಪಿಎಸ್‌ಐ ಚಲುವರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: : ಪ್ರೀತಿಸಿದ್ದು ಅಣ್ಣ, ಕೊಲೆಯಾದದ್ದು ತಮ್ಮ; ಹೆತ್ತವರ ಮುಂದೆಯೇ ಇರಿದು ಕೊಲೆ