ಕಾಂಗ್ರೆಸ್ ಪಕ್ಷದಿಂದ ವಾಸಣ್ಣನವರ ಸ್ಪರ್ಧೆ ಬಹುತೇಕ ಖಚಿತ
ಗುಬ್ಬಿ :ತಾಲೂಕಿನ ಮಂಚಲ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚುವೀರನಹಳ್ಳಿಯಲ್ಲಿ ನಡೆದ ಜೆಡಿಎಸ್ ಬೂತ್ ಮಟ್ಟ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಎಂ ಆರ್ ರಂಗಸ್ವಾಮ ಯ್ಯ, ಶಾಸಕ ಶ್ರೀನಿವಾಸ್ ರವರ ಕುಟುಂಬ ಮೂಲತ ಕಾಂಗ್ರೆಸ್ ಪಕ್ಷದವರಾಗಿದ್ದು ಅನಿವಾರ್ಯವಾಗಿ ಜೆಡಿಎಸ್ ಸೇರಿದ್ದರು.
ನಾವುಗಳು ಸುಮಾರು 40 ವರ್ಷಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ವಾಸಣ್ಣನವರ ಸ್ಪರ್ಧೆ ಬಹುತೇಕ ಖಚಿತವಾಗಿದ್ದು ನಮ್ಮ ಭಾಗದ ಎಲ್ಲಾ ಕಾಂಗ್ರೆಸ್ ಕಾರ್ಯ ಕರ್ತರು ಸಹ ಅವರನ್ನು ಬೆಂಬಲಿಸಿದಾಗಿ ತಿಳಿಸಿದರು.