ಕಾಮಗಾರಿಗೆ ಗುದ್ದಲಿ ಪೂಜೆ
ಗುಬ್ಬಿ :ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಲಕ್ಕೇನಹಳ್ಳಿ, ತಿಮ್ಮಪ್ಪನ ಹಟ್ಟಿ, ಕಾಡೇಗೌಡನ ಹಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿ ಕಾಮಗಾರಿ ಹಾಗೂ ಗ್ರಾಮೀಣ ಪಂಚಾಯಿತಿ ರಾಜ್ ಇಲಾಖೆ ವತಿಯಿಂದ ರಾಯವಾರ,ಚಿದಂಬರ ಆಶ್ರಮದಿಂದ ಬಿದರೆ, ಅಮ್ಮನಘಟ್ಟ ಕೂಡುವ ರಸ್ತೆಯವರೆಗೂ ಒಂದು ಕೋಟಿ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಎಸ್ಆರ್ ಶ್ರೀನಿವಾಸ್ ರವರು ನೆರವೇರಿಸಿದರು.