ಸೂಪರ್ಗೇಮಿಂಗ್ನಿoದ ಸೂಪರ್ಪ್ಲಾಟ್ಫಾರ್ಮ್ಗೆ ಆತಿಥ್ಯ ವಹಿಸಲಿರುವ ಗೂಗಲ್ ಕ್ಲೌಡ್
ಬೆಂಗಳೂರು:ಜನಪ್ರಿಯ ಗೇಮ್ಗಳಾದ ಮಾಸ್ಕ್ಗನ್ ಮತ್ತು ಪ್ಯಾಕ್-ಮ್ಯಾನ್ಗಳನ್ನು ಅಭಿವೃದ್ಧಿ ಪಡಿಸಿರುವ ಸಂಸ್ಥೆ ಸೂಪರ್ಗೇ ಮಿಂಗ್, ಈಗ ‘ಇಂಡಸ್’ ಎಂಬ ಶೀರ್ಷಿಕೆಯ ಸಂಪೂರ್ಣ- ನೂತನ ಬ್ಯಾಟಲ್ ರಾಯಲ್ ಆಟವನ್ನು ನಿರ್ಮಿಸುವ ಪ್ರಕ್ರಿಯೆ ಯಲ್ಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಕಾಮಿಕ್ ಕಾನ್ ಬೆಂಗಳೂರು 2022 ರಲ್ಲಿ ಈ ಮೇಡ್ ಇನ್ ಇಂಡಿಯಾ ಆಟವನ್ನು ಸಾರ್ವಜನಿಕರಿಗೆ ಪರೀಕ್ಷಾರ್ಥವಾಗಿ ತೆರೆಯಲಾಗಿತ್ತು. ಜೋರ್ಡ್ಇಂಡಿಯನ್ ಖ್ಯಾತಿಯ ನೇಸರ್ ಮತ್ತು ವಿನೀತ್ ಸೇರಿದಂತೆ ಬೆಂಗಳೂರಿನ ಸುಮಾರು 300 ಅತ್ಯಂತ ಆಸಕ್ತ ಗೇಮರ್ಗಳು ಭಾರತದ ಈ ಮೊದಲ ಬ್ಯಾಟಲ್ ರಾಯಲ್ ಆಟದ ಪ್ರಥಮ ಅನುಭವವನ್ನು ಪಡೆದಿದ್ದರು. ಬಿಡುಗಡೆಯಾದ ನಂತರ ಪಬ್ಜಿ ಮತ್ತು ಫೋರ್ಟ್ನೈಟ್ನಂತಹ ಆಟಗಳಿಗೆ ಭಾರತದ ಈ ಗೇಮ್ ಉತ್ತರವಾಗಲಿದೆ.
ಇದರ ಬಿಡುಗಡೆ ಕಾರ್ಯತಂತ್ರದ ಭಾಗವಾಗಿ, ಸೂಪರ್ಗೇಮಿಂಗ್ ತನ್ನ ಅತ್ಯುತ್ತಮ-ವರ್ಗದ ಲೈವ್ ಒಪಿಎಸ್ ಎಂಜಿನ್-ಸೂಪರ್ಪ್ಲಾಟ್ಫಾರ್ಮ್ಗೆ ಆತಿಥ್ಯ ವಹಿಸಲಿದೆ. – ಗೂಗಲ್ ಕ್ಲೌಡ್ನಲ್ಲಿ ಸೂಪರ್ಪ್ಲಾಟ್ಫಾರ್ಮ್ ಜಗತ್ತಿನ ಎಲ್ಲೆಡೆಯ ಗೇಮ್ ಡೆವಲಪ ರ್ಗಳಿಗೆ ತಾವು ಲಭ್ಯವಾಗುವಂತೆ ಮಾಡುತ್ತದೆ. ಇದು ಪ್ರಸ್ತುತ ಸೂಪರ್ಗೇಮಿಂಗ್ನ ಎಲ್ಲಾ ಪ್ರಯತ್ನಗಳಿಗೆ ಶಕ್ತಿ ನೀಡುವ ಪರೀಕ್ಷಿತ ಕ್ಲೌಡ್ ಮೂಲಸೌಕರ್ಯದೊಂದಿಗೆ ಉತ್ತಮ ಗೇಮ್ಗಳನ್ನು ಸೃಷ್ಟಿಸಲು ಗೇಮ್ ಡೆವಲಪರ್ಗಳಿಗೆ ಅಧಿಕಾರ ನೀಡುತ್ತದೆ. ಇದು ಸೂಪರ್ಪ್ಲಾಟ್ಫಾರ್ಮ್ನಲ್ಲಿ ಅಭಿವೃದ್ಧಿಪಡಿಸಲಾದ ಪ್ಯಾಕ್-ಮ್ಯಾನ್ ಮತ್ತು ಮಾಸ್ಕ್ಗನ್ಗಳನ್ನು ಒಳಗೊಂಡಿದೆ, ಇದು ಕ್ರಮವಾಗಿ ಒಂದು ಬಿಲಿಯನ್ಗಿಂತಲೂ ಹೆಚ್ಚು ಡೌನ್ಲೋಡ್ಗಳನ್ನು ಕಂಡಿರುವುದಲ್ಲದೇ ಮತ್ತು 65 ದಶಲಕ್ಷಕ್ಕೂ ಹೆಚ್ಚು ಆಟಗಾರರನ್ನು ಹೊಂದಿದೆ.
“ನಮ್ಮ ಗೇಮ್ಗಳನ್ನು ಯಶಸ್ವಿಗೊಳಿಸುವುದರಲ್ಲಿ ಸೂಪರ್ಪ್ಲಾಟ್ಫಾರ್ಮ್ ಮೂಲ ಅಂಶವಾಗಿದೆ” ಎಂದು ಸೂಪರ್ಗೇಮಿಂಗ್ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕರಾದ ರಾಬಿ ಜಾನ್ ಹೇಳಿದರಲ್ಲದೇ, “ಇದನ್ನು ಗೇಮ್ ಡೆವಲ ಪರ್ಗಳು, ಗೇಮ್ ಡೆವಲಪರ್ಗಳಿಗಾಗಿ ತಯಾರಿಸಲಾಗಿದೆ. ಇದನ್ನು ಮಾರುಕಟ್ಟೆಗೆ ತರುವಲ್ಲಿ, ತನ್ನ ವ್ಯಾಪ್ತಿ, ತಾಂತ್ರಿಕ ಪರಿಣತಿ ಮತ್ತು ತನ್ನ ವರ್ಗದಲ್ಲಿ ಅತ್ಯುತ್ತಮ-ದರ್ಜೆಯ ಮೂಲಸೌಕರ್ಯಗಳಿಂದಾಗಿ ಗೂಗಲ್ ಕ್ಲೌಡ್ ನಮ್ಮ ಪಾಲುದಾರನಾಗಿ ಸ್ಪಷ್ಟವಾದ ಆಯ್ಕೆಯಾಗಿದೆ” ಎಂದರು.
“ಗೂಗಲ್ ಕ್ಲೌಡ್ ಗೇಮಿಂಗ್ ಕಡೆಗೆ ಒಂದು ದೊಡ್ಡದಾಗಿ ಗಮನ ನೀಡುತ್ತಿದೆ. ನಾವು ಈ ಜಾಗದಲ್ಲಿ ನಮ್ಮ ಜಾಗತಿಕ ಹೂಡಿಕೆ ಗಳನ್ನು ಹೆಚ್ಚಿಸಿದ್ದೇವೆ ಅಲ್ಲದೇ ಮಾರುಕಟ್ಟೆಯಿಂದ ನಮಗೆ ಲಭಿಸುತ್ತಿರುವ ಪ್ರತಿಕ್ರಿಯೆ ಕುರಿತು ಉತ್ಸಾಹಿತರಾಗಿದ್ದೇವೆ.’’ ಎಂದು ಗೂಗಲ್ ಕ್ಲೌಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಬಿಕ್ರಮ್ ಸಿಂಗ್ ಬೇಡಿ ಹೇಳಿದರಲ್ಲದೇ, “ಸೂಪರ್ಪ್ಲಾಟ್ಫಾರ್ಮ್ನಂತ ಹ ಉನ್ನತೀಕರಣಗಳು ಸತತವಾಗಿ ವಿಕಾಸಗೊಳ್ಳುತ್ತಿರುವ ಪರಿಸರ ವ್ಯವಸ್ಥೆಗೆ ಸ್ವಾಗತಾರ್ಹ ಸೇರ್ಪಡೆಗಳಾಗಿವೆ. ಪ್ರಮಾಣಕ್ಕೆ ತಕ್ಕಂತೆ ನಿರ್ಮಿಸಲು ಮತ್ತು ಸೂಪರ್ಗೇಮಿಂಗ್ನ ನಿರ್ದಿಷ್ಟತೆಯನ್ನು ಗೇಮಿಂಗ್ನಲ್ಲಿ ನಿರ್ಮಿಸಲು ಡೆವಲಪರ್ಗಳಿಗೆ ಅವಕಾಶ ಮಾಡಿ ಕೊಡುವ ಗೂಗಲ್ ಕ್ಲೌಡ್ನ ಮೂಲಸೌಕರ್ಯದೊಂದಿಗೆ, ನಾವು ನಿಜವಾಗಿಯೂ ಪರಿಣಾಮ ಮತ್ತು ನವೀನತೆಗೆ ಹೆಚ್ಚಿನ ಚಾಲನೆ ನೀಡಬಹುದು ಮತ್ತು ಹೆಚ್ಚಿನ ಸಂಖ್ಯೆಯ ಗೇಮ್ಗಳು ಭಾರತದಿಂದ ಹೊರಬರುವುದನ್ನು ನೋಡಬಹುದು” ಎಂದರು.
ಇದರೊoದಿಗೆ ಹೆಚ್ಚುವರಿಯಾಗಿ, ಮುಂಬರುವ ಸೂಪರ್ ಗೇಮಿಂಗ್ ಶೀರ್ಷಿಕೆಗಳಾದ ಇಂಡೋ-ಫ್ಯೂಚರಿಸ್ಟಿಕ್ ಬ್ಯಾಟಲ್ ರಾಯಲ್, ಇಂಡಸ್ ಮತ್ತು ಟವರ್ ಕಾಂಕ್ವೆಸ್ಟ್ ಮೆಟಾವರ್ಸ್ ಎಡಿಷನ್ ಕೂಡ ಗೂಗಲ್ ಕ್ಲೌಡ್ನಲ್ಲಿ ರನ್ ಆಗಲಿದೆ.