ಯಕ್ಷಗಾನ, ಜಾನಪದ ಹಾಗೂ ಪಾರಂಪರಿಕ ಕಲೆಗಳು ನಮ್ಮ ನಾಡಿನ ಪ್ರತೀಕ
ಕಲ್ಪಶ್ರೀ ಕಲಾವಿದರ ಸಂಘದಿ0ದ ಸಾಂಸ್ಕೃತಿಕ ಸೌರಭ ಕರ‍್ಯಕ್ರಮ
ತಿಪಟೂರು:ನಮ್ಮ ಹಿಂದಿನ ಹಿರಿಯರ ತಲೆಮಾರಿನಿಂದ ಬಂದಿರುವ ಅನೇಕ ಕಲಾ ಪ್ರಕಾರಗಳು ಗ್ರಾಮೀಣ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾಣುತ್ತವೆ ದೂರದರ್ಶನ ಹಾಗೂ ಮೊಬೈಲ್ ಮುಂತಾದ ದೃಶ್ಯ ಮಾಧ್ಯಮಗಳ ಒಡೆತಕ್ಕೆ ಸಿಲುಕಿದ ಗ್ರಾಮೀಣಸೊಗಡಿನ ಭಜನೆ, ಸೋಬಾನೆ, ರಂಗಗೀತೆ ಮುಂತಾದ ಕಲಾ ಪ್ರಕಾರಗಳು ಇಂದಿನ ದಿನಮಾನಗಳಲ್ಲಿ ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ತಿಪಟೂರಿನ ಕಲ್ಪಶ್ರೀ ಕಲಾವಿದರ ಸಂಘವು ಈ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂತದ್ದಾಗಿದೆ ಎಂದು ಹಾಲ್ಕುರಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಮಹೇಶ್ ತಿಳಿಸಿದರು.
ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದ ಆಂಜನೇಯ ಸ್ವಾಮಿ ದೇವಾ ಲಯದಲ್ಲಿ ಹನುಮ ಜಯಂತಿಯ ಪ್ರಯುಕ್ತ ಕಲ್ಪಶ್ರೀ ಕಲಾವಿದರ ಸಂಘದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ೨೦೨೨ರ ಮೊದಲ ದಿನದ ಭಜನೆ ಹಾಗೂ ರಂಗಗೀತೆ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಕಲಾವಿದರು ಸಾಮಾನ್ಯ ವ್ಯಕ್ತಿಗಳಲ್ಲ ಕಲೆಯನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಸಮಾಜಕ್ಕೆ ಬದಲಾವಣೆಯ ಶಕ್ತಿ ತುಂಬುವ ದೊಡ್ಡ ವ್ಯಕ್ತಿಗಳಾಗಿದ್ದಾರೆ ಅವರನ್ನು ಗೌರವಿಸು ವುದು ನಮ್ಮೆಲ್ಲರ ಕರ್ತವ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಲ್ಪ ಶ್ರೀ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಟಿ ಎಚ್ಬಸವರಾಜು ತಿಪಟೂರು ತಾಲೂಕಿನ ಕಲ್ಪ ಶ್ರೀ ಕಲಾವಿದರ ಸಂಘದ ಎಲ್ಲ ಕಲಾವಿದರು ಹಾಗೂ ಸಾರ್ವಜನಿಕರ ಸಹಕಾರದಿಂದ ಪ್ರತಿ ವರ್ಷ ತಾಲೂಕಿನ ವಿವಿಧ ಭಾಗಗಳಲ್ಲಿ ಅನೇಕ ನಾಟಕ ರಂಗಗೀತೆ ಭಜನೆ ಮುಂತಾದ ಕಲಾಪ್ರಕಾರಗಳನ್ನು ಪ್ರದರ್ಶಿಸುತ್ತಾ ಬಂದಿದ್ದು ಮುಂದೆಯೂ ಎಲ್ಲರ ಸಹಕಾರದಿಂದ ಸಂಘವು ಮುನ್ನಡೆಯಲಿದೆ ಎಂದರು.
ಪ್ರಾಸ್ತಾನಿಕವಾಗಿ ಮಾತನಾಡಿದ ತಾಲೂಕು ಸಂಚಾಲಕ ಹಾಗೂ ಸಾಹಿತಿ ಸಾರ್ಥವಳ್ಳಿ ಶಿವಕುಮಾರ್ ಮಾತನಾಡುತ್ತಾ ಸಂಘವು ಕಳೆದ ೨೦ ವರ್ಷಗಳ ಹಿಂದೆ ಸ್ಥಾಪನೆಯಾಗಿ ತಾಲೂಕಿನಾದ್ಯ೦ತ ಅನೇಕ ಸದಸ್ಯರ ಒಳಗೊಂಡು ಎಲ್ಲರ ಸಹಕಾರದಿಂದ ಕಲೆಯ ಪ್ರದರ್ಶನನ್ನು ಮಾಡುತ್ತಾ ಜಿಲ್ಲೆಯಲ್ಲೆ ಉತ್ತಮ ಕಲಸಂಘವೆ0ದು ಹೆಸರು ಪಡೆದಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜು ಉಪಾಧ್ಯಕ್ಷ ಮಹಾಲಿಂಗಪ್ಪ, ಪದಾಧಿ ಕಾರಿಗಳಾದ ಆಲೂರು ಲೋಕೇಶ್, ಆದಿ ನಾಯಕನಹಳ್ಳಿ ರಮೇಶ್ ಹಿರಿಯ ಕಲಾವಿದದೆ ಶ್ರೀಮತಿ ಸುಮಿತ್ರಮ್ಮ, ಶ್ರೀಮತಿ ರಾಜೇಶ್ವರಿ, ಹಾರ್ಮೋನಿಯಂ ಮಾಸ್ಟರ್ ಶಂಕ್ರಪ್ಪ, ತಬಲ ಸಾತಿ ರಾಯಚಾರ್, ರಾಮಾಯಣ ಹಾಗೂ ಕುರುಕ್ಷೇತ್ರ ನಾಟಕದ ರಂಗಗೀತೆಗಳನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಜಯಮ್ಮ ಶ್ರೀ ಸೋಮಶೇಖರಯ್ಯ ಸೋಬಾನೆ ಕಲಾವಿದರಾದ ಶ್ರೀ ದೊಡ್ಡಮ್ಮ ರಾಜಣ್ಣ, ಮುಂತಾದವರಿದ್ದರು ಮಾರುತಿ ಭಜನಾ ಸಂಘದ ಗುರುಮೂರ್ತಿ ಷಡಕ್ಷರಿ, ಪಾಲಾರಯ್ಯ ಸಂಗಡಿಗರಿAದ ಭಜನಾ ಕಾರ್ಯಕ್ರಮ ನಡೆಯಿತು. ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತಾದಿಗಳು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
*
ಯಕ್ಷಗಾನ, ಜಾನಪದ, ಕೋಲಾಟ, ಸೋಬಾನೆ ಪದ, ಡೊಳ್ಳು ಕುಣಿತ, ಕಂಸಾಲೆ, ನಂದಿಧ್ವಜ ಕುಣಿತ, ಸುಗ್ಗಿಹಾಡು, ವೀರಗಾಸೆ, ಗೊರವರ ಕುಣಿತ, ಲಂಬಾಣಿ ನೃತ್ಯ ಇವುಗಳನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡೋಯ್ಯವುದು ಇಂದಿನ ಜನತೆಯ ಅದ್ಯ ಕರ್ತವ್ಯವಾಗಿದೆ.ಸಾರ್ಥವಳ್ಳಿ ಶಿವಕುಮಾರ್ ಸಂಚಾಲಕರು. ಕಲ್ಪಶ್ರೀ ಕಲಾ ತಂಡ