ಎಂಡಿ ಮತ್ತು ಸಿಇಒ ಆಗಿ ಇಟ್ಟಿರ ಡೇವಿಸ್ ಮರು ನೇಮಕ ಅನುಮೋದನೆ
ಆರ್‌ಬಿಐನಿಂದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌
ಬೆಂಗಳೂರು:ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಭಾರತೀಯ ರಿಜರ್ವ್ ಬ್ಯಾಂಕ್‌ನಿ0ದ ಇಟ್ಟಿರ ಡೇವಿಸ್ ಅವರನ್ನು ಜನವರಿ 14, 2023ರಿಂದ ಪ್ರಾರಂಭಿಸಿ ಎರಡು ವರ್ಷಗಳ ಅವಧಿಗೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಮರು ನೇಮಕ ಮಾಡಲಚಿÄ ಅನುಮೋದನೆ ಪಡೆದಿದೆ. ಉಜ್ಜೀವನ್ ಎಸ್‌ಎಫ್‌ಬಿ ಜನವರಿ 2025ರವರೆಗೆ ಅವರ ಮರು ನೇಮಕಕ್ಕೆ ಅನುಮತಿ ಕೋರಿತ್ತು.
ಅವರ ನಾಯಕತ್ವದಲ್ಲಿ ಬ್ಯಾಂಕ್ ಕಳೆದ ಕೆಲ ತ್ರೆöÊಮಾಸಿಕದಲ್ಲಿ ದಾಖಲೆ ಸಾಧನೆ ನೀಡಿದ್ದು ವಹಿವಾಟಿನ ಪ್ರಮಾಣಗಳು ಸದೃಢವಾಗಿವೆ ಮತ್ತು 2023ರ ದ್ವಿತೀಯ ತ್ರೆöÊಮಾಸಿಕದಲ್ಲಿ ರೂ.294 ಕೋಟಿಗಳ ಅತ್ಯಂತ ಹೆಚ್ಚಿನ ತ್ರೆöÊಮಾಸಿಕ ಲಾಭದತ್ತ ಮುನ್ನಡೆಸುವ ಮೂಲಕ ಸುಸ್ಥಿರ ಸುಧಾರಣೆ ತಂದಿದ್ದಾರೆ.
ಶ್ರೀ ಡೇವಿಸ್ ಮಾರ್ಚ್ 2015ರಿಂದಲೂ ಉಜ್ಜೀವನ್‌ನೊಂದಿಗೆ ಸಹಯೋಗ ಹೊಂದಿದ್ದಾರೆ. ಅವರು ಹೆಡ್ ಆಫ್ ಟ್ರಾನ್ಸಿಷನ್ ಆಗಿ ತಮ್ಮ ಪ್ರಮುಖ ಹುದ್ದೆಯಲ್ಲಿ ಮೈಕ್ರೊ ಫೈನಾನ್ಸ್ ಸಂಸ್ಥೆಯನ್ನು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿ ಪರಿವರ್ತಿಸಲು ಯಶಸ್ವಿ ಐಪಿಒ ಮೂಲಕ ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯುವ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಶ್ರೀ ಡೇವಿಸ್ ಉಜ್ಜೀವನ್ ಎಸ್‌ಎಫ್‌ಬಿಯನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಜನವರಿ 14, 2022ರಂದು ಜವಾಬ್ದಾರಿ ತೆಗೆದುಕೊಂಡರು ಮತ್ತು ಬ್ಯಾಂಕ್ ಅನ್ನು ಲಾಭದಾಯಕತೆಗೆ ಮರಳಿಸಲು ಪ್ರಗತಿಯ ಯೋಜನೆ ರೂಪಿಸಿದರು. ಕೋವಿಡ್‌ನಿಂದ ನಿರ್ಮಾಣವಾದ ಒತ್ತಡದ ಸವಾಲುಗಳನ್ನು ಎದುರಿಸುವಲ್ಲಿ, ಅವರು ಸಂಗ್ರಹದ ದಕ್ಷತೆಗಳು, ಉದ್ಯಮ ಪ್ರಮಾಣದ ಮರು ನಿರ್ಮಾಣ, ಸಂಪತ್ತಿನ ಗುಣಮಟ್ಟ ಸುಧಾರಣೆ, ನಾಯಕತ್ವ ತಂಡದ ಸದೃಢತೆ ಮತ್ತು ಒಟ್ಟಾರೆ ಸಕಾರಾತ್ಮಕ ಪರಿಸರ ತರುವ ಕಾರ್ಯತಂತ್ರಕ್ಕೆ ಹೆಚ್ಚು ಆದ್ಯತೆ ನೀಡಿದರು. ಇದರಿಂದ ಸುಧಾರಿತ ಲಾಭದಾಯಕತೆ ತಂದಿದ್ದು ಬ್ಯಾಂಕ್ ಅನ್ನು ಸ್ಥಿರವಾದ ಪ್ರಗತಿಯತ್ತ ಕೊಂಡೊಯ್ಯಿತು.
ಈ ಸಂದರ್ಭ ಕುರಿತು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಅಧ್ಯಕ್ಷ ಶ್ರೀ ಬಿ.ಎ.ಪ್ರಭಾಕರ್, ”ಇಟ್ಟಿರ ಡೇವಿಸ್ ಅವರನ್ನು ಎಂ.ಡಿ ಮತ್ತು ಸಿಇಒ ಆಗಿ ಮರು ನೇಮಕ ಮಾಡಲು ನಮಗೆ ಬಹಳ ಸಂತೋಷವಾಗಿದೆ. ಅವರು ದಾಖಲೆಯ ಸಮಯದಲ್ಲಿ ಬ್ಯಾಂಕ್ ಅನ್ನು ಪರಿವರ್ತಿಸಲು ಮತ್ತು ಬ್ಯಾಂಕ್ ಅನ್ನು ಸದೃಢ ಭವಿಷ್ಯದತ್ತ ಕೊಂಡೊಯ್ಯುವಲ್ಲಿ ವೇಗವರ್ಧಕವಾಗಿ ಕೆಲಸ ಮಾಡಿದ್ದಾರೆ. ಅವರು ವಿಸ್ತಾರ ಜಾಗತಿಕ ಬ್ಯಾಂಕಿAಗ್ ಅನುಭವ ಹೊಂದಿರುವ ಅಸಾಧಾರಣ ನಾಯಕರಾಗಿದ್ದಾರೆ ಮತ್ತು ಹೆಚ್ಚು ಯಶಸ್ಸು ಮತ್ತು ವೈಭವವನ್ನು ಅವರ ವಿವೇಕಯುತ ಮಾರ್ಗದರ್ಶನದ ಮೂಲಕ ಹೊಂದಲು ಎದುರು ನೋಡುತ್ತಿದ್ದೇವೆ” ಎಂದರು.
ಶ್ರೀ ಇಟ್ಟಿರ ಡೇವಿಸ್ ಅವರು ಭಾರತ, ಮಧ್ಯ ಪ್ರಾಚ್ಯ ಮತ್ತು ಯೂರೋಪ್‌ಗಳಲ್ಲಿ 40 ವರ್ಷಗಳ ಅನುಭವ ಹೊಂದಿದ್ದಾರೆ. ಉಜ್ಜೀವನ್‌ಗೆ ಮುನ್ನ ಶ್ರೀ ಡೇವಿಸ್ ಲಂಡನ್‌ನ ಯೂರೋಪ್ ಅರಬ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರು ಅರಬ್ ಬ್ಯಾಂಕ್ ಪಿಎಲ್‌ಸಿ, ಬಹರೇನ್ ಅಂಡ್ ಸಿಟಿ ಬ್ಯಾಂಕ್, ಭಾರತ ಇಲ್ಲಿ ನಾಯಕತ್ವ ಸ್ಥಾನಗಳನ್ನು ಹೊಂದಿದ್ದರು. ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್(ಐಐಎ0-ಎ) ಅಲುಮ್ನಸ್ ಆಗಿದ್ದಾರೆ.