ಥೈಲ್ಯಾಂಡ್‌ನಲ್ಲಿ ರೇಸಿಂಗ್‌ನಲ್ಲಿ ಪಾಲ್ಗೊಳ್ಳಲು ರೂಕಿ ರೇಸಿಂಗ್ – ಟೊಯೊಮಾ ಮೋಟಾರ್ ಕಾರ್ಪೊರೇಶನ್ ಘೋಷಣೆ
ಬೆಂಗಳೂರು:ರೂಕಿ ರೇಸಿಂಗ್ ಕಂಪನಿ ಲಿಮಿಟೆಡ್ ಈ ವರ್ಷದ ಡಿಸೆಂಬರ್ 17ರಿಂದ 18ರವರೆಗೆ ಥೈಲ್ಯಾಂಡ್ ದೇಶದ ಚಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ  1500 ಸೂಪರ್ ಎಂಡ್ಯೂರೆನ್ಸ್ 2022 (ಥೈಲ್ಯಾಂಡ್ 25H ಎಂಡ್ಯೂರೆನ್ಸ್ ರೇಸ್) ನಲ್ಲಿ ಸ್ಪರ್ಧಿಸುವುದಾಗಿ ( ) ಮತ್ತು ಟೊಯೋಟಾ ಮೋಟಾರ್ ಕಾರ್ಪೊರೇಷನ್ (ಟೊಯೋಟಾ)ಘೋಷಿಸಿವೆ.
ಈ ಕಂಪನಿಗಳು     H2 ಪರಿಕಲ್ಪನೆಯಾಗಿರುವ ಹೈಡ್ರೋಜನ್ ಎಂಜಿನ್ ವಾಹನ ಮತ್ತು   GR86  ಪರಿಕಲ್ಪನೆಯಾಗಿರುವ ಕಾರ್ಬನ್-ನ್ಯೂಟ್ರಲ್ ಇಂಧನ ವಾಹನದೊಂದಿಗೆ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಈ ಪಾಲ್ಗೊಳ್ಳುವಿಕೆಯು ಪೂರ್ಣ 25 ಗಂಟೆಗಳ ಅವಧಿಗೆ ಇರುವುದಿಲ್ಲ. ಓಟದ ಆರಂಭದ ಮತ್ತು ಕೊನೆಯ ಕೆಲವು ಗಂಟೆಗಳಿಗೆ ಸೀಮಿತವಾಗಿರುತ್ತದೆ. ಎರಡೂ ವಾಹನಗಳು ಜಪಾನ್‌ ದೇಶದಿಂದ ಹೊರಗೆ ಇದೇ ಮೊದಲ ಬಾರಿಗೆ ರೇಸ್ ಒಂದರಲ್ಲಿ ಸ್ಪರ್ಧಿಸುತ್ತಿವೆ.
ಇದರ ಜೊತೆಗೆ, ಥೈಲ್ಯಾಂಡ್‌ನ ಟೊಯೊಟಾ ಗಝೂ ರೇಸಿಂಗ್‌ನ ಒಂದು ತಂಡದ ವಾಹನಗಳು ಇಂಗಾಲ-ತಟಸ್ಥ ಇಂಧನದಲ್ಲಿ ಚಲಿಸಲಿದೆ. ಥೈಲ್ಯಾಂಡ್ 25H ಎಂಡ್ಯೂರೆನ್ಸ್ ರೇಸ್‌ನಲ್ಲಿ ಭಾಗವಹಿಸುವುದರಿಂದ ಆರಂಭಿಸಿ ರೂಕಿ ರೇಸಿಂಗ್ ಮತ್ತು ಟೊಯೊ ಟಾ ಕಂಪನಿಗಳು, ಮೋಟಾರ್‌ ಸ್ಪೋರ್ಟ್‌ಗಳ ಮೂಲಕ ಏಷ್ಯಾದಲ್ಲಿ ಇಂಗಾಲ-ತಟಸ್ಥ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ತ್ವರಿತಗೊಳಿಸಲು ನಿರಂತರವಾಗಿ ಶ್ರಮಿಸುತ್ತದೆ.
ರೂಕಿ ರೇಸಿಂಗ್ ಮತ್ತು ಟೊಯೊಟಾ 2021ರ ಋತುವಿನ ಮಧ್ಯದಲ್ಲಿ ಜಪಾನ್‌ನಲ್ಲಿ ಹೈಡ್ರೋಜನ್-ಚಾಲಿತ ಕೊರೊಲ್ಲಾ ದೊಂದಿಗೆ ಸೂಪರ್ ಟೈಕ್ಯೂ ಸರಣಿಯಲ್ಲಿ ಭಾಗವಹಿಸಿ, ಇಂಗಾಲ-ತಟಸ್ಥ ಸಮಾಜವನ್ನು ಸಾಧಿಸುವ ಗುರಿಯೊಂದಿಗೆ ಉದ್ಯಮದ ಒಳಗಿನ ಹಾಗೂ ಹೊರಗಿನ ಸಮಾನ ಮನಸ್ಕರೊಂದಿಗೆ ಸಹಯೋಗದಲ್ಲಿ “ಉತ್ಪಾದನೆ”, “ಸಾರಿಗೆ” ಮತ್ತು “ಬಳಕೆ”ಯ ಪ್ರಯತ್ನ ಗಳನ್ನು ತ್ವರಿತಗೊಳಿಸಿತು.
2022ರ ಋತುವಿನಿಂದ, ಹೈಡ್ರೋಜನ್ ಎಂಜಿನ್ ಕೊರೊಲ್ಲಾ ಜೊತೆಗೆ, ರೂಕಿ ರೇಸಿಂಗ್ ಮತ್ತು ಟೊಯೋಟಾ ಕಂಪನಿಗಳು ರೇಸಿಂಗ್‌ನಲ್ಲಿ GR86 ಸಿಂಥೆಟಿಕ್ ಇಂಧನವನ್ನು ಬಳಸುತ್ತಿವೆ ಮತ್ತು ಆಂತರಿಕ ದಹನಕಾರಿ ಎಂಜಿನ್‌ಗಳ ಬಳಕೆಯನ್ನು ಒಳಗೊಂಡಂತೆ ಕ್ಲೀನ್ ಎನರ್ಜಿ ಆಯ್ಕೆಗಳನ್ನು ವಿಸ್ತರಿಸುವ ಸವಾಲನ್ನು ಸ್ವೀಕರಿಸಿವೆ.
ಟೊಯೊಟಾ ಮೋಟಾರ್ ಕಾರ್ಪೊರೇಶನ್‌ ಅಧ್ಯಕ್ಷ ಅಕಿಯೊ ಟೊಯೊಡಾ ಅವರು “ಮೊರಿಜೊ” ಎಂಬ ಚಾಲಕನ ಹೆಸರಿನಲ್ಲಿ ಭಾಗವಹಿಸುತ್ತಿರುವ ರೂಕಿ ರೇಸಿಂಗ್‌ನ ಸಂಸ್ಥಾಪಕರೂ, ತಂಡದ ಮಾಲೀಕರೂ ಆಗಿದ್ದಾರೆ.
ಆಗಸ್ಟ್‌ ತಿಂಗಳಲ್ಲಿ ವೈಪ್ರೆಸ್‌ನಲ್ಲಿ ನಡೆದ ವಿಶ್ವ ರ‍್ಯಾಲಿ ಚಾಂಪಿಯನ್‌ಶಿಪ್ () ನ ಒಂಬತ್ತನೇ ಸುತ್ತಿನಲ್ಲಿ ಮತ್ತು ನವೆಂಬರ್‌ ನಲ್ಲಿ ಜಪಾನ್‌ನಲ್ಲಿ ನಡೆದ  ಯ 13ನೇ ಸುತ್ತಿನಲ್ಲಿ, ರೂಕಿ ರೇಸಿಂಗ್ ಮತ್ತು ಟೊಯೋಟಾ ಪರೀಕ್ಷಾ ಅಭಿವೃದ್ಧಿಯ ಅಡಿಯಲ್ಲಿ  ಯಾರಿಸ್ H2 ಹೈಡ್ರೋಜನ್ ಎಂಜಿನ್ ವಾಹನದ ಪ್ರದರ್ಶನ ನಡೆಸಲಾಯಿತು. ರ‍್ಯಾಲಿಯ ಕಠಿಣ ಪರಿಸ್ಥಿತಿಗಳಲ್ಲಿ ಇಂಗಾಲ-ತಟಸ್ಥತೆಯನ್ನು ಸಾಧಿಸಲು ಕಾರ್ಯಸಾಧ್ಯ ಆಯ್ಕೆಯಾಗಿ ಹೈಡ್ರೋಜನ್ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಇದು ಹೊಂದಿತ್ತು. ಮೋರಿಜೊ ಅವರ ಚಾಲನಾ ದಕ್ಷತೆಯು ವಾಹನದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ರುಜುವಾತು ಪಡಿಸಿತು.
ಈಗ ಪ್ರದರ್ಶನವು ಏಷ್ಯಾ ಖಂಡಕ್ಕೆ ವಿಸ್ತರಿಸುತ್ತಿದೆ. ಥೈಲ್ಯಾಂಡ್‌ನ ಪ್ರಮುಖ ಅಂತಾರಾಷ್ಟ್ರೀಯ ಸರ್ಕ್ಯೂಟ್‌ಗಳಲ್ಲಿ ಚಾಂಗ್ ಇಂಟರ್‌ನ್ಯಾಶನಲ್ ಕೂಡ ಒಂದು. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಮೋಟಾರ್ ಸೈಕಲ್ ರೇಸಿಂಗ್ ಸರಣಿ ಥೈಲ್ಯಾಂಡ್ ಮೋಟೋಜಿಪಿ ( ) ಯನ್ನು ಆಯೋಜಿಸುತ್ತದೆ. 2014ರಲ್ಲಿ ಸರ್ಕ್ಯೂಟ್ ಪ್ರಾರಂಭವಾದಾಗಿನಿಂದ, ಟೊಯೋಟಾ ಮೋಟಾರ್ ಥೈಲ್ಯಾಂಡ್ ಕಂಪನಿ ಲಿಮಿಟೆಡ್ ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, ಥೈಲ್ಯಾಂಡ್‌ನಲ್ಲಿ ಒನ್-ಮೇಕ್ ರೇಸ್‌ಗಳನ್ನು ಆಯೋಜಿಸುವ ಮೂಲಕ ಮೋಟಾರ್‌ಸ್ಪೋರ್ಟ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸಿದೆ.
ಸರ್ಕ್ಯೂಟ್ ರೇಸಿಂಗ್‌ನಲ್ಲಿ ಮೊದಲ ಪ್ರವೇಶ ಪಡೆದಿದ್ದ ರೂಕಿ ರೇಸಿಂಗ್, 10-ಗಂಟೆಗಳ “ 600 ಸೂಪರ್ ಎಂಡ್ಯೂ ರೆನ್ಸ್ 2019” ಅನ್ನು ಗೆದ್ದುಕೊಂಡಿತು. ಈ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೂಕಿ ರೇಸಿಂಗ್ ಮತ್ತು ಟೊಯೊಟಾದ ಕಾರುಗಳನ್ನು ಜಪಾನ್‌ಗಿಂತ ವಿಭಿನ್ನವಾದ ಪರಿಸರದಲ್ಲಿ ಪರೀಕ್ಷಿಸಲಾಗುವುದು. ಜಗತ್ತಿನೆಲ್ಲೆಡೆ ಇಂಗಾಲ-ತಟಸ್ಥ ಸಮಾಜವನ್ನು ರಚಿಸುವತ್ತ ತಂತ್ರಜ್ಞಾನದ ಆಯ್ಕೆಗಳನ್ನು ವಿಸ್ತರಿಸುವ ಪ್ರಯತ್ನಗಳನ್ನು ತ್ವರಿತಗೊಳಿಸುತ್ತದೆ.
2050ರ ವೇಳೆಗೆ ಜಾಗತಿಕವಾಗಿ ಪ್ರಾಯೋಗಿಕ ಮತ್ತು ಸಮರ್ಥನೀಯ ರೀತಿಯಲ್ಲಿ ಇಂಗಾಲ-ತಟಸ್ಥತೆಗೆ ಟೊಯೋಟಾ ಬದ್ಧವಾಗಿದೆ. ಎಲ್ಲರಿಗೂ ಮೊಬಿಲಿಟಿಯನ್ನು ತಲುಪಿಸುವ ಮೂಲಕ ಏಷ್ಯಾದಲ್ಲಿ ತನ್ನ ಪ್ರಯತ್ನಗಳಿಗಾಗಿ ಪೂರ್ಣ ರೀತಿಯಲ್ಲಿ ಸಿದ್ಧವಾಗಿದೆ.
ಹೈಬ್ರಿಡ್ ಎಲೆಕ್ಟ್ರಿಕ್, ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್, ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಇಂಧನ ಸೆಲ್ ಎಲೆಕ್ಟ್ರಿಕ್ ವಾಹನಗಳನ್ನು ಒಳಗೊಂಡಂತೆ ಇಂಗಾಲ-ತಟಸ್ಥ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಆಯ್ಕೆಗಳನ್ನು ಗ್ರಾಹಕರಿಗೆ ವಿಸ್ತರಿಸಲು ಟೊಯೋಟಾ ಕಂಪನಿಯು ಏಷ್ಯಾದ ಮಾರುಕಟ್ಟೆಗಳಿಗೆ ವಿದ್ಯುತ್-ಚಾಲಿತ ವಾಹನಗಳ ಸಂಪೂರ್ಣ ಶ್ರೇಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ಹೊರತರುತ್ತಿದೆ. ಇದು ಗ್ರಾಹಕರ ವೈವಿಧ್ಯಮಯ ಆರ್ಥಿಕ ವಾಸ್ತವತೆ ಗಳು, ಲಭ್ಯವಿರುವ ಇಂಧನ ಮೂಲಗಳು, ಚಾರ್ಜಿಂಗ್ ಮೂಲಸೌಕರ್ಯ ಸಿದ್ಧತೆ, ಕೈಗಾರಿಕಾ ನೀತಿಗಳು ಮತ್ತು ಪ್ರತಿ ದೇಶದಲ್ಲಿ ವಿವಿಧ ಗ್ರಾಹಕರ ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ಆಯ್ಕೆಗಳನ್ನು ಒದಗಿಸುತ್ತದೆ.
ಪ್ರಮಾಣ ಮತ್ತು ವೇಗದಲ್ಲಿ ಪ್ರವೇಶಿಸಬಹುದಾದ ವಿದ್ಯುದೀಕರಣವನ್ನು ಸಾಧಿಸಲು ಈ ವಿಧಾನವು ಸಹಾಯ ಮಾಡುತ್ತದೆ, ಇಂಗಾಲ-ತಟಸ್ಥತೆ, ವಾಯು ಗುಣಮಟ್ಟ ಸುಧಾರಣೆ, ತೈಲ ಆಮದು ಕಡಿತ, ಕೈಗಾರಿಕಾ ಅಭಿವೃದ್ಧಿ ಮತ್ತು ಸುಸ್ಥಿರ ಉದ್ಯೋಗ ಸೇರಿದಂತೆ ಪ್ರತಿ ದೇಶದ ಆದ್ಯತೆಯ ರಾಷ್ಟ್ರೀಯ ಉದ್ದೇಶಗಳನ್ನು ಬೆಂಬಲಿಸುತ್ತದೆ ಮತ್ತು ವಾಸ್ತವಿಕ ಚಲನಶೀಲತೆ ಪರಿಹಾರ ಗಳನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಟೊಯೊಟಾ “ಎಲ್ಲರಿಗೂ ಚಲನಶೀಲತೆ” ಎಂಬ ಪ್ರಾಥಮಿಕ ತತ್ತ್ವಗಳ ಆಧಾರದಲ್ಲಿ ಇಂಗಾಲ-ತಟಸ್ಥತೆಯ ನಿಟ್ಟಿನಲ್ಲಿ, “ಯಾರೊಬ್ಬರೂ ಬಾಕಿ ಉಳಿಯದಂತೆ” ಕೆಲಸ ಮಾಡುವ ಗುರಿಯನ್ನು ಹೊಂದಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಭಾರತ) ನ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ತಮ್ಮ ವಿಚಾರಗಳನ್ನು ಹಂಚಿಕೊಂಡು, “ಜಾಗತಿಕವಾಗಿ, ಟೊಯೊಟಾ ಸುಸ್ಥಿರ ಸಮುದಾಯ ನಿರ್ಮಿಸಲು ಸತತವಾಗಿ ಶ್ರಮಿಸುತ್ತಿದೆ. ವಿದ್ಯುದ್ದೀಕೃತ ವಾಹನಗಳೊಂದಿಗೆ ಮುನ್ನಡೆದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿದೆ. ಪ್ರತಿ ಮಾರುಕಟ್ಟೆಯ ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನಗಳ ಕೊಡುಗೆಗಳನ್ನು ನೀಡುತ್ತಿದೆ.
ಭಾರತದಲ್ಲಿ, ಸ್ವಚ್ಛ ಮತ್ತು ಹಸಿರು ಉತ್ಪನ್ನಗಳು ಮತ್ತು ನಮ್ಮೆಲ್ಲ ಉತ್ಪಾದನಾ ಚಟುವಟಿಕೆಗಳನ್ನು ಪರಿಸರಸ್ನೇಹಿಯಾಗಿ ಮಾಡಿ, ‘ಇಂಗಾಲ-ತಟಸ್ಥ ಸಮಾಜ’ವನ್ನು ಸಾಕಾರಗೊಳಿಸುವ ದೃಷ್ಟಿಯನ್ನು ನಾವು ಹೊಂದಿದ್ದೇವೆ. ಗ್ಲೋಬಲ್ ಟೊಯೋಟಾ ಚಾಲೆಂಜ್ 3 – ಪ್ಲಾಂಟ್ ಝೀರೋ CO2 ಅನ್ನು ಸಾಧಿಸುವ ಗುರಿಯನ್ನು 2050ರಿಂದ 2035ಕ್ಕೆ ಪರಿಷ್ಕರಿಸಿದೆ. ಈ ಪಯಣದ ಭಾಗವಾಗಿ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ () ಘಟಕದಲ್ಲಿ ಗ್ರಿಡ್ ವಿದ್ಯುತ್‌ಗಾಗಿ 100% ನವೀಕರಿಸಬಹುದಾದ ಶಕ್ತಿಯನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ.
ಇದಲ್ಲದೆ, ಸಿಹಿನೀರಿನ ಬಳಕೆಯಲ್ಲಿ ಮಿತವ್ಯಯ, ವಿದ್ಯುದೀಕರಿಸಿದ ಚಲನಶೀಲತೆ ಪರಿಹಾರಗಳು, ಅರಣ್ಯೀಕರಣ, ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣೆ, ಪರ್ಯಾಯ ಇಂಧನ ಆಧಾರಿತ ವಾಹನ ತಂತ್ರಜ್ಞಾನದ ಪ್ರಾಯೋಗಿಕ ಯೋಜನೆಗಳನ್ನು ಕೈಗೊ ಳ್ಳುವ ಮೂಲಕ ಆರು ಜಾಗತಿಕ ಪರಿಸರ ಸವಾಲುಗಳ ಸಾಕ್ಷಾತ್ಕಾರಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವುದನ್ನು (ಉದಾಹರಣೆಗೆ ಎಥೆನಾಲ್) ಟೊಯೊಟಾ ಮುಂದುವರಿಸುತ್ತದೆ.
ಉತ್ಪನ್ನದ ವಿಚಾರದಲ್ಲಿ,  ನಲ್ಲಿ, ಸರ್ಕಾರದ “ಮೇಕ್ ಇನ್ ಇಂಡಿಯಾ” ಉಪಕ್ರಮದೊಂದಿಗೆ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರಚಿಸುವ ಮೂಲಕ ಸಾಮೂಹಿಕ ವಿದ್ಯುದೀಕರಣ ಮತ್ತು ಪರ್ಯಾಯ ಇಂಧನಗಳ ಉತ್ತೇಜನಕ್ಕೆ ಒತ್ತು ನೀಡುತ್ತ ಅತ್ಯಂತ ಪ್ರಾಯೋಗಿಕ ಮತ್ತು ವಾಸ್ತವಿಕವಾದ ಚಲನಶೀಲತೆಯ ಆಯ್ಕೆಗಳನ್ನು ಒದಗಿಸುವತ್ತ ನಾವು ಗಮನ ಹರಿಸಿದ್ದೇವೆ. ಇದು ನಮ್ಮ ಕಾರ್ಯಪಡೆ ಮತ್ತು ಭಾರತೀಯ ಯುವಕರ ನಿರಂತರ ಕೌಶಲ್ಯದ ಉನ್ನತೀಕರಣಕ್ಕಾಗಿ ವಿವಿಧ ಕೌಶಲ್ಯ ಉಪಕ್ರಮಗಳ ವರ್ಧನೆಯನ್ನು ಒಳಗೊಂಡಿರುತ್ತದೆ, ಭಾರತದ ಕೌಶಲ್ಯ ಮಿಷನ್ ಅಡಿಯಲ್ಲಿ ಉದ್ಯೋಗ ಒದಗಿಸುತ್ತದೆ.
ವಿದ್ಯುದೀಕರಣ ತಂತ್ರಜ್ಞಾನದಲ್ಲಿ ಪ್ರವರ್ತಕರಾಗಿರುವ ನಮ್ಮ ನೀತಿಯು ಸುಸ್ಥಿರ ಚಲನಶೀಲತೆ ಪರಿಹಾರಗಳತ್ತ ವೇಗವಾಗಿ ಬದಲಾಗುತ್ತಿದೆ ಮತ್ತು ತಾನಾಗಿ ಚಾರ್ಜ್ ಆಗುವ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು – ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನ್ನೋವಾ ಹೈಕ್ರಾಸ್ ಮೂಲಕ ವಿದ್ಯುದೀಕೃತ ವಾಹನ ತಂತ್ರಜ್ಞಾನವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ. ಇದು ಗ್ರಾಹಕರ ಅಗತ್ಯಗಳು, ಸ್ಥಳೀಯ ಮೂಲಸೌಕರ್ಯ ಮತ್ತು ದೇಶದ ಶಕ್ತಿಯನ್ನು ಉತ್ತಮವಾಗಿ ಪೂರೈಸುತ್ತದೆ” ಎಂದರು.
ರೂಕಿ ರೇಸಿಂಗ್ ಮತ್ತು ಬುರಿರಾಮ್ ರೇಸ್‌ನಲ್ಲಿ ಟೊಯೋಟಾ ಭಾಗವಹಿಸುವಿಕೆಯು, ಹೈಡ್ರೋಜನ್ ಎಂಜಿನ್ ಮತ್ತು ಸಿಂಥೆಟಿಕ್ ಇಂಧನ ವಾಹನಗಳ ಹೊಸ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ. ಜೊತೆಗೆ, ಮೋಟಾರ್‌ಸ್ಪೋರ್ಟ್‌ಗಳ ಮೂಲಕ ಏಷ್ಯಾಕ್ಕೆ ಇಂಗಾಲದ ತಟಸ್ಥ ಚಲನಶೀಲತೆಯ ಆಯ್ಕೆಗಳ ಅಭಿವೃದ್ಧಿಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ತ್ವರಿತಗೊಳಿಸಲು ಟೊಯೊಟಾದ ಬದ್ಧತೆಯನ್ನು ಗಟ್ಟಿಗೊಳಿಸುತ್ತದೆ.