ಸಕ್ಕರೆ ಕಾಯಿಲೆಯಲ್ಲಿ ರೋಗದ ಲಕ್ಷಣಗಳು ಕಂಡುಬರುವುದಿಲ್ಲ
ಮಧುಗಿರಿ:ಸಕ್ಕರೆ ಕಾಯಿಲೆಯಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬರುವುದಿಲ್ಲ ಎಂದು ಪಾವನ ಆಸ್ಪತ್ರೆಯ ವೈದ್ಯ ಹೃದೋಗ ತಜ್ಞ ಡಾ. ಮುರುಳಿಧರ್ ಬೆಲ್ಲದಮಡು ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮದಕರಿ ನಾಯಕ ಉದ್ಯಾನವನದಲ್ಲಿ ತುಮಕೂರಿನ ಪಾವನ ಆಸ್ಪತ್ರೆ ವತಿ ಯಿಂದ ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ರವರ ಸ್ಮರಣಾರ್ಥವಾಗಿ ತಾಲೂಕಿನ ನಾಗರೀಕರಿಗೆ ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಶಿಬಿರವನ್ನು ಸಕ್ಕರೆ ಕಾಯಿಲೆ ಮತ್ತು ಹೃದೋಗ ತಜ್ಞ ಡಾ.ಮುರಳೀಧರ ಬೆಲ್ಲದಮಡು ಉದ್ಘಾಟಿಸಿ ಮಾತನಾ ಡಿದ ಅವರು ಸಕ್ಕರೆ ಕಾಯಿಲೆಯಲ್ಲಿ ಯಾವುದೇ ರೋಗಲಕ್ಷಣಗಳು ಕಾಣುವುದಿಲ್ಲ.
ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೆ ವಾಸಿಯಾಗುವುದಿಲ್ಲ ಈ ಕಾಯಿಲೆಯಿಂದ ಕಣ್ಣು ಕಿಡ್ನಿ ನರಗಳಿಗೆ ಸ್ಟ್ರೋಕ್ ತಗಲುವ ಸಂಭವ ಇರುತ್ತದೆ ಈ ಕಾಯಿಲೆ ಬಂದಮೇಲೆ ಚಿಕಿತ್ಸೆ ತುಂಬಾ ದುಬಾರಿಯಾಗುತ್ತದೆ ಎನ್ನುವ ಉದ್ದೇಶದಿಂದ ನಮ್ಮ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು ನಾಗರೀಕರು ಶಿಬಿರದ ಅನುಕೂಲ ಗಳನ್ನು ಪಡೆಯುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.
ಪಟ್ಟಣದ ನಾಗರೀಕರಿಗೆ ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರೋಗ್ಯ ತಪಾಸಣೆಯ ಜೊತೆಗೆ ಉಚಿತವಾಗಿ ಔಷಧಿಗಳನ್ನು ಸಹ ವಿತರಿಸ ಲಾಯಿತು.
ಶಿಬಿರದಲ್ಲಿ ಸ್ತ್ರೀ ರೋಗ ಪ್ರಸೂತಿ ಮತ್ತು ಗರ್ಭಧಾರಣ ತಜ್ಞರಾದ ಡಾ. ಪಾವನ, ವೈದ್ಯ ಆಸ್ರಯೇಶ, ವಕೀಲ ಬೆಲ್ಲದಮಡು ಶಿವ ಕುಮಾರ್, ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.