ಮಹಿಳೆಯರನ್ನ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದ್ದು ಸಂವಿಧಾನ
ಮಧುಗಿರಿ:ನಾಲ್ಕು ಗೋಡೆಗಳ ನಡುವೆ ಬದುಕುತ್ತಿದ್ದ ಮಹಿಳೆಯರನ್ನ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದ್ದು ಅಂಬೇಡ್ಕರ್ ರವರ ಸಂವಿಧಾನ ಎಂದು ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸಾಹಿತಿ ಹನುರಾಜ್ ತಿಳಿಸಿದರು.
ಮಧುಗಿರಿ ಪಟ್ಟಣದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಹಾಸ್ಟಲ್ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಸಾಹಿತಿ ಹನುರಾಜ್ ಭಾಗವಹಿಸಿ ಮಾತನಾಡಿದ ಅವರು ನಾಲ್ಕು ಗೋಡೆಗಳ ಮಧ್ಯ ಬದುಕುತ್ತಿದ್ದ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದ್ದು ಅಂಬೇಡ್ಕರ್ ರವರ ಸಂವಿಧಾನ ಇಂದು ನಿಮ್ಮ ಶಿಕ್ಷಣದ ಜೊತೆಯಲ್ಲಿ ಸಂವಿಧಾನದ ಆಶಯಗಳನ್ನು ಅರಿಯಬೇಕಿದೆ ಯಾಕೆಂದರೆ ಸಂವಿಧಾನ ಓದಿದರೆ ಮಾತ್ರ ನಿಮಗೆ ಅದರೊಳಗಿನ ಹಕ್ಕು ಮತ್ತು ಸ್ವಾತಂತ್ರ‍್ಯ ತಿಳಿಯುತ್ತದೆ.
ಬಾಬಾ ಸಾಹೇಬರು ಮಹಿಳೆಯರಿಗಾಗಿ ಮೊದಲಿನಿಂದಲೂ ಹೋರಾಟಗಳನ್ನು ಮಾಡಿಕೊಂಡು ಬಂದವರು ಅವರಿಗೆ ಸಂವಿಧಾನ ರಚಿಸುವ ಅವಕಾಶ ಒಲಿದ ವೇಳೆ ಮಹಿಳೆಯರಿಗಾಗಿ ವಿಶೇಷವಾದ ಕಾನೂನು, ಹಕ್ಕು ಮತ್ತು ಸ್ವಾತಂತ್ರಗಳನ್ನು ನೀಡಿಹೋದರು ಪುರಾಣ ಕಥೆಗಳಲ್ಲಿ ದ್ರೌಪದಿಯನ್ನು ಅವಮಾನಿಸಿದ ಕಥೆ ನಿಮಗೆಲ್ಲರಿಗೂ ತಿಳಿದಿರಬಹುದು ಆದರೆ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದಲ್ಲಿ ಇಂದು ದ್ರೌಪದಿ ಎನ್ನುವ ಮಹಿಳೆ ರಾಷ್ಟ್ರಪತಿ ಹುದ್ದೆಗೇರುವ ಮೂಲಕ ಮಹಿಳೆಯರಿಗೆ ಗೌರವ ಸಿಕ್ಕಿದೆ ಎಂದರೆ ಅದಕ್ಕೆ ಕಾರಣ ಅಂಬೇಡ್ಕರ್ ರವರ ಸಂವಿಧಾನ ಎಂದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಯರಾಮಯ್ಯ, ಕಚೇರಿ ಸಹಾಯಕ ಓಬಳೇಶ್, ನಿಲಯ ಪಾಲಕಿ ಲಕ್ಷ್ಮಿ, ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.